ಮಂಗಳೂರು: ಇಂದು ನಡೆದ ಸಿಇಟಿ ಪರೀಕ್ಷೆಯಲ್ಲಿ ಮಂಗಳೂರಿನ ಓರ್ವ ಕೊರೊನಾ ಸೋಂಕಿತ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾರೆ.
ಸುರತ್ಕಲ್ನ ಪರೀಕ್ಷಾ ಕೇಂದ್ರದಲ್ಲಿ ಸೋಂಕಿತ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾದರು. ಸಿಇಟಿಗೆ ನೋಂದಾಯಿಸಿದ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇದರಲ್ಲಿ ಮೂವರು ಗುಣಮುಖರಾಗಿದ್ದು, ಓರ್ವರಲ್ಲಿ ಮಾತ್ರ ಸೋಂಕು ಇದೆ. ಆ ವಿದ್ಯಾರ್ಥಿಗೆ ಇಂದು ಪರೀಕ್ಷೆಗೆ ಅವಕಾಶ ಕಲ್ಪಿಸಲಾಯಿತು.
ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ವಿದ್ಯಾರ್ಥಿಯನ್ನು ಆ್ಯಂಬುಲೆನ್ಸ್ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತರಲಾಯಿತು. ಪ್ರತ್ಯೇಕ ಕೋಣೆಯಲ್ಲಿ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ, ಮೇಲ್ವಿಚಾರಣೆ ಮಾಡಿದರು. ಪರೀಕ್ಷೆ ಬಳಿಕ ಆ್ಯಂಬುಲೆನ್ಸ್ ನಲ್ಲಿ ಮನೆಗೆ ಕರೆದೊಯ್ಯಲಾಯಿತು.