ಮಂಗಳೂರು: ನಗರದಲ್ಲಿ ರಸ್ತೆ ಬದಿ ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ 20 ಸಾವಿರ ರೂ. ದಂಡ ವಿಧಿಸಲಾಗಿದೆ. ಕಂಕನಾಡಿ ಬಳಿಯ ರಸ್ತೆಯಲ್ಲಿ ಕಸ ಎಸೆದ ಫಾಸ್ಟ್ ಫುಡ್ ನೌಕರನಿಗೆ ದಂಡ ವಿಧಿಸಲಾಗಿದೆ.
ಈ ಜಾಗದಲ್ಲಿ ಕಸ ಎಸೆದ ಪರಿಣಾಮ ಬ್ಲ್ಯಾಕ್ ಸ್ಪಾಟ್ ನಿರ್ಮಾಣಗೊಂಡಿತ್ತು. ಮಂಗಳೂರು ಮಹಾನಗರ ಪಾಲಿಕೆಯು ಬಳಿಕ ಆ ಪ್ರದೇಶವನ್ನು ಸಂದರಗೊಳಿಸಿತ್ತು. ಅದರ ನಂತರ ಕಸ ಎಸೆಯುವುದು ನಿಯಂತ್ರಣಕ್ಕೆ ಬಂದಿದ್ದರೂ ಇತ್ತೀಚೆಗೆ ಕೆಲವರು ಕಸ ಎಸೆಯುತ್ತಿದ್ದರು. ಇದನ್ನು ಗಮನಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಕಸ ಎಸೆಯುತ್ತಿದ್ದ ಫಾಸ್ಟ್ ಫುಡ್ ನೌಕರನಿಗೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ.
(ಇದನ್ನೂ ಓದಿ: ಬಾವಿ ಶುಚಿಗೊಳಿಸುವಾಗ ದುರಂತ.. ಮೂವರು ಒಡಹುಟ್ಟಿದವರು ಸೇರಿ ಐವರ ಸಾವು!)