ETV Bharat / city

ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ: ಸೋಮನಾಥ ನಾಯಕ್​ಗೆ ಶಿಕ್ಷೆ ಖಾಯಂ

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ಆರೋಪದಲ್ಲಿ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ.ಸೋಮನಾಥ ನಾಯಕ್‌ ಅವರಿಗೆ ಶಿಕ್ಷೆ ವಿಧಿಸಿ ಬೆಳ್ತಂಗಡಿ ಸಿವಿಲ್‌ ನ್ಯಾಯಾಲಯ ನೀಡಿದ್ದ ತೀರ್ಪನ್ನು ರಾಜ್ಯ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.

dharmasthala
dharmasthala
author img

By

Published : May 8, 2022, 11:11 AM IST

ಮಂಗಳೂರು: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗು ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ಮಾಡಿದ ಕೆ.ಸೋಮನಾಥ ನಾಯಕ್‍ಗೆ ಜೈಲು ಶಿಕ್ಷೆ ಖಾಯಂಗೊಳಿಸಿ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶಿಸಿದೆ. ಬೆಳ್ತಂಗಡಿ ಸಿವಿಲ್ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ, ಧರ್ಮಸ್ಥಳ ಹಾಗೂ ಹೆಗ್ಗಡೆ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಕೆ.ಸೋಮನಾಥ ನಾಯಕ್ ತನಗೆ ಬೆಳ್ತಂಗಡಿ ನ್ಯಾಯಾಲಯ ವಿಧಿಸಿದ ಜೈಲು ಶಿಕ್ಷೆ, ಆಸ್ತಿ ಮುಟ್ಟುಗೋಲು ಹಾಗೂ ದಂಡ ರದ್ದುಗೊಳಿಸುವಂತೆ ರಿಟ್ ಅರ್ಜಿ ಸಲ್ಲಿಸಿದ್ದರು.

ಎರಡೂ ಕಡೆ ವಾದ ಆಲಿಸಿದ ಉಚ್ಚ ನ್ಯಾಯಾಲಯ, ಮೇ 05 ರಂದು ತನ್ನ 148 ಪುಟಗಳ ಸುದೀರ್ಘ ತೀರ್ಪು ಪ್ರಕಟಿಸಿ ಬೆಳ್ತಂಗಡಿ ಸಿವಿಲ್ ನ್ಯಾಯಾಲಯಗಳ ಆದೇಶವನ್ನು ಎತ್ತಿ ಹಿಡಿದು ಸೋಮನಾಥ ನಾಯಕ್‍ರ ರಿಟ್ ಅರ್ಜಿ ವಜಾಗೊಳಿಸಿದೆ.

ಕೋರ್ಟ್‌ ಹೇಳಿದ್ದೇನು?: 1. ಸೋಮನಾಥ ನಾಯಕರು ಹೆಗ್ಗಡೆಯವರ ವಿರುದ್ಧ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ಸಹ ಉಲ್ಲಂಘಿಸಿ ಸುಳ್ಳು ಆರೋಪ ಮಾಡಿರುವುದು ಸಾಬೀತಾಗಿದೆ.

2. ಹೆಗ್ಗಡೆಯವರು ಮಿತಿಗಿಂತ ಜಾಸ್ತಿ ಸ್ಥಿರಾಸ್ತಿ ಹೊಂದಿರುತ್ತಾರೆ ಎಂಬುವುದಾಗಿ ಮಾಡುತ್ತಿರುವ ಆರೋಪಗಳು ಸುಳ್ಳು.

3. ಈ ಪ್ರಕರಣದ ದಾಖಲೆಗಳನ್ನು ಪರಾಮರ್ಶಿಸುವಾಗ ಹೆಗ್ಗಡೆಯವರು ಮತ್ತವರ ಕುಟುಂಬದವರು ತಮ್ಮ ಬಹಳಷ್ಟು ಆಸ್ತಿಗಳನ್ನು ಸಾಗುವಳಿದಾರರಿಗೆ ಬಿಟ್ಟುಕೊಟ್ಟಿರುವುದು ಕಂಡುಬರುತ್ತದೆ.

4. ರಾಜ್ಯದೆಲ್ಲೆಡೆ ತುಳಿತಕ್ಕೊಳಗಾದವರ ಏಳಿಗೆಗಾಗಿ, ಮಹಿಳಾ ಸಬಲೀಕರಣಕ್ಕಾಗಿ, ಇನ್ನೂ ಹಲವಾರು ಸಮಾಜಮುಖಿ ಕೈಂಕರ್ಯಗಳನ್ನು ಹೆಗ್ಗಡೆಯವರು ಮಾಡುತ್ತಿರುವುದು ಕಂಡುಬರುತ್ತದೆ.

5. ಹೆಗ್ಗಡೆಯವರಿಗೆ ಅವರ ಸಮಾಜಮುಖಿ ಸೇವೆಗಳನ್ನು ಪರಿಗಣಿಸಿ ನಮ್ಮ ದೇಶದ ಸರ್ಕಾರಗಳು ಪದ್ಮವಿಭೂಷಣ ಸಹಿತ ಹಲವಾರು ಉನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿರುವುದು ಕಂಡುಬರುತ್ತದೆ.

6. ನಮ್ಮ ದೇಶದ ಜನತೆಯು ಹೆಗ್ಗಡೆಯವರನ್ನು ಧರ್ಮಾಧಿಕಾರಿಯೆಂದು ಗೌರವ ಭಾವನೆಯಿಂದ ಕಾಣುತ್ತಿದ್ದಾರೆ.

