ಹುಬ್ಬಳ್ಳಿ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸಿಕ್ಕ ಲಾಕರ್ ಅನ್ನು ಅಧಿಕಾರಿಗಳ ಸಮ್ಮುಖದಲ್ಲಿ ಓಪನ್ ಮಾಡಲಾಗಿದ್ದು, ಅದರಲ್ಲಿ ವಿವಿಧ ದಾಖಲೆಗಳು ದೊರೆತಿವೆ.
ಆಸ್ಪತ್ರೆ ಶಿಥಿಲಾವಸ್ಥೆ ತಲುಪಿದ ಹಿನ್ನೆಲೆ, ಕಟ್ಟಡದ ತೆರವು ಕಾರ್ಯಾಚರಣೆ ಮಾಡಲಾಗುತ್ತಿತ್ತು. ಈ ವೇಳೆ, ಒಂದು ಗೋಡೆಯಲ್ಲಿ ಕಬ್ಬಿಣದ ಲಾಕರ್ ದೊರೆತಿತ್ತು. ಆಗ ಸ್ಥಳೀಯರು ಅದರಲ್ಲಿ ನಗ - ನಾಣ್ಯಗಳು ಇರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದರು. ಈ ಕುರಿತು ''ಕುತೂಹಲ ಕೆರಳಿಸಿದ 'ಚಿಟಗುಪ್ಪಿ ಬ್ರಿಟಿಷರ ಲಾಕರ್'.. ಗೋಡೆಯಲ್ಲಿರುವ ಲಾಕರ್ನಲ್ಲಿ ಏನಿದೆ!?'' ಎಂಬ ಶೀರ್ಷಿಕೆ ಅಡಿ ಈಟಿವಿ ಭಾರತ ಸುದ್ದಿ ಪ್ರಕಟಿಸಿತ್ತು.
ಇದನ್ನೂ ಓದಿ: ಕುತೂಹಲ ಕೆರಳಿಸಿದ 'ಚಿಟಗುಪ್ಪಿ ಬ್ರಿಟಿಷರ ಲಾಕರ್'.. ಗೋಡೆಯಲ್ಲಿರುವ ಲಾಕರ್ನಲ್ಲಿ ಏನಿದೆ!?
ಅದರಂತೆ ಹು-ಧಾ ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ, ಸಿದ್ದೇಶ್ವರ ಕಂಪನಿಯ ಲಾಕರ್ ಓಪನ್ ಮಾಡುವ ಕಾರ್ಮಿಕರು ಒಂದೂವರೆ ಗಂಟೆಯಲ್ಲಿ ಲಾಕರ್ ಓಪನ್ ಮಾಡಿದ್ದಾರೆ. ಲಾಕರ್ನಲ್ಲಿ ಆಸ್ಪತ್ರೆಗೆ ಸಂಬಂಧಿಸಿದ ಕಾಗದಗಳು ಹಾಗೂ ಒಂದು ನಾಣ್ಯ ದೊರೆತಿದೆ. ಅವುಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡರು.