ಕಲಬುರಗಿ: ಹರಿಯುವ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನನ್ನ ಮತ್ತೋರ್ವ ಯುವಕ ರಕ್ಷಿಸಿರುವ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.
ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ಹಲವಡೆ ನಿತಂತರವಾಗಿ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚಿಂಚೋಳಿ, ಕಾಳಗಿ, ತಾಲೂಕಿನಲ್ಲಿ ವರುಣನ ಅಬ್ಬರಕ್ಕೆ ಬೆಣ್ಣೆತೋರಾ ಡ್ಯಾಂ ಬಹುತೇಖ ಭರ್ತಿಯಾಗಿದೆ. ಡ್ಯಾಂನಿಂದ ನದಿಗೆ ನೀರು ಹರಿ ಬಿಟ್ಟಿದ್ದರಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಇದನ್ನೂ ಓದಿ: ಬೀದರ್ ಜಿಲ್ಲೆಯಾದ್ಯಂತ ಭಾರಿ ಮಳೆ : ಸೇತುವೆ ಮುಳುಗಡೆ, ಸಂಚಾರ ಬಂದ್
ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದ ಸೇತುವೆ ಬಳಿ ಹಳ್ಳದ ನೀರಿನ ರಭಸಕ್ಕೆ ಸಿಲುಕಿ ನೀರುಪಾಲಾಗುತ್ತಿದ್ದ ಕಾಶಿನಾಥ್ ಎಂಬ ಯುವಕನನ್ನ ಇನ್ನೊಬ್ಬ ಯುವಕ ನೀರಿಗೆ ಧುಮುಕಿ ರಕ್ಷಣೆ ಮಾಡಿದ್ದಾನೆ. ನಿನ್ನೆ ಸಂಜೆ ಕಾಶಿನಾಥ ನೀರಿನಲ್ಲಿ ಈಜಲು ಹೋಗಿದ್ದಾಗ ಘಟನೆ ನಡೆದಿದೆ ಎನ್ನಲಾಗ್ತಿದೆ.