ETV Bharat / city

ಸೈನಿಕನ ಹೆಸರಿನಲ್ಲಿ ವಂಚನೆ: ಪ್ಲಾಟ್ ಖರೀದಿಸುವುದಾಗಿ ನಂಬಿಸಿ 2.23 ಲಕ್ಷ ರೂ. ಪಂಗನಾಮ - 2.23 lakh Fraud is using the soldier name in manglure

ಮಂಗಳೂರಿನ ವ್ಯಕ್ತಿಯೊಬ್ಬರು ವೆಬ್​ಸೈಟ್​ವೊಂದರಲ್ಲಿ ತಮ್ಮ ಪ್ಲಾಟ್ ಬಾಡಿಗೆ‌ ನೀಡುವ ಕುರಿತು ಜಾಹೀರಾತು ಹಾಕಿದ್ದರು. ಇದನ್ನೇ ಮುಂದಿಟ್ಟುಕೊಂಡು ಸೈನಿಕನ ಹೆಸರಿನಲ್ಲಿ ಫೋನ್​ ಮಾಡಿ 2.23 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

Fraud
Fraud
author img

By

Published : Jul 24, 2021, 11:27 AM IST

ಮಂಗಳೂರು: ಪ್ಲಾಟ್ ನೀಡುವ ಬಗ್ಗೆ ವೆಬ್​ಸೈಟ್​ವೊಂದರಲ್ಲಿ ಜಾಹೀರಾತು ನೀಡಿದ್ದ ವ್ಯಕ್ತಿಗೆ ಸೈನಿಕನ ಹೆಸರಿನಲ್ಲಿ ಫೋನ್​ ಮಾಡಿ 2.23 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.

ಮಂಗಳೂರಿನ ವ್ಯಕ್ತಿಯೊಬ್ಬರು ವೆಬ್​ಸೈಟ್​ವೊಂದರಲ್ಲಿ ತಮ್ಮ ಪ್ಲಾಟ್ ಬಾಡಿಗೆ‌ ನೀಡುವ ಕುರಿತು ಜಾಹೀರಾತು ಹಾಕಿದ್ದರು. ಅಂಕಿತ್ ವಿಜಯ್ ಪಂಗನಾಮ ಹಾಕಿದ ಆರೋಪಿ. ಈತ ಫೋನ್ ಮಾಡಿ, ತಾನು ಸೈನಿಕನೆಂದು ನಂಬಿಸಿದ್ದಾನೆ. ಜೊತೆಗೆ ಮಿಲಿಟರಿ ವಸ್ತ್ರದಲ್ಲಿರುವ ಫೋಟೋ ಸಹ ಕಳುಹಿಸಿ, ನಮ್ಮ ಮನೆಯವರಿಗೆ ಈ ಪ್ಲಾಟ್ ಇಷ್ಟವಾಗಿದ್ದು, ಅದನ್ನು ಖರೀದಿಸುವುದಾಗಿ ಹೇಳಿದ್ದಾನೆ. ನಮ್ಮ ಅಕೌಂಟೆಂಟ್ ರಣದೀಪ್ ಸಿಂಗ್ ಹಾಗೂ ಮೇಲಾಧಿಕಾರಿ ದೆಹಲಿಯಲ್ಲಿದ್ದು, ಅವರು ಹಣ ಪಾವತಿಸಲಿದ್ದಾರೆ ಎಂದು ತಿಳಿಸಿದ್ದಾನೆ.

ನಂತರ ಆರೋಪಿಗಳು ಫೋನ್ ಮಾಡಿ ಹಣ ವರ್ಗಾಯಿಸಲು ಬ್ಯಾಂಕ್ ಖಾತೆ ನಂಬರ್​ ನೀಡುವಂತೆ ತಿಳಿಸಿದ್ದಾರೆ. ಬಳಿಕ ಮನೆಮಾಲೀಕನ ಗಮನಕ್ಕೆ ಬಾರದಂತೆ ಅವರ ಬ್ಯಾಂಕ್ ಖಾತೆಯಲ್ಲಿದ್ದ 2,23,500 ರೂ. ಅನ್ನು ಹಂತಹಂತವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

ಈ ಕುರಿತು ಮನೆ ಮಾಲೀಕ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಚುರುಕುಗೊಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.