ETV Bharat / city

ಬೆಂಗಳೂರಿನಲ್ಲಿ ದಿನಕ್ಕೆ 145 ಕೋಟಿ ಲೀ. ಕಾವೇರಿ ನೀರು ಬಳಕೆ: ಅರ್ಧದಷ್ಟು ಆಗುತ್ತಿಲ್ಲ ಚರಂಡಿ ನೀರು ಸಂಸ್ಕರಣೆ

ರಾಜಧಾನಿಯಲ್ಲಿ ಕೊಳಚೆ ನೀರು ಸಂಸ್ಕರಣೆ ಪೂರ್ಣ ಪ್ರಮಾಣದಲ್ಲಿ ನಡೆಯಬೇಕಾದರೆ 2021ರ ಮಾರ್ಚ್-ಏಪ್ರಿಲ್​​ವರೆಗೆ ಕಾಲಾವಕಾಶ ಬೇಕಾಗಬಹುದು ಎಂದು ಜಲಮಂಡಳಿ ಅಧಿಕಾರಿಗಳು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

stp-construction-delay
ತ್ಯಾಜ್ಯ ನೀರು ಸಂಸ್ಕರಣಾ ಘಟಕ
author img

By

Published : Aug 25, 2020, 8:08 PM IST

ಬೆಂಗಳೂರು: ಕೊಳಚೆ ಅಥವಾ ಗೃಹಬಳಕೆಯ ತ್ಯಾಜ್ಯ ನೀರು ರಾಜಕಾಲುವೆ, ಕೆರೆಗಳಿಗೆ ಸೇರದಂತೆ ಕ್ರಮ ಕೈಗೊಳ್ಳಲು ಜಲಮಂಡಳಿ ಹಲವು ವರ್ಷಗಳಿಂದ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್​ಟಿಪಿ) ನಿರ್ಮಾಣ ಕಾರ್ಯ ಕೈಗೊಂಡಿದೆ. ಸದ್ಯ 29 ಎಸ್​ಟಿಪಿಗಳು ಕೆಲಸ ಮಾಡುತ್ತಿದ್ದರೂ ಅರ್ಧದಷ್ಟೂ ಕೊಳಚೆ ನೀರು ಸಂಸ್ಕರಣೆಯಾಗುತ್ತಿಲ್ಲ.

ಇನ್ನೂ ಹಲವು ಯೋಜನೆಗಳಡಿ ಹೊಸ ಎಸ್​ಟಿಪಿಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕಾರ್ಮಿಕರ ಕೊರತೆಯಿಂದ ಕಾಮಗಾರಿಗಳು ವೇಗ ಪಡೆಯುತ್ತಿಲ್ಲ. ಬೆಂಗಳೂರಿನಲ್ಲಿ ಪ್ರತಿದಿನ 145 ಕೋಟಿ ಲೀಟರ್ (600 ಕ್ಯೂಸೆಕ್, ತಿಂಗಳಿಗೆ 1.5 ಟಿಎಂಸಿ) ಕಾವೇರಿ ನೀರು ಬಳಕೆಯಾಗುತ್ತಿದೆ. ಇದನ್ನು ಹೊರತುಪಡಿಸಿ ಕೊಳವೆ ಬಾವಿಗಳಿಂದ 30-40 ಕೋಟಿ ಲೀಟರ್​ಗೂ ಹೆಚ್ಚು ನೀರನ್ನು ಉಪಯೋಗ ಮಾಡಲಾಗುತ್ತಿದೆ. ಇದರ ಶೇ.80ರಷ್ಟು ನೀರು ಬಳಕೆಯಾಗಿ ಚರಂಡಿ ಸೇರುತ್ತಿದೆ.

ಬೆಂಗಳೂರಿನಲ್ಲಿ ಪ್ರಸ್ತುತ 1,440 ಎಂಎಲ್​ಡಿಯಷ್ಟು (ದಿನಕ್ಕೆ ಮಿಲಿಯನ್ ಲೀಟರ್) ಚರಂಡಿ ನೀರು ಉತ್ಪತ್ತಿಯಾಗುತ್ತಿದೆ. ಸದ್ಯ ಕೆಲಸ ಮಾಡುತ್ತಿರುವ 29 ಎಸ್​ಟಿಪಿಗಳು 1,157.5 ಎಂಎಲ್​ಡಿಯಷ್ಟು ತ್ಯಾಜ್ಯ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿವೆ. ಆದರೆ, 850 ಎಮ್​ಎಲ್​ಡಿ ತ್ಯಾಜ್ಯ ನೀರು ಮಾತ್ರ ಸಂಸ್ಕರಣೆಯಾಗುತ್ತಿದೆ.

ಕೆಲವೆಡೆ ಕಾಮಗಾರಿಗಳು, ಲಿಂಕಿಂಗ್ ಕೆಲಸಗಳು ನಡೆಯುತ್ತಿವೆ. ಅವು 2021ರ ಮಾರ್ಚ್-ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಒಟ್ಟು ಸಾಮರ್ಥ್ಯದಷ್ಟೇ ಅಂದರೆ 1,157 ಎಮ್​ಎಲ್​ಡಿ ಚರಂಡಿ ನೀರು ಸಂಸ್ಕರಣೆಯಾಗಲಿದೆ ಎಂದು ಜಲಮಂಡಳಿ ತ್ಯಾಜ್ಯ ನೀರು ನಿರ್ವಹಣೆಯ ಮುಖ್ಯಅಭಿಯಂತರ ಗಂಗಾಧರ ಅವರು ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಇನ್ನು ಹೆಬ್ಬಾಳ ಸೇರಿದಂತೆ ನಾಲ್ಕು ಕಡೆ ಹೊಸದಾಗಿ ಎಸ್​ಟಿಪಿ ನಿರ್ಮಾಣವಾಗುತ್ತಿದ್ದು, ಅವುಗಳಿಂದ 1582.5 ಎಮ್​ಎಲ್​ಡಿನಷ್ಟು ತ್ಯಾಜ್ಯ ನೀರು ಸಂಸ್ಕರಿಸಬಹುದು. ಅಲ್ಲದೆ, ಜೈಕಾ ಯೋಜನೆಯಡಿ 14 ಸಣ್ಣ ಎಸ್​​ಟಿಪಿಗಳ ನಿರ್ಮಾಣ ಕಾರ್ಯ ತೆಗೆದುಕೊಂಡಿದ್ದು, ಟೆಂಡರ್ ನಡೆಯುತ್ತಿದೆ. ಅವು 2023ರ ವೇಳೆಗೆ ಅಂತಿಮಗೊಳ್ಳಲಿದೆ. 124 ಎಮ್​ಎಲ್​ಡಿ ತ್ಯಾಜ್ಯ ನೀರು ಸಂಸ್ಕರಿಸುವ ಸಾಮರ್ಥ್ಯ ಇದ್ದು, 1,750 ಎಮ್​ಎಲ್​ಡಿ ಸಾರ್ಮರ್ಥ್ಯದ ಎಸ್​​ಟಿಪಿ ಸಿದ್ಧವಾಗುತ್ತದೆ ಎಂದರು.

ಜಲಮಂಡಳಿ ತ್ಯಾಜ್ಯ ನೀರು ನಿರ್ವಹಣೆಯ ಮುಖ್ಯಅಭಿಯಂತರ ಗಂಗಾಧರ

ಕೊಳಚೆ ನೀರು ಮತ್ತು ತ್ಯಾಜ್ಯದಿಂದ ಕೊರೊನಾ ಹರಡಲಿದೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಆದರೆ, ಚರಂಡಿ ನೀರಿನಿಂದ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ತ್ಯಾಜ್ಯ ನೀರು ಸಂಸ್ಕರಿಸುವ ಘಟಕಗಳ ನೌಕರರಿಗೆ ಈವರೆಗೂ ಕೊರೊನಾ ಬಾಧಿಸಿಲ್ಲ. ಹೀಗಾಗಿ ಈ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡುವಂತಹ ಅಗತ್ಯ ಬಂದಿಲ್ಲ. ಜಲಮಂಡಳಿ ಸಿಬ್ಬಂದಿ ಭಯಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಂಸ್ಕರಿಸಿದ ನೀರನ್ನು ಕೆಎಂಸಿ ವ್ಯಾಲಿಯಿಂದ 400 ಎಮ್​ಎಲ್​ಡಿ ನೀರನ್ನು ಕೋಲಾರದ 124 ಕೆರೆಗೆ ತುಂಬಿಸಲಾಗುತ್ತಿದೆ. ಹೆಬ್ಬಾಳ ವ್ಯಾಲಿಯಿಂದ 95 ಎಮ್​ಎಲ್​ಡಿ ನೀರು ಚಿಕ್ಕಬಳ್ಳಾಪುರಕ್ಕೆ, ವಿ ವ್ಯಾಲಿಯಿಂದ ನೆಲಂಮಗಲ, ದೊಡ್ಡಬಳ್ಳಾಪುರಕ್ಕೆ ನೀರು ಸಾಗಿಸುವ ಬಗ್ಗೆ ಸಭೆ ನಡೆದಿದೆ ಎಂದರು.

ನಗರದಲ್ಲಿ ಅಪಾರ್ಟ್​​ಮೆಂಟ್​​ಗಳಲ್ಲಿಯೂ ಸಂಸ್ಕರಿಸಿದ ನೀರನ್ನು ಪಾರ್ಕ್, ಗಾರ್ಡನಿಂಗ್ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಜಲಮಂಡಳಿಯಲ್ಲಿ ಮಾನವ ತ್ಯಾಜ್ಯ ನೀರನ್ನು ಮಾತ್ರ ಸಂಸ್ಕರಣೆ ಮಾಡಲಾಗುತ್ತಿದೆ. ಆದರೆ, ಕಾರ್ಖಾನೆ, ಕೈಗಾರಿಕೆಗಳ ಕೆಮಿಕಲ್​​ಗಳನ್ನು ಟ್ರೀಟ್ ಮಾಡುವ ಎಸ್​ಟಿಪಿಗಳು ಸದ್ಯ ಇಲ್ಲ. ಪುಟ್ಟೇನಹಳ್ಳಿ, ಸಾರಕ್ಕಿ, ಹುಳಿಮಾವು, ಬೆಳ್ಳಂದೂರು ಕೆರೆಗಳಲ್ಲಿಯೂ ಎಸ್​​ಟಿಪಿ ಅಳವಡಿಸಿದ್ದು, ಕಾರ್ಯನಿರ್ವಹಿಸುತ್ತಿದೆ ಎಂದರು. ಒಟ್ಟಿನಲ್ಲಿ ಕೊಳಚೆ ನೀರು ಸಂಸ್ಕರಣೆ ಪೂರ್ಣ ಪ್ರಮಾಣದಲ್ಲಿ ನಡೆಯಬೇಕಾದರೆ 2021ರ ಮಾರ್ಚ್-ಏಪ್ರಿಲ್​​ವರೆಗೆ ಕಾಲಾವಕಾಶ ಬೇಕಾಗಬಹುದು ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.