ಬೆಂಗಳೂರು : ಸ್ವಾಮಿ ವಿವೇಕಾನಂದರ 158ನೇ ಜನ್ಮದಿನಾಚರಣೆ ಪ್ರಯುಕ್ತ ರಾಜಭವನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಾಮಿ ವಿವೇಕಾನಂದ ಭವನವನ್ನು ರಾಜ್ಯಪಾಲ ವಜೂಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಉದ್ಘಾಟಿಸಿದರು.
![Swami vivekananda Bhavan](https://etvbharatimages.akamaized.net/etvbharat/prod-images/kn-bng-04-cm-vivekananda-jayanthi-script-7208080_12012021123810_1201f_1610435290_1102.jpg)
ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಭವನದ ಪ್ರತಿಮೆ ಅನಾವರಣ ಹಾಗೂ ರಾಜಭವನದಿಂದ ಹೊರ ತಂದಿರುವ ಕರ್ನಾಟಕ ಕುರಿತ 'ಎ ವಿಷುವಲ್ ಆಡ್ ಟು ಕರ್ನಾಟಕ (A Visual Ode to Karnataka) ಪುಸ್ತಕ ಬಿಡುಗಡೆ ಮಾಡಲಾಯಿತು.