ETV Bharat / city

ಸಾಬೂನಿನಲ್ಲಿ‌ ಅಡಗಿಸಿಟ್ಟು ಚಿನ್ನ ಸಾಗಣೆ... ಮಂಗಳೂರು ವಿಮಾನ‌ ನಿಲ್ದಾಣದಲ್ಲಿ ಒಬ್ಬನ ಬಂಧನ - undefined

ವಿದೇಶಗಳಿಂದ ನಾನಾ ತಂತ್ರಗಾರಿಕೆ ಬಳಸಿ ಚಿನ್ನವನ್ನು ಅಕ್ರಮವಾಗಿ ತರುವಂತಹ ಪ್ರಯತ್ನಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯುತ್ತಲೇ ಇದೆ. ಮತ್ತು ಆ ಪ್ರಯತ್ನ ವಿಫಲವಾಗುತ್ತಲೇ ಇದೆ. ಈಗ ಮತ್ತೆ ಪ್ರಯಾಣಿಕನೊಬ್ಬ ಸಾಬೂನಿನಲ್ಲಿ ಅಡಗಿಸಿಟ್ಟು ತಂದ ಚಿನ್ನವನ್ನು ನಿಲ್ದಾಣದ ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಚಿನ್ನ ವಶ
author img

By

Published : May 24, 2019, 11:17 AM IST

ಮಂಗಳೂರು: ಸಾಬೂನಿನಲ್ಲಿ ಅಡಗಿಸಿಟ್ಟು ತಂದ ಭಾರಿ ಪ್ರಮಾಣದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಒಬ್ಬ ಪ್ರಯಾಣಿಕನನ್ನು ಬಂಧಿಸಲಾಗಿದೆ. ಶಾರ್ಜಾದಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಪ್ರಯಾಣಿಕನ ಬ್ಯಾಗ್​ನಲ್ಲಿ ಇದ್ದ ನಾಲ್ಕು ಸಾಬೂನು ಪ್ಯಾಕೆಟ್​ನ ಒಳಗೆ ಸಾಬೂನು ಆಕಾರದಲ್ಲಿದ್ದ ಚಿನ್ನವನ್ನು ಪತ್ತೆಹಚ್ಚಿದ್ದಾರೆ. 24 ಕ್ಯಾರೆಟ್​ನ 91.05 ಗ್ರಾಂ ಚಿನ್ನ ಇದರಲ್ಲಿತ್ತು. ಈ ಚಿನ್ನದ ಮೌಲ್ಯ 2.97 ಲಕ್ಷ ಎಂದು ಅಂದಾಜಿಸಲಾಗಿದೆ.

ಇನ್ನು ನಾನಾ ತಂತ್ರಗಳನ್ನು ಬಳಸಿ ಅಕ್ರಮವಾಗಿ ಚಿನ್ನವನ್ನು ಸಾಗಿಸುವ ಪ್ರಯತ್ನಗಳು ವಿಮಾನ ನಿಲ್ದಾಣದಲ್ಲಿ ವಿಫಲವಾಗಿದೆ. ಇತ್ತೀಚೆಗೆ ಮಿಕ್ಸಿಯ ಮೋಟಾರಿನಲ್ಲಿ ಅಡಗಿಸಿಟ್ಟು ತಂದಿದ್ದ ಚಿನ್ನವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು.

Intro:ಮಂಗಳೂರು: ವಿದೇಶದಿಂದ ನಾನಾ ತಂತ್ರಗಾರಿಕೆ ಬಳಸಿ ಅಕ್ರಮವಾಗಿ ಚಿನ್ನವನ್ನು ತರುವಂತಹ ಪ್ರಯತ್ನಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಫಲವಾಗಿದೆ.
ಇತ್ತೀಚೆಗೆ ಮಿಕ್ಸಿಯ ಮೋಟಾರಿನಲ್ಲಿ ಅಡಗಿಸಿ ತಂದಿದ್ದ ಚಿನ್ನವನ್ನು ಪತ್ತೆ ಹಚ್ಚಿದ ಮಂಗಳೂರು ಅಂತರಾಷ್ಟ್ರೀಯ ವಿಮಾನ‌ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಗುರುವಾರ ಸಾಬೂನಿನಲ್ಲಿ ಅಡಗಿಸಿಟ್ಟು ತಂದಿದ್ದ ಭಾರಿ ಪ್ರಮಾಣದ ಚಿನ್ನ‌ ವಶಪಡಿಸಿಕೊಂಡು ಪ್ರಯಾಣಿಕನನ್ನು ಬಂಧಿಸಿದ್ದಾರೆ.Body:ಶಾರ್ಜಾದಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಪ್ಲೈಟ್ ನ ಪ್ರಯಾಣಿಕನ ಬ್ಯಾಗ್ ನಲ್ಲಿ ಇದ್ದ ನಾಲ್ಕು ಸಾಬೂನು ಪ್ಯಾಕೆಟ್ ನ ಒಳಗೆ ಸಾಬೂನು ಆಕಾರದಲ್ಲಿ ಚಿನ್ನವನ್ನು ಪತ್ತೆಹಚ್ಚಿದ್ದಾರೆ. 24 ಕ್ಯಾರೆಟ್ ನ 91.05 ಗ್ರಾಂ ಚಿನ್ನ ಇದರಲ್ಲಿದ್ದು ಇದರ ಮೌಲ್ಯ 2.97 ಲಕ್ಷ ಎಂದು ಅಂದಾಜಿಸಲಾಗಿದೆ.
Reporter- vinodpuduConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.