ETV Bharat / city

ಪಣಂಬೂರು ಬೀಚ್​​ನಲ್ಲಿ ಗಮನಸೆಳೆದ ಸರ್ಫಿಂಗ್ ಚಾಂಪಿಯನ್‌ಶಿಪ್

Indian Open of Surfing 2022 : ಪುರುಷರ ಹಾಗೂ ಮಹಿಳೆಯರ ಮುಕ್ತ ವಿಭಾಗದಲ್ಲಿ ಸ್ಪರ್ಧೆಗಳು ಮೇ 27 ರಿಂದ 29ರವರೆಗೆ ಮೂರು ದಿನಗಳ ಕಾಲ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆವರೆಗೆ ಸ್ಪರ್ಧೆ ನಡೆಯುತ್ತಿದೆ..

Indian Open surfing competition at Panambur beach
ಪಣಂಬೂರು ಬೀಚ್​​ನಲ್ಲಿ ಗಮನಸೆಳೆದ ಸರ್ಫಿಂಗ್ ಚಾಂಪಿಯನ್ ಶಿಪ್
author img

By

Published : May 28, 2022, 11:38 AM IST

ಮಂಗಳೂರು : ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ, ಮಂತ್ರ ಸರ್ಫ್ ಕ್ಲಬ್ ಮೂಲ್ಕಿ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪಣಂಬೂರು ಬೀಚ್​​ನಲ್ಲಿ ನಡೆಯುತ್ತಿರುವ 'ಇಂಡಿಯನ್ ಓಪನ್ ಆಫ್ ಸರ್ಫಿಂಗ್' ವೀಕ್ಷಕರನ್ನು ರೋಮಾಂಚನಗೊಳಿಸುತ್ತಿದೆ.

ಪಣಂಬೂರು ಬೀಚ್​​ನಲ್ಲಿ ಗಮನಸೆಳೆದ ಸರ್ಫಿಂಗ್ ಚಾಂಪಿಯನ್‌ಶಿಪ್..

ಈ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಮಟ್ಟದ ರ‍್ಯಾಂಕಿಂಗ್ ಪಡೆದಿರುವ ಸುಮಾರು 90ಕ್ಕೂ ಅಧಿಕ ಪ್ರಮುಖ ಸರ್ಫಿಂಗ್ ಪಟುಗಳು ಭಾಗವಹಿಸಿದ್ದಾರೆ. ಪುರುಷರ ಹಾಗೂ ಮಹಿಳೆಯರ ಮುಕ್ತ ವಿಭಾಗದಲ್ಲಿ ಸ್ಪರ್ಧೆಗಳು ಮೇ 27 ರಿಂದ 29ರವರೆಗೆ ಮೂರು ದಿನಗಳ ಕಾಲ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆವರೆಗೆ ಸ್ಪರ್ಧೆ ನಡೆಯುತ್ತಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ 15 ಲಕ್ಷ ರೂ. ಅನುದಾನದೊಂದಿಗೆ ಈ ಸರ್ಫಿಂಗ್ ಚಾಂಪಿಯನ್‌ಶಿಪ್ ನಡೆಯುತ್ತಿದೆ.

Indian Open surfing competition at Panambur beach
ಪಣಂಬೂರು ಬೀಚ್​​ನಲ್ಲಿ ಗಮನಸೆಳೆದ ಸರ್ಫಿಂಗ್ ಚಾಂಪಿಯನ್ ಶಿಪ್

ಚೆನ್ನೈ, ಮುಂಬೈ, ಪಾಂಡಿಚೇರಿ, ಮಹಾಬಲಿಪುರಂ, ಕೇರಳದ 13 ಸರ್ಫಿಂಗ್ ಕ್ಲಬ್​​ಗಳು, ಮಂಗಳೂರಿನ ಮೂಲ್ಕಿಯ ಮಂತ್ರ ಸರ್ಫ್‌ ಕ್ಲಬ್, ಮಂಗಳೂರು ಸರ್ಫಿಂಗ್ ಕ್ಲಬ್, ಇಂಡಿಕಾ ಸರ್ಫಿಂಗ್ ಕ್ಲಬ್​​ನ ಸ್ಫರ್ಧಿಗಳು ಈ ಚಾಂಪಿಯನ್‌ಶಿಪ್​​ನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಹಾರ ಹಾಕುವಾಗ ಕೈ ತಾಗಿದ್ದಕ್ಕೆ ಕೋಪಗೊಂಡ ವಧು: ಬೆಳ್ತಂಗಡಿಯಲ್ಲಿ ಅಷ್ಟಕ್ಕೇ ಮುರಿದುಬಿತ್ತು ಮದುವೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.