ದಾವಣಗೆರೆ: ಜಿಲ್ಲೆಯ ಹದಡಿ ಗ್ರಾಮಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿ ವೃದ್ಧನೋರ್ವನಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದ್ರೆ ಲಸಿಕೆ ಪಡೆಯಲು ನಿರಾಕರಿಸಿದ ವೃದ್ಧ ಹೆಂಚಿನ ಮನೆ ಏರಿ ಕುಳಿತು ಹೈಡ್ರಾಮ ಸೃಷ್ಟಿಸಿದ್ದಾನೆ.
77 ವರ್ಷ ವಯಸ್ಸಿನ ವೃದ್ಧ ಹನುಮಂತಪ್ಪ ಲಸಿಕೆ ಪಡೆಯಲು ನಿರಾಕರಿಸಿ ಹಠ ಹಿಡಿದ ವೃದ್ಧ. ಇಂದು ದಾವಣಗೆರೆ ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಲಸಿಕೆ ಹಾಕುವಾಗ ಈ ಘಟನೆ ನಡೆದಿದೆ.
ಲಸಿಕೆ ಹಾಕಲು ಹದಡಿ ಗ್ರಾಮಕ್ಕೆ ಭೇಟಿ ನೀಡಿದ ತಂಡ ವೃದ್ಧ ಹನುಮಂತಪ್ಪರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದ್ರೆ ವ್ಯಾಕ್ಸಿನ್ ಪಡೆಯಲು ನಿರಾಕರಿಸಿದ ವೃದ್ಧ ಹನುಮಂತಪ್ಪ ಹೆಂಚಿನ ಮನೆ ಏರಿ ಕುಳಿತು ತನಗೆ ಲಸಿಕೆ ಬೇಡವೆಂದು ಹಠ ಹಿಡಿದಿದ್ದರು. ಕೊನೆಗೂ ಹನುಮಂತಪ್ಪರ ಮನವೊಲಿಸಿ ಲಸಿಕೆ ಹಾಕುವಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ನೀರಿನ ಟ್ಯಾಂಕ್ ಸ್ವಚ್ಛ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು : ಓರ್ವನ ಸ್ಥಿತಿ ಚಿಂತಾಜನಕ