ETV Bharat / city

ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ: ಆರ್. ಶಂಕರ್ ವಿಶ್ವಾಸ

ಮುಂದಿನ ಸಂಪುಟ ವಿಸ್ತರಣೆಯಲ್ಲಿ ನೂರಕ್ಕೆ ನೂರರಷ್ಟು ಸಚಿವ ಸ್ಥಾನ ಸಿಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

MLC R. Shankar
ಮಾಜಿ ಸಚಿವ ಆರ್. ಶಂಕರ್
author img

By

Published : Dec 11, 2021, 10:14 AM IST

ದಾವಣಗೆರೆ: ಸಚಿವ ಸ್ಥಾನದಲ್ಲಿ ಅನ್ಯಾಯವಾಗಿದೆ ಇಲ್ಲ ಅಂತಾ ಅಲ್ಲ. ಅದನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಮಾಜಿ ಸಚಿವ ಹಾಗು ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಹೇಳಿದರು.

ಸಚಿವ ಸ್ಥಾನ ಹಂಚಿಕೆ ವಿಚಾರ: ಪರಿಷತ್ ಸದಸ್ಯ ಆರ್. ಶಂಕರ್ ಪ್ರತಿಕ್ರಿಯೆ

ದಾವಣಗೆರೆ ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಚುನಾವಣಾ ಮತದಾನ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ಸಂಪುಟ ರಚನೆಯಲ್ಲಿ ಸೇರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದರು. ಸಚಿವರ ಪಟ್ಟಿಯಲ್ಲಿ ಶ್ರೀಮಂತ್​​ ಪಾಟೀಲ್ ಅವರನ್ನು ತೆಗೆದು ಹಾಕಬಾರದಿತ್ತು. ಕೊನೆಯ ಕ್ಷಣದಲ್ಲಿ ಹೆಸರು ತೆಗೆದು ಹಾಕಿದ್ದು ತಪ್ಪಾಗಿದೆ ಎಂದು ಸಿಎಂ ಕೂಡ ಕೇಳಿಕೊಂಡಿದ್ದಾರೆ ಎಂದರು.

ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ. ಎಲ್ಲಾರಿಗೂ ಕೊಟ್ಟು ನಮಗೆ ಬಿಟ್ಟಿದ್ದೀರಿ ಎಂದು ಕೇಳಿಕೊಂಡಿದ್ದೇವೆ. ನಮ್ಮಿಂದಲೇ ಸರ್ಕಾರ ಬಂದಿದ್ದಲ್ವಾ? ಎಂದು ಪ್ರಶ್ನಿಸಿದ ಅವರು, ಎಲ್ಲಾ ಕಡೆ ಬಿಜೆಪಿಗೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಪರಿಷತ್ ಚುನಾವಣೆಯಲ್ಲಿ 20ರಲ್ಲಿ 15 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.