7. ಹೆಗ್ಗಡೆಯವರ ಸಚ್ಚಾರಿತ್ರ್ಯಕ್ಕೆ ಹಾಗೂ ಕ್ಷೇತ್ರದ ಘನತೆಗೆ ಧಕ್ಕೆ ತರುವ ದುರುದ್ದೇಶದಿಂದ ಸೋಮನಾಥ ನಾಯಕ್​ ಎಗ್ಗಿಲ್ಲದೆ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ, ಸುಳ್ಳು ಆರೋಪಗಳನ್ನು ಸಾರ್ವಜನಿಕ ಮಾಧ್ಯಮ ಹಾಗು ಜಾಲತಾಣಗಳಲ್ಲಿ ಮಾಡುತ್ತಿರುವುದು ಕ್ಷಮಾರ್ಹವಲ್ಲ.

8. ಹೆಗ್ಗಡೆಯವರು ಹಾಗು ಅವರ ಕುಟುಂಬದವರ ವಿರುದ್ಧ ಆರೋಪ ಮಾಡುವುದರ ಹೊರತು ಸಮಾಜಕ್ಕೆ ತನ್ನ ಕೊಡುಗೆ ಏನು ಎಂಬುವುದನ್ನು ನ್ಯಾಯಾಲಯಕ್ಕೆ ತಿಳಿಸುವಲ್ಲಿ ಸಹ ಸೋಮನಾಥ ನಾಯಕ್ ವಿಫಲವಾಗಿದ್ದಾರೆ.

9. ನ್ಯಾಯಾಲಯದ ಮುಂದಿರುವ ದಾಖಲೆಗಳಲ್ಲಿ ಕ್ಷೇತ್ರ ಹಾಗು ಶ್ರೀ ಹೆಗ್ಗಡೆಯವರಿಂದ ನಡೆಯುತ್ತಿರುವ ಸಮಾಜಮುಖಿ ಕಾರ್ಯಗಳು ಎದ್ದು ಕಾಣುತ್ತಿವೆ.

10. ನ್ಯಾಯಾಲಯದ ಮುಂದೆ ಸೋಮನಾಥ ನಾಯಕ್ ಕೊನೆಯ ಕ್ಷಣದಲ್ಲಿ, ತಾನು ಎಸಗಿರುವ ಅಪರಾಧವು ಸಾಬೀತಾಗುವ ಎಲ್ಲಾ ಲಕ್ಷಣಗಳು ಕಂಡುಬಂದಾಗ ತನ್ನ ಕೃತ್ಯಗಳ ಬಗ್ಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿರುವುದು ನ್ಯಾಯಾಲಯದ ಘನತೆಯ ಬಗ್ಗೆ ಆತನಿಗಿರುವ ಕೇವಲ ಭಾವವನ್ನು ಬಿಂಬಿಸುತ್ತದೆ.

11. ಈ ಪ್ರಕರಣದಲ್ಲಿ ನ್ಯಾಯಾಲಯದ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದಕ್ಕಾಗಿ ಮತ್ತು ನ್ಯಾಯಾಲಯದ ಘನತೆಯನ್ನು ರಕ್ಷಿಸುವ ಸಲುವಾಗಿ ಹಾಗೂ ಸೋಮನಾಥ ನಾಯಕ್‍ರನ್ನು ಶಿಕ್ಷಿಸದಿದ್ದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಕಾನೂನಿನ ಉದ್ದೇಶ ಹಾಗು ಸಾಮರ್ಥ್ಯವನ್ನು ಸಾರುತ್ತಾ ಆದೇಶವನ್ನು ನೀಡಿದೆ.

12. ಪ್ರಕರಣದ ಎಲ್ಲ ಸಾಕ್ಷ್ಯಗಳನ್ನು ಹಾಗೂ ವಾಸ್ತವಾಂಶಗಳನ್ನು ತನಿಖಾ ಹಾಗೂ ಅಪರ ನ್ಯಾಯಾಲಯ ಕೂಲಂಕುಷವಾಗಿ ವಿರ್ಮಶಿಸಿದ ನಂತರ ಸದ್ರಿ ನ್ಯಾಯಾಲಯಗಳು ಸೋಮನಾಥ್ ನಾಯಕ್ ಎಸಗಿರುವ ಅಪರಾಧದ ತೀವ್ರತೆಯನ್ನು ಮನಗಂಡು ನೀಡಿರುವ ಶಿಕ್ಷೆ, ನ್ಯಾಯಾಲಯದ ಘನತೆ ಹಾಗೂ ಹೆಗ್ಗಡೆಯವರ ಸಚ್ಚಾರಿತ್ರ್ಯಗಳ ರಕ್ಷಣೆ ನಿಟ್ಟಿನಲ್ಲಿ ಮಾಡಿರುವ ಆದೇಶವನ್ನು ಉದ್ಘೋಷಿಸಿದೆ.

ಬೆಳ್ತಂಗಡಿ ನ್ಯಾಯಾಲಯ ಈಗಾಗಲೇ ಸೋಮನಾಥ ನಾಯಕ್‍ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿದೆ. ನ್ಯಾಯವಾದಿಗಳಾದ ಕೆ. ಚಂದ್ರನಾಥ ಆರಿಗ ಬೆಂಗಳೂರು ಹಾಗು ರತ್ನವರ್ಮ ಬುಣ್ಣು ಬೆಳ್ತಂಗಡಿ ಅವರು ಕ್ಷೇತ್ರದ ಪರವಾಗಿ ವಾದಿಸಿದ್ದರು.

ಇದನ್ನೂ ಓದಿ: ನೋಡಿ: ಬಾಗಿಲು ತೆರೆದು ದರ್ಶನ ನೀಡಿದ ಬದ್ರಿನಾಥ; ಭಕ್ತರ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.