ಬೆಂಗಳೂರು : ಪಿ.ಇ.ಎಸ್. ವಿಶ್ವವಿದ್ಯಾಲಯವು ಶಾಲಾ ದತ್ತು ಪಡೆದ ಸರ್ಕಾರಿ ಶಾಲೆಗಳ ನೂತನ ಕಟ್ಟಡಗಳ ಉದ್ಘಾಟನಾ ಹಾಗೂ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸಾಮಾಜಿಕ ಕಳಕಳಿಯಿಂದ ಸಮಾಜಕ್ಕೆ ಮರಳಿ ನೀಡುವ ಉದಾತ್ತ ಕಾರ್ಯ ಪ್ರೇರಣಾದಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲಾಗುತ್ತಿದ್ದು, ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ದೊರೆಸ್ವಾಮಿಯವರ ಮಾರ್ಗದರ್ಶನ ಪಡೆಯಲಾಗುವುದು. ದೊರೆಸ್ವಾಮಿಯವರು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರು. ಅವರು ಕಟ್ಟಿ ಬೆಳೆಸಿರುವ ಪಿಇಎಸ್ ಸಂಸ್ಥೆಗೆ 50 ವರ್ಷ ಸಂದಿದೆ. ಕಾರ್ಯೋತ್ಸಾಹ, ನಿಷ್ಠೆ ಹೊಂದಿರುವ ಅವರು ಉತ್ಕೃಷ್ಟ ದಾನಿಗಳಾಗಿದ್ದಾರೆ ಎಂದರು.
ಓದಿ: ಮೋದಿ ಫೋಟೋ ಹಾಕಿದ ಮುಸ್ಲಿಂ ಯುವಕ: ಮನೆ ಖಾಲಿ ಮಾಡುವಂತೆ ಮಾಲೀಕನ ಬೆದರಿಕೆ
ರಾಯಚೂರು, ಅಥಣಿ,ಮುಧೋಳಗಳಲ್ಲಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುತ್ತಿರುವ ದೊರೆಸ್ವಾಮಿ ಅವರ ನಿಸ್ವಾರ್ಥ ಸೇವೆ ಅಭಿನಂದನೀಯ. ಪಿಇಎಸ್ ಸಂಸ್ಥೆಯಲ್ಲಿ ಶಿಕ್ಷಣದ ಗುಣಮಟ್ಟ, ಶಿಸ್ತು, ವ್ಯಕ್ತಿತ್ವ ವಿಕಸನಗಳಿಗೆ ಮಹತ್ವ ನೀಡಲಾಗುತ್ತಿದ್ದು, ಸಹಸ್ರಾರು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಕಾಣುತ್ತಿದ್ದಾರೆ. ದೊರೆಸ್ವಾಮಿ ಅವರ ಶೈಕ್ಷಣಿಕ ಹಾಗೂ ಸಮಾಜಿಕ ಸೇವೆ ನಿರಂತರವಾಗಿ ಸಾಗಲಿ ಎಂದು ತಿಳಿಸಿದರು.
![Act of giving back to society is inspirational, CM Bommai attend to PES college program, PES college function in Bengaluru, Bengaluru news, ಸಮಾಜಕ್ಕೆ ಮರಳಿ ನೀಡುವ ಕಾರ್ಯ ಪ್ರೇರಣಾದಾಯಕ, ಪಿಇಎಸ್ ಕಾಲೇಜ್ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿ, ಬೆಂಗಳೂರಿನಲ್ಲಿ ನಡೆದ ಪಿಇಎಸ್ ಕಾಲೇಜ್ ಕಾರ್ಯಕ್ರಮ, ಬೆಂಗಳೂರು ಸುದ್ದಿ,](https://etvbharatimages.akamaized.net/etvbharat/prod-images/kn-bng-12-cm-pes-college-program-script-7208080_29032022224027_2903f_1648573827_262.jpg)
ಕೆನರಾ ಬ್ಯಾಂಕ್ ನಿಂದ ಶಾಲಾ ವಾಹನ ಕೊಡುಗೆ: ಗ್ರಾಮಾಂತರ ಪ್ರದೇಶಗಳಲ್ಲಿ ಇರುವ ಸರ್ಕಾರಿ ಶಾಲೆಗಳನ್ನು 'ಮಾದರಿ ಶಾಲೆ'ಗಳಾಗಿ ಅಭಿವೃದ್ಧಿಪಡಿಸುವ ಹಿನ್ನೆಲೆ ಎರಡು ಮಾರುತಿ ಇಕೋ ವಾಹನಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದರು. ಈ ವಾಹನಗಳನ್ನು ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯಲು ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿಯಡಿ ಕೆನರಾ ಬ್ಯಾಂಕ್ ನಿಂದ ಒದಗಿಸಲಾಯಿತು.
ಓದಿ: ಇಂದಿನ ರಾಶಿಫಲ: ಯಾವ ರಾಶಿಯವರ ದಿನ ಹೇಗಿರಲಿದೆ?
ಈ ವೇಳೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ. ನಾಗೇಶ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಕೆನರಾ ಬ್ಯಾಂಕ್ ಬೆಂಗಳೂರು ವಲಯದ ಚೀಫ್ ಜನರಲ್ ಮ್ಯಾನೇಜರ್ ದೇಬಾನಂದ ಸಾಹು ಉಪಸ್ಥಿತರಿದ್ದರು.