ETV Bharat / city

ಹಿಜಾಬ್ ಹಾಕಿ ಬರುವವರನ್ನು TC ಕೊಟ್ಟು ಮನೆಗೆ ಕಳಿಸಬೇಕು : ಪ್ರಮೋದ್ ಮುತಾಲಿಕ್ ಹೇಳಿಕೆ - ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್

ಚಿಂತಾಮಣಿ ಶಾಲೆಯ ಕೊಠಡಿಯಲ್ಲಿ ನಮಾಜ್ ಮಾಡಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಬಹಳ ಹಿಂದೆ-ಮುಂದೆ ನೋಡುತ್ತಿದೆ. ಇದನ್ನ ಹಾಗೆ ಬಿಟ್ಟರೆ ಅವರು ಮುಂದಿನ ದಿನ ಭಯೋತ್ಪಾದಕರಾಗುತ್ತಾರೆ. ಬೆಂಗಳೂರು ರೈಲ್ವೆ ಸ್ಟೇಷನ್​ನಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಬಾಂಬ್ ಸಿಕ್ಕರೂ ಇನ್ನೂ ಆರೋಪಿಗಳನ್ನ ಹಿಡಿಯೋಕೆ ಆಗಿಲ್ಲ. ಹಿಜಾಬ್ ಅನ್ನೋದು ಇಲ್ಲಿಯವರೆಗೂ ಹೋಗಬಾರದಿತ್ತು..

ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್
author img

By

Published : Feb 1, 2022, 3:03 PM IST

Updated : Feb 1, 2022, 4:37 PM IST

ಹುಬ್ಬಳ್ಳಿ : ಉಡುಪಿ‌ ಕಾಲೇಜ್​ವೊಂದರಲ್ಲಿ ಬಾಲಕಿಯರು ಹಿಜಾಬ್ ಹಾಕಿಕೊಂಡು ಬಂದಿರುವುದು ಚರ್ಚೆಯ ವಿಷಯವೇ ಅಲ್ಲ. ಎಲ್ಲರೂ ಸಮವಸ್ತ್ರ ಹಾಕಿಕೊಳ್ಳಬೇಕು. ಅದರಲ್ಲಿ ಯಾವುದೇ ಜಾತಿ ಇರಲ್ಲ. ಈ ರೀತಿಯ ಭಂಡತನ ಭಯೋತ್ಪಾದನೆಗೆ ತೆಗೆದುಕೊಂಡು ಹೋಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ ಕಿಡಿಕಾರಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಶಾಲೆಯೋ ಅಥವಾ ಧಾರ್ಮಿಕ ಕೇಂದ್ರವೋ. ನಿಮ್ಮ ಸ್ವತಂತ್ರ ಕೇವಲ ನಿಮ್ಮ ಮನೆಯಲ್ಲಿ ಇರಲಿ. ಹಿಜಾಬ್ ಹಾಕಿಕೊಂಡು ಬರುವ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಒದ್ದು ಮನೆಗೆ ಕಳಿಸಬೇಕು. ಪ್ರತ್ಯೇಕತೆ ಬೇಕು ಅಂದ್ರೆ ಪಾಕಿಸ್ತಾನಕ್ಕೆ ಹೋಗಿ. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು ಎಂದರು.

ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್

ಚಿಂತಾಮಣಿ ಶಾಲೆಯ ಕೊಠಡಿಯಲ್ಲಿ ನಮಾಜ್ ಮಾಡಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಬಹಳ ಹಿಂದೆ-ಮುಂದೆ ನೋಡುತ್ತಿದೆ. ಇದನ್ನ ಹಾಗೆ ಬಿಟ್ಟರೆ ಅವರು ಮುಂದಿನ ದಿನ ಭಯೋತ್ಪಾದಕರಾಗುತ್ತಾರೆ. ಬೆಂಗಳೂರು ರೈಲ್ವೆ ಸ್ಟೇಷನ್​ನಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಬಾಂಬ್ ಸಿಕ್ಕರೂ ಇನ್ನೂ ಆರೋಪಿಗಳನ್ನ ಹಿಡಿಯೋಕೆ ಆಗಿಲ್ಲ. ಹಿಜಾಬ್ ಅನ್ನೋದು ಇಲ್ಲಿಯವರೆಗೂ ಹೋಗಬಾರದಿತ್ತು ಎಂದರು.

ಕೋವಿಡ್, ಒಮಿಕ್ರಾನ್ ಭೀತಿ ರಾಜ್ಯದಲ್ಲಿ ತಗ್ಗಿದ ಪರಿಣಾಮ ರಾಜ್ಯ ಸರ್ಕಾರ ಹಲವಾರು ನಿಯಮಗಳನ್ನು ತೆರವುಗೊಳಿಸಿದೆ. ಆದರೆ, ಜಾತ್ರೆ, ಯಾತ್ರೆ ಹಾಗೂ ಉತ್ಸವಗಳ ಆಚರಣೆಗೆ ಅವಕಾಶ ನೀಡದೆ ನಿರ್ಬಂಧ ವಿಧಿಸಿದೆ. ಈ ಕಾರಣದಿಂದ ಕೂಡಲೇ ರಾಜ್ಯ ಸರ್ಕಾರ ಜ.4ರೊಳಗಾಗಿ ಆಚರಣೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಳೆದ 2 ವರ್ಷಗಳಿಂದ ಧಾರ್ಮಿಕ ಚಟುವಟಿಕೆಗಳಿಗೆ ನಿಷೇಧ ಹೇರಿರುವುದರಿಂದ ಜಾತ್ರೆ, ಉತ್ಸವಗಳನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಸರ್ಕಾರ ವಿದೇಶಿ ಸಂಸ್ಕೃತಿಗೆ ನಿರ್ಬಂಧ ಸಡಿಲಗೊಳಿಸಿದ್ದು, ಸಾಂಪ್ರದಾಯಿಕ ಜಾತ್ರೆಗಳಿಗೆ ನಿರ್ಬಂಧ ಹೇರಿರುವುದು ಖಂಡನೀಯ. ಇದನ್ನೇ ಮುಂದುವರಿಸಿಕೊಂಡು ಹೋದಲ್ಲಿ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಧೂಳಿಪಟವಾಗಲಿದೆ. ಹಿಂದುತ್ವ ಸಾರುವ ಬಿಜೆಪಿ ಸರ್ಕಾರ, ಸಾಂಪ್ರದಾಯಿಕತೆಗೆ ಧಕ್ಕೆ ತಂದರೆ ಶಾಪ ತಟ್ಟಲಿದೆ ಎಂದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 1, 2022, 4:37 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.