ETV Bharat / city

ಎಟಿಎಂನಲ್ಲಿ ಹಣ ಕಳ್ಳತನಕ್ಕೆ ಯತ್ನ: ಆರೋಪಿ ಅರೆಸ್ಟ್​

ಅ.13 ರಂದು ತಡರಾತ್ರಿ ಹುಬ್ಬಳ್ಳಿಯ ನ್ಯೂ ಕಾಟನ್ ಮಾರ್ಕೆಟ್‌ನಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಎಟಿಎಂ (Axis Bank ATM) ಒಳಗೆ ರಾಡ್ ಹಿಡಿದುಕೊಂಡು ಬಂದು ಹಣ ಕಳ್ಳತನ ಮಾಡಲು ಯತ್ನಿಸಿದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ
hubli
author img

By

Published : Nov 11, 2021, 12:00 PM IST

ಹುಬ್ಬಳ್ಳಿ: ನ್ಯೂ ಕಾಟನ್ ಮಾರ್ಕೆಟ್‌ನಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಎಟಿಎಂ (Axis Bank ATM) ನಲ್ಲಿ ಹಣ ಕಳ್ಳತನ ಮಾಡಲು ಯತ್ನಿಸಿದ ಆರೋಪಿ ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಅ.13 ರಂದು ತಡರಾತ್ರಿ ಆ್ಯಕ್ಸಿಸ್ ಬ್ಯಾಂಕ್ ಎಟಿಎಂ (Axis Bank ATM) ಒಳಗೆ ರಾಡ್ ಹಿಡಿದುಕೊಂಡು ಬಂದ ವ್ಯಕ್ತಿಯೊಬ್ಬ, ಎಟಿಎಂ ಮಷಿನ್‌ (ATM machine)ಗೆ ಅಳವಡಿಸಿದ್ದ ವೈರ್‌ಗಳನ್ನು ಕಿತ್ತು ಕಳ್ಳತನ ಮಾಡಲು ಮುಂದಾಗಿದ್ದ. ಇದನ್ನು ಸ್ಥಳೀಯರು ಗಮನಿಸಿದ ಹಿನ್ನೆಲೆ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದ. ಈ ಕುರಿತು ಬ್ಯಾಂಕ್ ಅಧಿಕಾರಿಗಳು ಉಪನಗರ ಠಾಣೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇನ್ಸ್​​ಪೆಕ್ಟರ್ ರವಿಚಂದ್ರ ಡಿ.ಬಿ. ಹಾಗೂ ಸಿಬ್ಬಂದಿ ಎಟಿಎಂನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಆರೋಪಿಯ ಚಹರೆ ಆಧಾರದ ಮೇಲೆ ಹುಡುಕಾಟ ಆರಂಭಿಸಿ, ಕೊನೆಗೂ ಕಳ್ಳನನ್ನು ಬಂಧಿಸಿದ್ದಾರೆ. ಇನ್ನು ಪಿಎಸ್‌ಐಗಳಾದ ಬಿ.ಎಸ್.ಪಿ. ಅಶೋಕ್​, ಯು.ಎಂ. ಪಾಟೀಲ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಆಯುಕ್ತ ಲಾಬೂರಾಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಿಳೆ ಮೇಲೆ ಸ್ಕೂಟರ್ ಹಾಯಿಸಲು ಯತ್ನ:

ಹುಬ್ಬಳ್ಳಿಯ ಕುಸುಗಲ್ಲ ರಸ್ತೆಯ ಬನ್ನಿ ಮಹಾಂಕಾಳಿ ದೇವಸ್ಥಾನದ ಬಳಿ ಕೇಸ್ ವಾಪಸ್ ಪಡೆಯುವಂತೆ ಒತ್ತಾಯಿಸಿ ಮಹಿಳೆಯೊಬ್ಬರ ಮೇಲೆ ಸ್ಕೂಟರ್ ಹಾಯಿಸಲು ಯತ್ನಿಸಿದ್ದಾರೆ.

ನ್ಯೂ ಬಾದಮಿ ನಗರದ ಮಹಿಳೆಯೊಬ್ಬರು ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆ (Women's police station)ಯಲ್ಲಿ ಸಂಬಂಧಿಕರ ವಿರುದ್ಧ ದೂರು ನೀಡಿದ್ದರು. ಇದರಿಂದ ಆಕ್ರೋಶಗೊಂಡ ಮಂಜುನಾಥ ಹಾಗೂ ಚನ್ನಬಸನಗೌಡ ಅ. 29 ರಂದು ರಸ್ತೆಬದಿ ಹೊರಟಿದ್ದ ಮಹಿಳೆಯನ್ನು ಅಡ್ಡಗಟ್ಟಿ ಕೇಸ್ ಹಿಂಪಡೆಯುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಜೊತೆಗೆ ಜೀವ ಬೆದರಿಕೆ ಹಾಕಿ ಮೈಮೇಲೆ ಸ್ಕೂಟರ್ ಹಾಯಿಸಲು ಮುಂದಾಗಿದ್ದರು. ಈ ಕುರಿತು ಇದೀಗ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.