ಧಾರವಾಡ: ಹವಾಮಾನ ವೈಪರೀತ್ಯದ ಹಿನ್ನೆಲೆ ಇನ್ನೆರಡು ದಿನಗಳ ಕಾಲ ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಆದರೆ ಯಾವುದೇ ಹಾನಿಕಾರಕ ಮಳೆ ಇರುವುದಿಲ್ಲ ಎಂದು ಹವಾಮಾನ ತಜ್ಞ ಡಾ. ಆರ್.ಎಚ್. ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕಡಲ ತೀರದ ಭಾಗದಲ್ಲಿ ಮಳೆ ಆಗಲಿದೆ. 48 ಗಂಟೆಗಳ ಬಳಿಕ ಪುನಃ ಬಿಸಿಲು ಬರಲಿದೆ. ಡಿ. 1ರ ಬಳಿಕ ಮತ್ತೊಂದು ವಾಯಭಾರ ಕುಸಿತ ಆಗಲಿದ್ದು, ಅಂಡಮಾನ್, ನಿಕೋಬಾರ್ ಭಾಗದಲ್ಲಿ ಇದು ಸಂಭವಿಸಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಲೋಕಸಭೆಯಲ್ಲಿ 'ಕೃಷಿ ಕಾನೂನುಗಳ ರದ್ದತಿ ಮಸೂದೆ-2021' ಅಂಗೀಕಾರ
ಡಿ. 1ರಂದು ಸಂಭವಿಸಲಿರುವ ವಾಯಭಾರ ಕುಸಿತ ಅಂಧ್ರಪ್ರದೇಶದ ಕಡಲ ಭಾಗದಲ್ಲಿ ಪರಿಣಾಮ ಬೀರಲಿದೆ. ಕರ್ನಾಟಕ ಭಾಗಕ್ಕೆ ಇದು ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.