ETV Bharat / city

ಜೆಡಿಎಸ್ ಕಡೆ ಮುಖ ಮಾಡದಿರಲು ಕಾರಣ ಬಿಚ್ಚಿಟ್ಟ ಸುಮಲತಾ!

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಶ್ ಅವರು ಜೆಡಿಎಸ್ ಬೆಂಬಲ ಯಾಕೆ ಕೇಳಲಿಲ್ಲ ಎಂಬ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಸುಮಲತಾ
author img

By

Published : Mar 18, 2019, 6:41 PM IST

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಶ್ ಅವರು ಜೆಡಿಎಸ್ ಬೆಂಬಲ ಯಾಕೆ ಕೇಳಲಿಲ್ಲ, ದಳಪತಿಗಳನ್ನು ಯಾಕೆ ಸಂಪರ್ಕ ಮಾಡಲಿಲ್ಲ ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬರೀಶ್ ಅಗಲಿಕೆಯ ನಂತರ ಮಂಡ್ಯದಲ್ಲಿ ಶ್ರದ್ಧಾಂಜಲಿ ಸಭೆ ಮಾಡಿದ್ದೆವು, ಅದರಲ್ಲಿ ಜೆಡಿಎಸ್ ಕಡೆಯಿಂದ ಯಾವುದೇ ನಾಯಕರು ಬರಲಿಲ್ಲ. ಎಲ್ಲರೂ ಅಂಬಿ ಶ್ರದ್ಧಾಂಜಲಿ ಸಭೆಯನ್ನು ಬಹಿಷ್ಕರಿಸಿದ್ದರು. ಇದರಲ್ಲಿನ ರಾಜಕೀಯದ ಬಗ್ಗೆ ನನಗೆ ಮೊದಲು ಯೋಚನೆಯೇ ಇರಲಿಲ್ಲ, ಯಾಕೆ ಹೀಗೆ ಮಾಡಿದರು ಎಂಬ ಬೇಸರವಿತ್ತು. ಜನ ಕೂಡ ಬೇಸರವಾಗಿದ್ದರು ಎಂದು ಭಾವುಕರಾದರು.

ಸುಮಲತಾ ನಮ್ಮ ಪಕ್ಷದವರಲ್ಲ, ಅಂಬರೀಶ್ ಕಾಂಗ್ರೆಸ್​ನಲ್ಲಿ ಇದ್ದವರು. ನಮ್ಮ ಪಕ್ಷಕ್ಕೆ ಯಾಕೆ ಅವರನ್ನು ಕರೆಯಬೇಕು? ಮಂಡ್ಯ ಜೆಡಿಎಸ್​ ಭದ್ರಕೋಟೆ, ಇಲ್ಲಿ ನಮ್ಮ ಎಂಟು ಶಾಸಕರಿದ್ದಾರೆ. ಹಾಗಾಗಿ ಇಲ್ಲಿ ಯಾಕೆ ಸುಮಲತಾ ಅವರಿಗೆ ಬೆಂಬಲ ನೀಡಬೇಕು ಎನ್ನುವ ರೀತಿಯ ಹೇಳಿಕೆಯನ್ನು ಜೆಡಿಎಸ್​ ನಾಯಕರು ನೀಡಿದ್ದನ್ನು ಮಾಧ್ಯಮಗಳ ಮೂಲಕ ನೋಡಿದೆ. ಹಾಗಾಗಿ ಮಂಡ್ಯದಿಂದ ಸ್ಪರ್ಧೆಗೆ ಅವಕಾಶ ನೀಡುವಂತೆ ಜೆಡಿಎಸ್ ನಾಯಕರನ್ನು ಸಂಪರ್ಕಿಸುವುದರಲ್ಲಿ ಅರ್ಥವಿಲ್ಲ ಎಂದು ನಿರ್ಧರಿಸಿದೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಗೆದ್ದ ನಂತರ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತೀರಾ ಎನ್ನುವ ಪ್ರಶ್ನೆ ಅಪ್ರಸ್ತುತ. ಈಗಲೂ ಕೂಡ ಯಾವುದೇ ಪಕ್ಷ ನಮ್ಮೊಂದಿಗೆ ಅಂತಹ ಚರ್ಚೆ ನಡೆಸಿಲ್ಲ. ಈಗ ನಾನು ಸ್ಪರ್ಧೆ ಮಾಡುತ್ತಿರುವುದು ಮಂಡ್ಯ ಕ್ಷೇತ್ರದ ಜನರ ಅಭಿಪ್ರಾಯ ಕೇಳಿ. ಹಾಗೆಯೇ ಮುಂದೆ ಯಾರಿಗಾದರೂ ಬೆಂಬಲ ನೀಡಬೇಕು ಎನ್ನುವ ವಿಷಯ ಬಂದರೂ ಜನರ ಮುಂದೆ ಹೋಗುತ್ತೇನೆ. ಅವರು ಹೇಳಿದಂತೆಯೇ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

