ETV Bharat / city

ಪುನೀತ್ ರಾಜ್​ಕುಮಾರ್​ ಸಮಾಧಿಗೆ ತಮಿಳು ನಟ ವಿಜಯ್ ಸೇತುಪತಿ ಭೇಟಿ, ನಮನ - puneeth rajkumar tomb in kanteerava studio

ಪುನೀತ್ ರಾಜಕುಮಾರ್ ಸಮಾಧಿಗೆ ಇಂದು ತಮಿಳು ನಟ ವಿಜಯ್ ಸೇತುಪತಿ ಭೇಟಿ ನೀಡಿ, ಸಮಾಧಿಗೆ ನಮಿಸಿದರು.

tamil actor vijay sethupathi
ತಮಿಳು ನಟ ವಿಜಯ್ ಸೇತುಪತಿ
author img

By

Published : Nov 4, 2021, 11:40 AM IST

Updated : Nov 4, 2021, 11:48 AM IST

ಬೆಂಗಳೂರು: ಪುನೀತ್ ರಾಜ್​ಕುಮಾರ್ ಸಮಾಧಿಗೆ ಇಂದು ತಮಿಳು ನಟ ವಿಜಯ್ ಸೇತುಪತಿ ಭೇಟಿ ನೀಡಿದ್ದರು. ಪುನೀತ್​​ ಅವರ ಸಾವು ಅವರ ಅಭಿಮಾನಿಗಳಿಗೆ ತುಂಬಲಾರದ ನಷ್ಟ ಎಂದು ಬೇಸರ ವ್ಯಕ್ತಪಡಿಸಿದರು.

ನಟ ವಿಜಯ್ ಸೇತುಪತಿ

ಕಂಠೀರವ ಸುಡಿಯೋದಲ್ಲಿ ಪುನೀತ್ ರಾಜ್​​ಕುಮಾರ್ ಅವರನ್ನು ಸಮಾಧಿ ಮಾಡಲಾಗಿದ್ದು, ಚಿತ್ರರಂಗದ ನಟ-ನಟಿಯರು, ಅಭಿಮಾನಿಗಳು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಇಂದು ತಮಿಳು ನಟ ವಿಜಯ್ ಸೇತುಪತಿ ಸಹ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಸಮಾಧಿಗೆ ನಮಿಸಿದರು.

ಬಳಿಕ ಮಾತನಾಡಿದ ಅವರು, ಅಪ್ಪು ಜೊತೆ ಒಂದೆರಡು ಬಾರಿ ಫೋನ್​ನಲ್ಲಿ ಮಾತನಾಡಿದ್ದೆ. ನೇರವಾಗಿ ಭೇಟಿಯಾಗಿರಲಿಲ್ಲ. ನನಗೆ ಸುದ್ದಿ ತಿಳಿದಾಗ ಮುಂಬೈನಲ್ಲಿ ಶೂಟಿಂಗ್​ನಲ್ಲಿದ್ದೆ, ಅದಕ್ಕೆ ಈಗ ಬಂದಿದ್ದೇನೆ. ಪುನೀತ್​ ಬಹಳಾನೇ ಫಿಟ್ ಆಗಿದ್ದವರು, ಇದ್ದಕ್ಕಿದ್ದಂತೆ ಈ ರೀತಿ ಆಗಬಾರದಿತ್ತು. ಅವರ ಸಾವು ಬಹಳ ದುಃಖದ ಸಂಗತಿ ಎಂದರು.

ಇನ್ನೂ ಓದಿ: ಮಾನವೀಯತೆಗೆ ಇನ್ನೊಂದು ಹೆಸರೇ ಪುನೀತ್; ಅಪ್ಪು ನಿವಾಸಕ್ಕೆ ಭೇಟಿ ನೀಡಿದ ತೆಲುಗು ನಟ ರಾಮ್​​ಚರಣ್​

ಅಪ್ಪು ನೋಡಿಕೊಳ್ಳುತ್ತಿದ್ದ ಮಕ್ಕಳ ಜವಾಬ್ದಾರಿಯನ್ನು ತಮಿಳು ನಟ ವಿಶಾಲ್ ಮುಂದಿನ ವರ್ಷದಿಂದ ತಾನೇ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದು ವಿಜಯ್​ ಸೇತುಪತಿ ಮೆಚ್ಚುಗೆ ವ್ಯಕ್ತಪಡಿಸಿದರು.

Last Updated : Nov 4, 2021, 11:48 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.