ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಯಡಗಾ ಗ್ರಾಮದ ಮಲ್ಕಪ್ಪ ಹಳ್ಳಿಖೇಡ ಸರ್ಕಾರಿ ಶಾಲೆಯಲ್ಲಿ 14 ವರ್ಷಗಳಿಂದ ಸೇವೆ ಸಲ್ಲಿಸಿ, ಮಕ್ಕಳ ಹಾಗೂ ಗ್ರಾಮಸ್ಥರ ಹೃದಯ ಗೆದ್ದ ಶಿಕ್ಷಕ ಉಮೇಶ್ ಕನ್ನಳ್ಳಿ ಅವರನ್ನು ಥೇಟ್ ರಾಜಕೀಯ ನಾಯಕನಂತೆ ಮೆರವಣಿಗೆ ಮಾಡಿ ವಿದ್ಯಾರ್ಥಿಗಳು ಬೀಳ್ಕೊಟ್ಟಿದ್ದಾರೆ.
ಶಿಕ್ಷಕ ಉಮೇಶ್ ಕನ್ನಳ್ಳಿ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಿ ಶಾಲೆಗೆ ವರ್ಗವಾಣೆಯಾದ ಪ್ರಯುಕ್ತ ತಾಲೂಕಿನ ಕಾಚೂರ ಗ್ರಾಮದ ಶ್ರೀ ಬಲಭೀಮೇಶ್ವರ ದೇವಾಲಯದಿಂದ ಯಡಗಾ ಗ್ರಾಮದವರೆಗೆ ಬೈಕ್ ರ್‍ಯಾಲಿ ಮೂಲಕ ಶಿಕ್ಷಕನನ್ನು ಮೆರವಣಿಗೆ ಮಾಡಲಾಗಿದೆ. ಅಲ್ಲದೆ ಯಡಗಾ ಗ್ರಾಮದ ಶ್ರೀ ಹನುಮಾನ್ ದೇವಾಲಯದಿಂದ ಡಿ.ಜೆ, ಡೊಳ್ಳುಗಳ ಮೂಲಕ ಮೆರವಣಿಗೆ ಮಾಡಿ, ತಮ್ಮ ನೆಚ್ಚಿನ ಶಿಕ್ಷಕನ ಜೊತೆ ಕುಣಿದು, ಖುಷಿಪಟ್ಟಿದ್ದಾರೆ.
ಮುಗನೂರ, ಕಾಚೂರ, ಯಡಗಾ, ಬಿಬ್ಬಳ್ಳಿಯ ನೂರಾರು ಜನ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈ ವೇಳೆ ಪಾಲ್ಗೊಂಡು ಬೀಳ್ಕೊಟ್ಟಿದ್ದಾರೆ. ಈ ವೇಳೆ ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾವುಕರಾದ ಪ್ರಸಂಗವೂ ನಡೆದಿದೆ. ಶಿಕ್ಷಕ ಉಮೇಶ ಸಹ ಕಣ್ಣೀರಿಟ್ಟು ವಿದ್ಯಾರ್ಥಿಗಳ ಪ್ರೀತಿಗೆ ಋಣಿ ಎಂದಿದ್ದಾರೆ.
ಇದನ್ನೂ ಓದಿ: ಬಸವೇಶ್ವರ ಜಾತ್ರೆಯ ಅಂಗವಾಗಿ ಟಗರು ಕಾಳಗ; ಇನ್ನೂರಕ್ಕೂ ಅಧಿಕ ಟಗರುಗಳು ಸ್ಪರ್ಧೆಯಲ್ಲಿ ಭಾಗಿ