ETV Bharat / city

ಬೆಂಗಳೂರು: ವೃದ್ಧೆ ಕೊಲೆಗೈದು ಚಿನ್ನಾಭರಣ ದೋಚಿದ ದುಷ್ಕರ್ಮಿಗಳು - Single old woman murder in Bangalore

ಸಿ.ಕೆ.ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿದ ಕಿಡಿಗೇಡಿಗಳು ವೃದ್ಧೆಯನ್ನು ಕೊಂದು, ಆಕೆಯ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ.

ವೃದ್ಧೆ ಕೊಲೆ
ವೃದ್ಧೆ ಕೊಲೆ
author img

By

Published : Jul 3, 2022, 9:34 AM IST

ಬೆಂಗಳೂರು: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯೊಬ್ಬರನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿ ಆರೋಪಿಗಳು ತಲೆಮರೆಸಿಕೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ದಕ್ಷಿಣ ವಿಭಾಗದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ವಿದ್ಯಾಪೀಠ ಸರ್ಕಲ್​ನ ವಿನಾಯಕ ನಗರದಲ್ಲಿ ನಡೆದಿದೆ.

ಯಶೋದಮ್ಮ (75) ಕೊಲೆಯಾದವರು. ದುಷ್ಕರ್ಮಿಗಳು ವೃದ್ಧೆಯನ್ನ ಕೊಂದು, ಆಕೆಯ ಬಳಿ ಇದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದರು.

ವೃದ್ಧೆಗೆ ಒಬ್ಬ ಮಗ ಮತ್ತು ಮೊಮ್ಮಗನಿದ್ದು ಬೇರೆಡೆ ನೆಲೆಸಿದ್ದಾರೆ. ಒಬ್ಬರೇ ಮನೆಯಲ್ಲಿರುವುದನ್ನು ಗಮನಿಸಿದ ಆರೋಪಿಗಳು ದುಷ್ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಕೊಚ್ಚಿ ವಿಮಾನನಿಲ್ದಾಣದಲ್ಲಿ ಪ್ರಯಾಣಿಕನ ಕಿರಿಕ್; ತಪಾಸಣೆಗೆ ಸಿಟ್ಟಾಗಿ ಬ್ಯಾಗಲ್ಲಿ 'ಬಾಂಬ್'​ ಇದೆ ಎಂದ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.