ETV Bharat / city

ಧ್ವಜ ಸಂಹಿತೆಗೆ ತಿದ್ದುಪಡಿ ತಂದರೂ ದಾಖಲೆ ನಿರ್ಮಿಸಿದೆ ಹುಬ್ಬಳ್ಳಿ ಖಾದಿ ಗ್ರಾಮೋದ್ಯೋಗ ಸಂಸ್ಥೆ - ಹರ್ ಘರ್ ತಿರಂಗಾ

ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತಂದರೂ ಬೆಂಗೇರಿ‌ ಖಾದಿ ಗ್ರಾಮೋದ್ಯೋಗ ಸಂಸ್ಥೆ ತೈಮಾಸಿಕ ಲಾಭ ದಾಖಲಿಸಿದೆ. ಹರ್​ ಘರ್​ ತಿರಂಗಾ ಅಭಿಯಾನಕ್ಕೆ ಉತ್ತಮ ಬೆಂಬಲ ದೊರೆಯುತ್ತಿರುವುದು ಇದಕ್ಕೆ ಕಾರಣವಾಗಿದೆ.

khadi-gramodyoga-organization
ಖಾದಿ ಗ್ರಾಮೋದ್ಯೋಗ ಸಂಸ್ಥೆ
author img

By

Published : Aug 9, 2022, 7:59 PM IST

ಹುಬ್ಬಳ್ಳಿ : ನಗರದ ಬೆಂಗೇರಿ‌ ಖಾದಿ ಗ್ರಾಮೋದ್ಯೋಗ ಸಂಸ್ಥೆ ದೇಶದಲ್ಲಿ ಬಿಐಎಸ್ ಮಾನದಂದಂತೆ ಧ್ವಜ ತಯಾರಿಸುವ ಏಕೈಕ ಕೇಂದ್ರ. ಆದರೆ ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್ ಬಟ್ಟೆಯ ಧ್ವಜ ಮಾರಾಟಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಇದರ ನಡುವೆಯೂ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದಲ್ಲಿ ರಾಷ್ಟ್ರಧ್ವಜ ತಯಾರಿಸುವ ಏಕೈಕ ಸಂಸ್ಥೆಯಾದ ಖಾದಿ ಗ್ರಾಮೋದ್ಯೋಗ ಕೇಂದ್ರದ ಧ್ವಜಗಳಿಗೆ ಬೇಡಿಕೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ವೇಳೆ 'ಹರ್ ಘರ್ ತಿರಂಗಾ' ಕಾರ್ಯಕ್ರಮ ಘೋಷಣೆ ಮಾಡಿದ್ದು, ಇದು ಒಂದು ಕಡೆ ಖಾದಿ ಧ್ವಜಗಳಿಗೆ ಹೊಡೆತ ಕೊಟ್ಟಿದೆ ಎಂಬ ಆರೋಪಗಳು ಕೇಳಿಬಂದಿವೆ. ಮತ್ತೊಂದೆಡೆ ಕಡೆ ಬೆಂಗೇರಿ‌ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಧ್ವಜಗಳಿಗೆ ಬೇಡಿಕೆ ಇನ್ನೂ ಹೆಚ್ಚಾಗಿದೆ. ಅದರಲ್ಲೂ ಈ ವರ್ಷ ವಹಿವಾಟಿನಲ್ಲಿ ದಾಖಲೆ ಮಟ್ಟದ ಏರಿಕೆಯಾಗಿರುವುದು ಖುಷಿಯ ವಿಚಾರ.

