ETV Bharat / city

ನಾಗನಕಟ್ಟೆಗೆ ಅಕ್ರಮವಾಗಿ ಪ್ರವೇಶಿಸಿ ನಾಗರಕಲ್ಲು ಧ್ವಂಸ: ಕೋಡಿಕಲ್ ಬಂದ್, ಪ್ರತಿಭಟನೆ

ಕೋಡಿಕಲ್ ಶ್ರೀ ನಾಗಬ್ರಹ್ಮಸ್ಥಾನದ ನಾಗನ ಕಲ್ಲನ್ನು ಎಸೆದು ಭಗ್ನಗೊಳಿಸಿದ (Nagarakallu destroyed in Mangaluru case) ಕಿಡಿಗೇಡಿಗಳನ್ನು 24 ಗಂಟೆಯೊಳಗೆ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳದ ಕಾರ್ಯಕರ್ತರು ಇಂದು ಕೋಡಿಕಲ್​ ಪ್ರದೇಶವನ್ನು ಬಂದ್​ ಮಾಡಿ ಆಗ್ರಹಿಸಿದರು.

sri-nagabrahma-stana-nagarakallu-destroyed-in-mangalore-kodikal-area
ನಾಗರಕಲ್ಲು ಧ್ವಂಸ
author img

By

Published : Nov 15, 2021, 3:37 PM IST

ಮಂಗಳೂರು: ನಗರದ ಕೋಡಿಕಲ್ ಶ್ರೀ ನಾಗಬ್ರಹ್ಮಸ್ಥಾನದ (Sri Nagabrahmastana) ನಾಗನ ಕಲ್ಲನ್ನು ದುಷ್ಕರ್ಮಿಗಳು ಎಸೆದು ಭಗ್ನಗೊಳಿಸಿರುವುದನ್ನು (Nagarakallu destroyed) ಖಂಡಿಸಿ ಕೋಡಿಕಲ್ ಪ್ರದೇಶವನ್ನು ಸಂಪೂರ್ಣ ಬಂದ್ ಮಾಡಿ ವಿಶ್ವ ಹಿಂದೂ ಪರಿಷತ್​ (Vishva Hindu Parishad) ಹಾಗೂ ಬಜರಂಗದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

​​​​​​​

ಕಳೆದ ಎರಡು ದಿನಗಳ ಹಿಂದೆ ಯಾರೋ ದುಷ್ಕರ್ಮಿಗಳು ಇಲ್ಲಿನ ನಾಗನ‌ಕಲ್ಲನ್ನು ಎಸೆದ ಪ್ರಕರಣ ನಡೆದಿತ್ತು. ಆದ್ದರಿಂದ‌ ವಿಶ್ವ ಹಿಂದೂ ಪರಿಷತ್​​, ಬಜರಂಗದಳ ಆರೋಪಿಗಳ ಪತ್ತೆಗೆ ಒಂದು ದಿನದ ಕಾಲಾವಕಾಶ ನೀಡಿ, ಅಷ್ಟರೊಳಗೆ ಆರೋಪಿಗಳ ಬಂಧನವಾಗದಿದ್ದಲ್ಲಿ ಇಡೀ ಕೋಡಿಕಲ್ ಪ್ರದೇಶವನ್ನು (Kodikal bandh) ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಪೊಲೀಸ್ ಇಲಾಖೆಯಿಂದ ಆರೋಪಿಗಳ ಬಂಧನ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಸಂಪೂರ್ಣ ಕೋಡಿಕಲ್ ಬಂಧ ಮಾಡಿ‌ ಪ್ರತಿಭಟನೆ ನಡೆಸಲಾಯಿತು.

ಇದೇ ಮೊದಲಲ್ಲ:

ನಗರದಲ್ಲಿ ಇತ್ತೀಚೆಗೆ ನಾಗರಕಟ್ಟೆಗೆ ಅಕ್ರಮ ಪ್ರವೇಶಿಸಿ ನಾಗರಕಲ್ಲನ್ನು ಧ್ವಂಸಗೈಯುವ ಕುಕೃತ್ಯಗಳು ನಡೆಯುತ್ತಿವೆ. ಕಳೆದ ಒಂದೂವರೆ ತಿಂಗಳ ಒಳಗೆ ಬೈಕಂಪಾಡಿ, ಕೂಳೂರು ನಾಗಬನದ ಕಲ್ಲನ್ನು ಎತ್ತಿ ಎಸೆಯುವ ಕಾರ್ಯ ಆಗಿದೆ. ಇದೀಗ 600 ವರ್ಷಗಳ ಇತಿಹಾಸವಿರುವ ಕೋಡಿಕಲ್‌ನ ನಾಗಬ್ರಹ್ಮ ಸ್ಥಾನದ ನಾಗನ ಕಲ್ಲನ್ನು ಎಸೆಯುವ ಕಾರ್ಯ ಆಗಿದೆ. ಆದ್ದರಿಂದ ಪದೇಪದೇ ಸರಮಾಲೆಯಂತೆ ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತಿರುವ ದುಷ್ಕೃತ್ಯ ಎಸಗುತ್ತಿರುವುದು ಕಂಡು ಬರುತ್ತಿದ್ದು ತಕ್ಷಣ ಈ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ, ಕೋಡಿಕಲ್ ನಾಗರಿಕರು ಹಾಗೂ ವಿಎಚ್​ಪಿ ಮತ್ತು ಬಜರಂಗದಳ ಆಗ್ರಹಿಸಿದೆ.

