ಮಂಗಳೂರು: ಅಘ್ಫಾನಿಸ್ತಾನ ತಾಲಿಬಾನಿಗಳ ವಶವಾಗುತ್ತಿದ್ದಂತೆ ಎಲ್ಲೆಡೆ ಇರುವ ಅಪ್ಘಾನಿ ಪ್ರಜೆಗಳಲ್ಲಿ ಆತಂಕ ಮನೆ ಮಾಡಿದೆ. ಮಂಗಳೂರಲ್ಲಿ ಅಧ್ಯಯನ ಮಾಡುತ್ತಿರುವ ಅಫ್ಘಾನಿಸ್ತಾನದ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ನಗರ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿದ್ದಾರೆ.
ಈ ವಿಚಾರವನ್ನು ಸ್ವತಃ ಪೊಲೀಸ್ ಕಮಿಷನರ್ ಶಶಿಕುಮಾರ್.ಎನ್ ಅವರೇ ಟ್ವಿಟ್ ಮೂಲಕ ದೃಢಪಡಿಸಿದ್ದಾರೆ. 'ಮಂಗಳೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆ ಹಿನ್ನೆಲೆಯಲ್ಲಿ ನನ್ನ ಕಚೇರಿಗೆ ಭೇಟಿ ನೀಡಿದರು. ಇಲ್ಲಿರುವ ಅಫ್ಘನ್ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಲಾಯಿತು' ಎಂದು ಟ್ವೀಟ್ ಮಾಡಿದ್ದಾರೆ.
-
ಮಂಗಳೂರಿನಲ್ಲಿ ಓದುತ್ತಿರುವ ಅಫ್ಘಾನಿಸ್ತಾನ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನನ್ನ ಕಚೇರಿಗೆ ಭೇಟಿ ನೀಡಿದರು. ಅವರ ಸುರಕ್ಷತೆಗಾಗಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಲಾಗಿರುತ್ತದೆ. pic.twitter.com/Ojxw86A62B
— Shashi Kumar N cp mangalore (@ShashiK85532199) August 19, 2021 " class="align-text-top noRightClick twitterSection" data="
">ಮಂಗಳೂರಿನಲ್ಲಿ ಓದುತ್ತಿರುವ ಅಫ್ಘಾನಿಸ್ತಾನ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನನ್ನ ಕಚೇರಿಗೆ ಭೇಟಿ ನೀಡಿದರು. ಅವರ ಸುರಕ್ಷತೆಗಾಗಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಲಾಗಿರುತ್ತದೆ. pic.twitter.com/Ojxw86A62B
— Shashi Kumar N cp mangalore (@ShashiK85532199) August 19, 2021ಮಂಗಳೂರಿನಲ್ಲಿ ಓದುತ್ತಿರುವ ಅಫ್ಘಾನಿಸ್ತಾನ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನನ್ನ ಕಚೇರಿಗೆ ಭೇಟಿ ನೀಡಿದರು. ಅವರ ಸುರಕ್ಷತೆಗಾಗಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಲಾಗಿರುತ್ತದೆ. pic.twitter.com/Ojxw86A62B
— Shashi Kumar N cp mangalore (@ShashiK85532199) August 19, 2021
ತಾಲಿಬಾನಿಗಳ ವಶದಲ್ಲಿರುವ ಅಫ್ಘನ್ ಪರಿಸ್ಥಿತಿ ದಿನದಿಂದ ದಿನಕ್ಕೆ ಭೀಕರವಾಗುತ್ತಿದೆ. ಸಾವನ್ನು ಕೈಯಲ್ಲಿ ಹಿಡಿದುಕೊಂಡು ಜನ ದಿನ ದೂಡುತ್ತಿದ್ದಾರೆ. ಹಲವರು ಈ ದೇಶ ಬಿಟ್ಟು ಹೋದ್ರೆ ಸಾಕು ಅಂತಾ ಹರಸಾಹಸ ಪಡುತ್ತಿದ್ದಾರೆ. ಆದ್ರೆ ತಾಲಿಬಾನಿಗಳು ಬೇರೆ ದೇಶಕ್ಕೆ ಹೋಗಲು ಕೂಡ ಅವಕಾಶ ಮಾಡಿ ಕೊಡದೇ ಕ್ರೌರ್ಯ ಮೆರೆಯುತ್ತಿದ್ದಾರೆ.
ಇದನ್ನೂ ಓದಿ: ಆಫ್ಘನ್ನರ ವಲಸೆ ನಿಯಂತ್ರಿಸಲು ಧಾರ್ಮಿಕ ನಾಯಕರಿಗೆ ತಾಲಿಬಾನ್ ಮೊರೆ: ಏರ್ಪೋರ್ಟ್ಗೆ ಬಂದವರಿಗೆ ಥಳಿತ