ನನ್ನತ್ರ ಹಣವಿಲ್ಲ, ಜನ ಇದ್ದಾರೆ:

ಚುನಾವಣೆ ಸಮಯದಲ್ಲಿ ಹಣದ ಹೊಳೆ ಹರಿಯಬಹುದು. ಆದರೆ ನನ್ನ ಹತ್ರ ಹಣ ಇಲ್ಲ. ಅಂಬರೀಶ್ ಅವರ ಪ್ರೀತಿ, ಅವರನ್ನ ಪ್ರೀತಿಸುವ ಜನ ಇದ್ದಾರೆ. ರಾಜಕೀಯಕ್ಕೆ ಬರಬೇಕು ಅನ್ನೋ ಆಸೆ ಯಾವುದೇ ಮೂಲೆಯಲ್ಲಿ ಇರಲಿಲ್ಲ. ಈಗಲೂ ಇಲ್ಲ. ಈಗ ಮಂಡ್ಯದ ಜನರಿಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಅವರು ಬೇಡ ಎಂದರೆ ಈಗಲೂ ಚುನಾವಣೆಯಿಂದ ಹಿಂದೆ ಸರಿಯಲು ಸಿದ್ಧ ಎಂದು ತಮ್ಮ ರಾಜಕೀಯ ಪ್ರವೇಶವನ್ನು ಸಮರ್ಥಿಸಿಕೊಂಡರು.

ಅಂಬಿ ಆತ್ಮಕ್ಕೆ ಶಾಂತಿ ಸಿಗಲಿದೆ:

ಅಂಬರೀಶ್ ಯಾವತ್ತೂ ಸ್ವಾರ್ಥ ರಾಜಕಾರಣ ಮಾಡಿಲ್ಲ, ರಾಜಕಾರಣದ ಕಷ್ಟ ಅವರಿಗೆ ಗೊತ್ತಿತ್ತು. ಹಾಗಾಗಿ ಹೆಂಡತಿ ಮಕ್ಕಳನ್ನು ಕರೆ ತರಲ್ಲ ಎಂದಿದ್ದರು. ಬೇರೆಯವರ ಮಕ್ಕಳನ್ನು ನಾನು ಬೆಳೆಸುತ್ತೇನೆ ಎಂದಿದ್ದರು. ಅದರ ಅರ್ಥ ಸಾಮರ್ಥ್ಯ ಇದ್ದರೆ ಅವರೇ ಬಂದು ಬೆಳೆಯಲಿ ಎನ್ನುವುದಾಗಿತ್ತು, ಅದನ್ನು ಈಗ ಬೇರೆ ರೀತಿ ಅರ್ಥೈಸುವುದು ಬೇಡ. ಅವರ ಅಭಿಮಾನಿಗಳ ಆಸೆಯಂತೆ ನಾನು ರಾಜಕೀಯಕ್ಕೆ ಬರುತ್ತಿದ್ದೇನೆ. ಇದರಿಂದ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ ಎಂದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.