ಧಾರವಾಡ: ವಿಕಲಚೇತನ ತ್ರಿಚಕ್ರ ವಾಹನ ಫಲಾನುಭವಿ ಆಯ್ಕೆ ಸಂದರ್ಶನವನ್ನು ಅಧಿಕಾರಗಳು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಾಮಾನ್ಯ ವರ್ಗದ ಅಂಗವಿಕಲಕರ ಸಂದರ್ಶನ ನಡೆಸದೆ ಕಚೇರಿಗೆ ಬೀಗ ಹಾಕಿ, ಸಿಬ್ಬಂದಿ ಸಾಮಾನ್ಯ ವರ್ಗದ ಫಲಾನುಭವಿಗಳನ್ನು ಕಡೆಗಣಿಸಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಬರುತ್ತಾರೆ ಎಂಬ ನಂಬಿಕೆಯಿಂದ ವಿಕಲಚೇತನರು ಕಚೇರಿ ಎದುರಿನಲ್ಲೇ ಕಾಯುತ್ತಾ ಕುಳಿತ ದೃಶ್ಯ ಕಂಡು ಬಂದಿತು.
ಧಾರವಾಡದ ಮಿನಿ ವಿಧಾನಸೌಧದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಇಂದು ಮುಂಜಾನೆಯಿಂದ ತ್ರಿಚಕ್ರ ವಾಹನ ವಿತರಣೆ ಮಾಡಲು ಸಂದರ್ಶನ ನಡೆಯುತ್ತಿತ್ತು. ಆದರೆ, ಎಸ್ಸಿ ಹಾಗೂ ಎಸ್ಟಿ ಸಂದರ್ಶನ ಮುಗಿಯುತ್ತಿದ್ದಂತೆ ಸಾಮಾನ್ಯ ವರ್ಗದ ವಿಕಲಚೇತನರ ಸಂದರ್ಶನ ನಡೆಸದೇ ಅಧಿಕಾರಿಗಳು ಎದ್ದು ಹೋಗಿದ್ದಾರೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.
ಬೆಳಗ್ಗೆಯಿಂದ ಕಾಯುತ್ತ ಕುಳಿತಿದ್ದ 20ಕ್ಕೂ ಹೆಚ್ಚು ವಿಕಲಚೇತನರು ನಿರಾಶೆ ಅನುಭವಿಸುವಂತಾಗಿದೆ. ಸಾಮಾನ್ಯ ವರ್ಗದ ಅಂಗವಿಕಲರ ಸಂದರ್ಶನ ನಡಸದೆ ಹೋದ ಸಿಬ್ಬಂದಿ ವಿರುದ್ಧ ಅಂಗವಿಕಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.