ಧ್ವಜ ಸಂಹಿತೆಗೆ ತಿದ್ದುಪಡಿ ಆದರೂ ತ್ರೈಮಾಸಿಕ ವಹಿವಾಟು ಏರಿಕೆ

ತ್ರೈಮಾಸಿಕ ವಹಿವಾಟು ಏರಿಕೆ : ಒಂದು ವೇಳೆ ಈ ಅಭಿಯಾನಕ್ಕೆ ನಮ್ಮ ಕೇಂದ್ರದಿಂದಲೇ ರಾಷ್ಟ್ರಧ್ವಜ ಖರೀದಿಯಾಗುತ್ತಿದ್ದರೆ ಸಂಸ್ಥೆಗೆ ಮತ್ತಷ್ಟು ದೊಡ್ಡಮಟ್ಟದ ಆದಾಯ ಬರುತ್ತಿತ್ತು ಎಂಬುದು ಅಧಿಕಾರಿಗಳ ಮಾತು. ಇಲ್ಲಿಯವರೆಗೆ ಲಕ್ಷಾಂತರ ಧ್ವಜಗಳನ್ನು ಮಾರಾಟ ಮಾಡಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಕೇವಲ 82 ಲಕ್ಷ ವಹಿವಾಟು ನಡೆಸಿತ್ತು. ಇದರಿಂದಾಗಿ ಕಳೆದ ಹಣಕಾಸು ಮೊದಲ ತ್ರೈಮಾಸಿಕಕ್ಕಿಂತ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಹಿವಾಟು ಹೆಚ್ಚಾಗಿದೆ.

ಗ್ರಾಮೋದ್ಯೋಗ ಕೇಂದ್ರವೇ ರಾಷ್ಟ್ರಧ್ವಜ ಸರಬರಾಜು ಮಾಡುತ್ತದೆ. ಹಳ್ಳಿ ಗ್ರಾ.ಪಂ ಕಚೇರಿಯಿಂದ ಹಿಡಿದು ವಿದೇಶಗಳಲ್ಲಿನ ಭಾರತೀಯ ರಾಯಭಾರಿ ಕಚೇರಿಗಳ ಮೇಲೂ ಹಾರಾಡುವ ರಾಷ್ಟ್ರಧ್ವಜ ಇದೇ ಕೇಂದ್ರದಲ್ಲಿ ತಯಾರಾಗುತ್ತದೆ. ಆದರೆ ಈ ವರ್ಷ ಅಂದರೆ 2022-23ರ ಸಾಲಿನ ಏಪ್ರಿಲ್‌ನಿಂದ ಜುಲೈವರೆಗೆ ಬರೋಬ್ಬರಿ 1.5 ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಕೇಂದ್ರ ಸರ್ಕಾರ ಈ ವರ್ಷ ಆಗಸ್ಟ್​ 13 ರಿಂದ 15ರ ವರೆಗೆ ಹರ್ ಘರ್ ತಿರಂಗಾ ಅಭಿಯಾನ ನಡೆಸಲು ಕರೆಕೊಟ್ಟಿದೆ.

ಇದರಿಂದ ಸರ್ಕಾರಿ ಕಚೇರಿ, ಸಂಘ-ಸಂಸ್ಥೆಗಳು ಹೆಚ್ಚಿಗೆ ಧ್ವಜ ಖರೀದಿಸುತ್ತಿವೆ. ಇದರ ನಡುವೆಯೇ ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ಲಕ್ಷಾಂತರ ಮೌಲ್ಯದ ಧ್ವಜ ಖರೀದಿಸಿದೆ. ಇದನ್ನು ನೋಡಿ ಇದೀಗ ಬೇರೆ ಬೇರೆ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳೂ ಗ್ರಾಮೋದ್ಯೋಗ ಕೇಂದ್ರದಿಂದಲೇ ಧ್ವಜ ಖರೀದಿಸಲು ಮುಂದಾಗುತ್ತಿವೆ. ಇದರಿಂದಾಗಿ ವಹಿವಾಟು ದ್ವಿಗುಣವಾಗಿದೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಧ್ವಜ ಸಂಹಿತೆಗೆ ಸಂಬಂಧಿಸಿದಂತೆ ಬದಲಾದ ತೀರ್ಮಾನದ ನಡುವೆಯೂ ಬೆಂಗೇರಿ ಖಾದಿ ಗ್ರಾಮೋದ್ಯೋಗ ದಾಖಲೆಯನ್ನು ನಿರ್ಮಾಣ ಮಾಡಿರುವುದು ವಿಶೇಷವಾಗಿದೆ. ಸರ್ಕಾರ ದೇಶಿಯತೆಗೆ ಒತ್ತು ನೀಡುವ ಮೂಲಕ ಮತ್ತಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಕಾರ್ಯ ಮಾಡಬೇಕಿದೆ.

ಇದನ್ನೂ ಓದಿ : ಸೂರತ್‌ನಿಂದ ದೇಶಾದ್ಯಂತ 10 ಕೋಟಿಗೂ ಹೆಚ್ಚು ತ್ರಿವರ್ಣ ಧ್ವಜ ರವಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.