ಬೆಂಗಳೂರು: ರಾಜ್ಯದಲ್ಲಿ ಬುಲ್ಡೋಜರ್ ಮಾದರಿಯ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಉತ್ತರಪ್ರದೇಶ, ಮಧ್ಯಪ್ರದೇಶಗಳಲ್ಲಿ ದಂಗೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ನಮ್ಮಲ್ಲೂ ದಂಗೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲಿ ಐಎಸ್ಐ ಸಂಪರ್ಕ, ಪಾಕ್ ಪರ ಜೈ ಅನ್ನೋರೂ ಇದ್ದಾರೆ, ಒಳ್ಳೆಯವರೂ ಇದ್ದಾರೆ. ಆದರೆ ದಂಗೆಕೋರರಿಗೆ ಮನೆನೂ ಸಿಗಬಾರದು, ಈ ರೀತಿಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಿಎಂ ಜತೆ ನಾನು ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿ ದಾಂಧಲೆಕೋರರಿಗೂ ವಿದೇಶಿಗರ ಜತೆ ನಂಟಿರಬಹುದು, ಹಿಜಾಬ್ ವಿಚಾರವೂ ಮೊದಲು ವಿದೇಶಿ ಚಾನಲ್‌ಗಳಲ್ಲೇ ಪ್ರಸಾರ ಆಗಿದೆ. ಇಲ್ಲಿ ಹಲವರು ಭಾರತ ವಿರುದ್ಧ ಧಿಕ್ಕಾರ ಕೂಗುವವರಿದ್ದಾರೆ. ಅಂಥ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮವಾಗಬೇಕಿದೆ ಎಂದು ಹೇಳಿದರು.
ಕೆಜಿ ಹಳ್ಳಿ, ಡಿಜೆ ಹಳ್ಳಿ ಘಟನೆ ಸೃಷ್ಟಿಕರ್ತರು ಕಾಂಗ್ರೆಸ್‌ನವರು. ಹೊಡೆದವರು, ಏಟು ತಿಂದವರು ಕಾಂಗ್ರೆಸ್ ನವರು. ಈಗ ಹುಬ್ಬಳ್ಳಿ ಘಟನೆ ಆಗಿದೆ. ಮೊದಲು ಅಮಾಯಕರ ಬಂಧನ ಆಗುತ್ತಿದೆ ಎಂದು ರೋಷಾವೇಶ ತೋರಿದವರು ಅವರೇ. ಈಗ ಕಾಂಗ್ರೆಸ್‌ನವರ ಬಂಧನ ಆಗುತ್ತಿದ್ದು, ರೋಷಾವೇಷ ಇಳಿದಿದೆ. ಪಿಎಸ್ಐ ನೇಮಕಾತಿಯಲ್ಲೂ ಕೈ ಮುಖಂಡರ ಬಂಧನ ಆಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ :ಪಿಎಸ್‌ಐ ಅಕ್ರಮ : 'ಕೈ' ಮುಖಂಡನ ಸೋದರನ ಬಂಧನ.. ಮಹಾಂತೇಶ್ಗೆ ಕರೆ ಮಾಡಿ ಬಲೆಗೆ ಬಿದ್ದ ಆರ್ ಡಿ ಪಾಟೀಲ್!