ETV Bharat / city

ಕಂಬಳಕ್ಕೂ ಬಾಧಿಸಿದ ನೈಟ್ ಕರ್ಫ್ಯೂ: ರಾತ್ರಿ ಓಟದ ಕೋಣಗಳಿಗೆ ರೆಸ್ಟ್, ಬೆಳಗ್ಗೆಯಿಂದ ರೇಸ್​

ಈ ಬಾರಿಯೂ ಕಂಬಳದಲ್ಲಿ ಸುಮಾರು 150ಕ್ಕೂ ಹೆಚ್ಚು ಕೋಣಗಳು ಪಾಲ್ಗೊಂಡಿದ್ದವು. ಆದರೆ ನೈಟ್ ಕರ್ಫ್ಯೂ ವಿಧಿಸಿರುವ ಕಾರಣ ಕಂಬಳವನ್ನು ಕೋವಿಡ್ ನಿಯಮಾವಳಿಗೆ ಅನುಸಾರವಾಗಿ ನಡೆಸಬೇಕಾಯಿತು.

Kambala time variations due to night curfew in Bantwal
ಕಂಬಳಕ್ಕೂ ಬಾಧಿಸಿದ ನೈಟ್ ಕರ್ಫ್ಯೂ: ರಾತ್ರಿ ಓಟದ ಕೋಣಗಳಿಗೆ ರೆಸ್ಟ್, ಬೆಳಗ್ಗೆಯಿಂದ ರೇಸ್​
author img

By

Published : Jan 2, 2022, 12:04 AM IST

ದಕ್ಷಿಣ ಕನ್ನಡ: ಬಂಟ್ವಾಳ ತಾಲೂಕಿನ ಉಳಿ ಕಕ್ಯಪದವಿನಲ್ಲಿ ಶನಿವಾರ ಆರಂಭಗೊಂಡ ಸತ್ಯ ಧರ್ಮ ಹೆಸರಿನ ಜೋಡುಕರೆ ಬಯಲು ಕಂಬಳಕ್ಕೂ ಕೊರೊನಾ ನೈಟ್ ಕರ್ಫ್ಯೂ ಬಾಧಿಸಿದೆ. ಈ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಗೆ ಇದ್ದ ಕಂಬಳವನ್ನು ಸ್ಥಗಿತಗೊಳಿಸಿ ಭಾನುವಾರ ಮುಂಜಾನೆ 5ರ ಬಳಿಕ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ,ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಬೆಳಗ್ಗೆ ಆರಂಭಗೊಂಡ ಕಂಬಳ ಮರುದಿನ ಬೆಳಗ್ಗೆವರೆಗೆ ನಡೆಯುತ್ತದೆ. ಈ ಬಾರಿಯೂ ಕಂಬಳದಲ್ಲಿ ಸುಮಾರು 150ಕ್ಕೂ ಹೆಚ್ಚು ಕೋಣಗಳು ಪಾಲ್ಗೊಂಡಿದ್ದವು. ಆದರೆ ನೈಟ್ ಕರ್ಫ್ಯೂ ವಿಧಿಸಿರುವ ಕಾರಣ ಕಂಬಳವನ್ನು ಕೋವಿಡ್ ನಿಯಮಾವಳಿಗೆ ಅನುಸಾರವಾಗಿ ನಡೆಸಬೇಕಾಯಿತು.

ಈ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಕಂಬಳ ಕೋಣಗಳ ಮಾಲೀಕರ ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಯಿತು. ಕಂಬಳ ಸಮಿತಿ ಪ್ರ ಧಾನ ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು, ಶ್ರೀ ರಾಮಾಂಜನೇಯ ಗೆಳೆಯರ ಬಳಗ ಅಧ್ಯಕ್ಷ ಮಹೇಂದ್ರ ಕಾಯರ್ ಗುರಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ಇದನ್ನೂ ಓದಿ: ಅದು ಎಲ್ಲಿಗೆ ಹೋಗಿ ಮುಟ್ಟುತ್ತೋ ಮುಟ್ಲಿ ನೋಡೋಣ.. ಸಿದ್ದರಾಮಯ್ಯಗೆ ಚಿಮ್ಮನಕಟ್ಟಿ ಪುತ್ರ ಪರೋಕ್ಷ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.