ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಆಡಿಯೋವೊಂದು ಸಿಕ್ಕಿದೆ. ಪಿಎಸ್ಐ ಅಭ್ಯರ್ಥಿ ಹಾಗೂ ಮಧ್ಯವರ್ತಿ ನಡುವೆ ನಡೆದ ಸಂಭಾಷಣೆಯ ಆಡಿಯೋ ಇದಾಗಿದ್ದು, ಇದರಲ್ಲಿ ದೊಡ್ಡ ಮಟ್ಟದ ಜಾಲ ಇದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಕಲಬುರಗಿಯ ಕಾಂಗ್ರೆಸ್ ಭವನದಲ್ಲಿ ಪ್ರಿಯಾಂಕ್ ಖರ್ಗೆ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ್ದಾರೆ. ಅಕ್ರಮದಲ್ಲಿ ಭಾಗಿಯಾದ 13 ಜನರು ಈಗಾಗಲೇ ಅರೆಸ್ಟ್ ಆಗಿದ್ದಾರೆ. ಆದ್ರೆ, ಕಿಂಗ್ಪಿನ್ಗಳು ಇನ್ನೂ ಹೊರಗಡೆ ಓಡಾಡುತ್ತಿದ್ದಾರೆ. ಯಾವುದೇ ಪಕ್ಷದವರಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಕ್ರಮದ ಹಿಂದೆ ದೊಡ್ಡ ಜಾಲ ಇದೆ. ಇದರ ದುಡ್ಡು ದೊಡ್ಡ ಮಟ್ಟದವರೆಗೂ ತಲುಪುತ್ತಿದೆ. ಅಭ್ಯರ್ಥಿಗಳು, ಜೂನಿಯರ್ ಕಿಂಗ್ಪಿನ್ಗಳನ್ನು ಹಿಡಿದರೆ ಸಾಲಲ್ಲ. ಇದರ ಹಿಂದಿರುವ ದೊಡ್ಡ ದೊಡ್ಡವರನ್ನು ಬಲೆಗೆ ಹಾಕಬೇಕು ಎಂದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: 8 ಆರೋಪಿಗಳ ಜಾಮೀನು ಅರ್ಜಿ ವಜಾ
ಇನ್ನು ಆಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಮಾತಾಡಿದ್ದಾರೆ. ಓರ್ವ 545 ಪಿಎಸ್ಐ ನೇಮಕಾತಿಯಲ್ಲಿ ಆಯ್ಕೆ ಆದವರು, ಇನ್ನೋರ್ವರು ಮಧ್ಯವರ್ತಿ ಎಂದು ತಿಳಿದು ಬಂದಿದೆ. ವ್ಯವಸ್ಥೆಯಲ್ಲಿ ಮೇಲಿಂದ ಕೆಳಗಿನವರೆಗೆ ಭ್ರಷ್ಟಾಚಾರ ನಡೆಯುತ್ತಿದೆ. ಯುವಕರ ಭವಿಷ್ಯ ಹಾಳು ಮಾಡಲು ಸರ್ಕಾರ ಮುಂದಾಗಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.