ಹುಬ್ಬಳ್ಳಿ: ಪ್ಲಾಸ್ಮಾ ಥೆರಪಿ ಕೊರೊನಾ ಸೋಂಕಿತರಿಗೆ ಜೀವ ಉಳಿಸುವ ಸಂಜೀವಿನಿ ಆಗಿದೆ. ನಗರದ ಪೊಲೀಸ್ ಸಿಬ್ಬಂದಿಯೊಬ್ಬರು ಕೋವಿಡ್ ಸೋಂಕಿಗೆ ಒಳಗಾಗಿ ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಪ್ಲಾಸ್ಮಾ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ನಗರದ ಗಂಟಿಕೇರಿ ಪೊಲೀಸ್ ಠಾಣೆಯ ಸಿಬ್ಬಂದಿ ವಿಠ್ಠಲ್ ಮಾದರ್ ಎಂಬುವರು ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ನಂತರ ಕಿಮ್ಸ್ಗೆ ದಾಖಲಾಗಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮಖರಾಗಿದ್ದರು. ಇದೀಗ ಪ್ಲಾಸ್ಮಾ ನೀಡುವ ಮೂಲಕ ಇತರ ಕೋವಿಡ್ ಸೋಂಕಿತರ ಜೀವ ರಕ್ಷಣೆಗೆ ಮುಂದಾಗಿದ್ದಾರೆ.