ಮಂಗಳೂರು: ನವ ಮಂಗಳೂರು ಬಂದರು ಮಂಡಳಿಯಲ್ಲಿ ನಡೆಯುವ 1,420,22 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಎಂಆರ್ಪಿಎಲ್ ಸೇರಿ ವಿವಿಧ ಕಂಪನಿಗಳ ಜೊತೆ ಒಪ್ಪಂದ ನಡೆಯಿತು.
ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಸಂದರ್ಭ ಎನ್ಎಂಪಿಟಿ ಅಧ್ಯಕ್ಷ ಎ.ವಿ.ರಮಣ ಮತ್ತು ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದರು.
ಓದಿ: ಶರತ್ ಬಚ್ಚೇಗೌಡ ಕಾಂಗ್ರೆಸ್ಗೆ ಬಾಹ್ಯ ಬೆಂಬಲ ಘೋಷಣೆ: ಸಹ ಸದಸ್ಯತ್ವ ಸ್ವೀಕಾರ
ಈ ಒಪ್ಪಂದದಲ್ಲಿ ಉಪ್ಪು ನೀರು ಸಂಸ್ಕರಣಾ ಘಟಕ, ವೇರ್ ಹೌಸ್ ಸೌಲಭ್ಯ ಅಭಿವೃದ್ಧಿ, ಟ್ಯಾಂಕ್ ಟರ್ಮಿನಲ್ ನಿರ್ಮಾಣ, ಹೂಳು ತೆಗೆಯುವ ನಿರ್ವಹಣೆ, ಬಿಎಸ್ - 6 ಎಚ್ಎಸ್ಡಿ ಪೈಪ್ಲೈನ್ ಮತ್ತಿತರ ಯೋಜನೆಗಳು ಒಳಗೊಂಡಿವೆ.