ಹುಬ್ಬಳ್ಳಿ: ಹುಬ್ಬಳ್ಳಿಯ ಗ್ಲಾಸ್ ಹೌಸ್ನಲ್ಲಿರುವ ಮಹಾತ್ಮಾಗಾಂಧಿ ಪಾರ್ಕ್ನಲ್ಲಿ ಶೀಘ್ರದಲ್ಲೇ ಟಾಯ್ ರೈಲು ಬರಲಿದ್ದು, ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಚಿಕ್ಕ ಮಕ್ಕಳಿಗಾಗಿ 950 ಮೀಟರ್ ನಷ್ಟು ದೂರ ಸಂಚರಿಸುವ ಟಾಯ್ ರೈಲು ವ್ಯವಸ್ಥೆ ಮಾಡಲಾಗುತ್ತಿದ್ದು, ಮಕ್ಕಳಿಗೆ ಮನರಂಜನೆ ನೀಡಲಿದೆ. ಬುಲೆಟ್ ರೈಲು ವಿನ್ಯಾಸದ ಟಾಯ್ ರೈಲು ಉತ್ತರ ಕರ್ನಾಟಕದಲ್ಲೇ ಪ್ರಥಮವಾಗಿದೆ.
![Toy bullet train](https://etvbharatimages.akamaized.net/etvbharat/prod-images/kn-hbl-01-garden-train-av-7208089_08022022112034_0802f_1644299434_988.jpg)
ಇದನ್ನೂ ಓದಿ: ಮೈಸೂರಿನಲ್ಲಿ ರಾತ್ರೋರಾತ್ರಿ ಶತಮಾನದ ಶಾಲೆ ನೆಲಸಮ
ಇನ್ನೆರೆಡು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ನಂತರ ರೈಲು ಅಧಿಕಾರಿಗಳು ಪರಿಶೀಲನೆ ನಡೆಸಿ ಅನುಮತಿ ನೀಡಿದ ನಂತರ ಟಾಯ್ ಬುಲೆಟ್ ರೈಲು ಗಟೆಗೆ 15 ರಿಂದ 20 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ.