ಮಂಗಳೂರು; ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದ ಏರ್ ಇಂಡಿಯಾ ವಿಮಾನ ರನ್ವೇ ಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ದುರಂತಕ್ಕೆ ನಾಳೆಗೆ ಹತ್ತು ವರ್ಷ ತುಂಬುತ್ತಿದೆ. 2010 ಮೇ 22 ರಂದು ನಡೆದ ಈ ದುರ್ಘಟನೆಯಲ್ಲಿ 158 ಮಂದಿ ಸಾವನ್ನಪ್ಪಿದ್ದರು. 135 ವಯಸ್ಕರು, 19 ಮಕ್ಕಳು, 4 ಶಿಶುಗಳು ಮತ್ತು 6 ಸಿಬ್ಬಂದಿ ಸಾವನ್ನಪ್ಪಿದ್ದರು. ಎಂಟು ಮಂದಿ ಬದುಕುಳಿದಿದ್ದರು. ದುಬೈನಿಂದ ಬಂದ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ ವೇ ಯಲ್ಲಿ ನಿಲ್ಲದೇ ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿಯಾಗಿ ಅದನ್ನು ತುಂಡರಿಸಿ, ಆಳ ಪ್ರದೇಶಕ್ಕೆ ಉರುಳಿದ ದುರ್ಘಟನೆ ಸಂಭವಿಸಿತ್ತು. ಈ ಘಟನೆ ನಡೆದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ಅವರು ಅಧ್ಯಯನಕ್ಕೆಂದು ವಿದೇಶಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪ್ರಭಾಕರ್ ಶರ್ಮ ಅವರು ಅಂದು ನಡೆದ ಘಟನೆಯ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.
ಮಂಗಳೂರು ವಿಮಾನ ದುರಂತ ಸಂಭವಿಸಿ ನಾಳೆಗೆ 10 ವರ್ಷ: ಅಂದಿನ ಅಪರ ಡಿಸಿ ಹೇಳಿದ್ದಿಷ್ಟು! - ಮಂಗಳೂರು ವಿಮಾನ ದುರಂತ ನ್ಯೂಸ್
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010 ಮೇ 22 ರಂದು ನಡೆದ ಏರ್ ಇಂಡಿಯಾ ವಿಮಾನ ದುರಂತದ ಕುರಿತು ಆ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪ್ರಭಾಕರ್ ಶರ್ಮಾ ಅವರು ಘಟನೆಯ ಕುರಿತು ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
![ಮಂಗಳೂರು ವಿಮಾನ ದುರಂತ ಸಂಭವಿಸಿ ನಾಳೆಗೆ 10 ವರ್ಷ: ಅಂದಿನ ಅಪರ ಡಿಸಿ ಹೇಳಿದ್ದಿಷ್ಟು! ಮಂಗಳೂರು ವಿಮಾನ ದುರಂತ ಕುರಿತು ಪ್ರಭಾಕರ್ ಶರ್ಮ ಅಭಿಪ್ರಾಯ](https://etvbharatimages.akamaized.net/etvbharat/prod-images/768-512-7291910-thumbnail-3x2-lek.jpg?imwidth=3840)