ETV Bharat / city

ಕಲಬುರಗಿಯಲ್ಲಿ ದಿಢೀರ್​ ಹೊತ್ತಿ ಉರಿದ ಓಮ್ನಿ​.. ಕಾರಿನ ಗಾಜು ಒಡೆದು ಡ್ರೈವರ್​ ರಕ್ಷಿಸಿದ ಜನ್ರು! - ಚಲಿಸುತ್ತಿದ್ದ ಕಾರ್​ನಲ್ಲಿ ಬೆಂಕಿ

ಕಲಬುರಗಿಯಲ್ಲಿ ಚಲಿಸುತ್ತಿದ್ದ ಕಾರಿನ​ ಒಳಭಾಗದಲ್ಲಿ ದಿಢೀರ್​ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳೀಯರು ಕಾರಿನ ಗ್ಲಾಸ್ ಒಡೆದು ಚಾಲಕನನ್ನು ರಕ್ಷಿಸಿದ್ದು, ಅಗ್ನಿಶಾಮಕ ದಳ‌ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Moving car catches fire in kalaburagi
ಚಲಿಸುತ್ತಿದ್ದ ಓಮ್ನಿ ಕಾರ್​ನಲ್ಲಿ ಬೆಂಕಿ
author img

By

Published : Dec 14, 2021, 7:08 AM IST

Updated : Dec 14, 2021, 7:21 AM IST

ಕಲಬುರಗಿ: ಚಲಿಸುತ್ತಿದ್ದ ಓಮ್ನಿ ಕಾರ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಕಾರು ಸಂಪೂರ್ಣ ಹೊತ್ತಿ ಉರಿದ ಘಟನೆ ನಗರದ ಹುಮನಾಬಾದ್ ರಿಂಗ್ ರಸ್ತೆ ಸಮೀಪದ ಕೆಸಿಟಿ ಕಾಲೇಜಿನ ಬಳಿ ನಡೆದಿದೆ.

ದಿಢೀರ್​ ಹೊತ್ತಿ ಉರಿದ ಕಾರ್​

ಚಲಿಸುತ್ತಿದ್ದ ಕಾರ್​ ಒಳ ಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರಿನ ಡೋರ್​ ಲಾಕ್ ಆಗಿ ಚಾಲಕ ಹೊರ ಬರಲು ಪರದಾಡಿದ್ದಾನೆ. ಈ ವೇಳೆ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಕಾರಿನ ಗ್ಲಾಸ್ ಒಡೆದು ಚಾಲಕನನ್ನು ರಕ್ಷಣೆ ಮಾಡಿದ್ದಾರೆ.

ಚಾಲಕನಿಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿದ್ದು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಬಳಿಕ ಸ್ಥಳಕಾಗಮಿಸಿದ ಅಗ್ನಿಶಾಮಕ ದಳ‌ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

ಇದನ್ನೂ ಓದಿ: ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ದೌರ್ಜನ್ಯ.. ಬೆಳ್ತಂಗಡಿಯಲ್ಲಿ ಕಾಮುಕನ ವಿರುದ್ಧ ಪೋಕ್ಸೋ ಕೇಸ್​

Last Updated : Dec 14, 2021, 7:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.