'ತೈಮೂರ್​​ ಮತಾಂಧರ ಚಾಳಿ ಇದು'

ಗುರುಪುರ ಶ್ರೀ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ನಾಗರಕಲ್ಲನ್ನು ಒಡೆದು ಹಾಕುವ ಮತಾಂಧ ತೈಮೂರ್ ಚಾಳಿಯನ್ನು ಮಾಡಲಾಗಿದೆ. ಬೈಕಂಪಾಡಿಯ ನಾಗಕಲ್ಲು ಧ್ವಂಸ ಮಾಡಿರೋದಕ್ಕೆ ಸಂಬಂಧಿಸಿದಂತೆ ಯಾರೋ ಓರ್ವ ಮಾನಸಿಕ ಅಸ್ವಸ್ಥನನ್ನು ಬಂಧಿಸಲಾಗಿದೆ. ಆದರೆ ಆತನ‌ ಬಂಧನದ ಬಳಿಕವೂ ಎರಡು ಕಡೆಗಳಲ್ಲಿ ಇದೇ ರೀತಿಯ ದುಷ್ಕೃತ್ಯ ಎಸಗಲಾಗಿದೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. ಆ ನಾಗರಕಲ್ಲನ್ನು ಮುಟ್ಟಿ ಅಪವಿತ್ರಗೊಳಿಸಿ, ಧ್ವಂಸಗೈದಿರುವ ದುಷ್ಕರ್ಮಿಯ ಕೈಯನ್ನು ಕಡಿಯಬೇಕೆಂದು ಸ್ಥಳೀಯ ನಾಗರಿಕರು ಹೇಳುತ್ತಿದ್ದಾರೆಂದು ಪರೋಕ್ಷವಾಗಿ ಕೈಕಡಿಯಬೇಕೆನ್ನುವ ವಿಚಾರವನ್ನು ಹೇಳಿದರು.

'ಇದೊಂದು ಸಂಚು'

ನಾಗರಕಲ್ಲು ಬಹಳ ಭಾರವಿದ್ದು, ಓರ್ವನಿಗೆ ಎತ್ತಿ ಎಸೆದು ಧ್ವಂಸ ಮಾಡುವ ಕಾರ್ಯ ಆಗಿರುವ ಕೃತ್ಯವಲ್ಲ.‌ ಇದರ ಹಿಂದೆ ಭಾರಿ ಸಂಚು ಇದ್ದು, ಸಾಕಷ್ಟು ಜನರಿದ್ದಾರೆ‌. ಪೊಲೀಸರಿಗೆ ಆರೋಪಿಗಳ ಪತ್ತೆ ಹಚ್ಚುವ ಕಾರ್ಯ ಆಗದಿದ್ದಲ್ಲಿ ನಮ್ಮ ಸಂಘಟನೆಯ ಯುವಕರು ಆ ಕೆಲಸವನ್ನು ಮಾಡುತ್ತಾರೆ. ಅಲ್ಲದೆ ಮುಂದಿನ 24 ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಿದ್ದಲ್ಲಿ ನಾವೇ ಆ ಪೊಲೀಸರಿಗೆ ಬಂಗಾರದ ಪದಕದ ಪಾರಿತೋಷಕ ಪ್ರಧಾನಿಸುವುದಾಗಿ ಹೇಳಿದರು.

ವಿಎಚ್​ಪಿ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡಿ, 'ಇಂತಹ ದುಷ್ಕೃತ್ಯ ಪದೇ ಪದೇ ನಡೆಯುತ್ತಿದ್ದು, ಇದು ಇಲ್ಲಿಗೆ ಮುಗಿಯಬೇಕಾದರೆ ಆರೋಪಿಯ ಬಂಧನವಾದ ತಕ್ಷಣ ಎನ್‌ಕೌಂಟರ್ ಮಾಡಿ ಮುಗಿಸಬೇಕು. ಅದೇ ರೀತಿ ರಾಜ್ಯದ ಸಿಎಂ ಕರಾವಳಿ ಭಾಗಕ್ಕೆ ದಯವಿಟ್ಟು ಗಮನ ಕೊಡಬೇಕು. ಕರಾವಳಿ ಹಿಂದುತ್ವದ ಭದ್ರಕೋಟೆ, ಇಲ್ಲಿಯವರು ದುಡ್ಡಿಗೆ ಕೈಚಾಚಿ ಅಥವಾ ಇನ್ನಾವುದೋ ಆಮಿಷಕ್ಕೆ ಬಲಿಯಾಗಿ ಮತ ಹಾಕುವವರಲ್ಲ. ಹಿಂದುತ್ವವನ್ನು ನಂಬಿ ಇಲ್ಲಿಯವರು ಮತ ಹಾಕಿತ್ತಾರೆ. ಆದ್ದರಿಂದ ಇಲ್ಲಿನ ಹಿಂದುಗಳ ಮೇಲೆ ಆಗುತ್ತಿರುವ ದುಷ್ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.