ಬೆಂಗಳೂರು: ಆರ್‌ಎಸ್‌ಎಸ್ ವಿಚಾರ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯ ಸಿ.ಟಿ.ರವಿ ನಡುವೆ ಟ್ವಿಟ್ಟರ್ ವಾರ್ ಮುಂದುವರಿದಿದೆ.
ಕುಮಾರಸ್ವಾಮಿ ಅವರಿಗೆ ಸಂಘದ ಬಗ್ಗೆ ಅನುಮಾನಗಳಿದ್ದರೆ ತಂದೆ ದೇವೇಗೌಡರಲ್ಲಿ ಕೇಳಬೇಕು. ನೀವು ವಿರೋಧ ಪಕ್ಷದಲ್ಲಿರುವ ಕಾರಣ ರಾಜಕೀಯದ ಕನ್ನಡಕ ಹಾಕಿ ಆರ್‌ಎಸ್‌ಎಸ್ ಅನ್ನು ನೋಡಬೇಡಿ. ಸಂಘ ಯಾರನ್ನೂ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿಲ್ಲ. ನಮ್ಮ ಸಿದ್ದಾಂತ ಒಪ್ಪಿದರೆ ಆರ್‌ಎಸ್‌ಎಸ್ ನಿಮ್ಮನ್ನೂ ಸ್ವಾಗತಿಸುತ್ತದೆ. ಸಂಘ ಯಾರನ್ನೂ, ಯಾವುದೇ ರಾಜಕೀಯ ಪಕ್ಷ ಸೇರಿ ಎಂದು ಹೇಳುವುದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
-
ಕುಮಾರಸ್ವಾಮಿ ಅವರಿಗೆ ಇನ್ನೂ ಸಂಘದ ಬಗ್ಗೆ ಅನುಮಾನಗಳಿದ್ದರೆ ನಿಮ್ಮ ತಂದೆ ದೇವೇಗೌಡರಲ್ಲಿ ಕೇಳಬೇಕು.
— C T Ravi 🇮🇳 ಸಿ ಟಿ ರವಿ (@CTRavi_BJP) October 7, 2021 " class="align-text-top noRightClick twitterSection" data="
ನೀವು ವಿರೋಧ ಪಕ್ಷದಲ್ಲಿರುವ ಕಾರಣ ರಾಜಕೀಯದ ಕನ್ನಡಕ ಹಾಕಿ ಆರ್‌ಎಸ್‌ಎಸ್ ಅನ್ನು ನೋಡಬೇಡಿ.
ಸಂಘ ಯಾರನ್ನೂ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿಲ್ಲ. ನಮ್ಮ ಸಿದ್ದಾಂತ ಒಪ್ಪಿದರೆ ಆರ್‌ಎಸ್‌ಎಸ್ ನಿಮ್ಮನ್ನು ಸ್ವಾಗತಿಸುತ್ತದೆ.
13/14
">ಕುಮಾರಸ್ವಾಮಿ ಅವರಿಗೆ ಇನ್ನೂ ಸಂಘದ ಬಗ್ಗೆ ಅನುಮಾನಗಳಿದ್ದರೆ ನಿಮ್ಮ ತಂದೆ ದೇವೇಗೌಡರಲ್ಲಿ ಕೇಳಬೇಕು.
— C T Ravi 🇮🇳 ಸಿ ಟಿ ರವಿ (@CTRavi_BJP) October 7, 2021
ನೀವು ವಿರೋಧ ಪಕ್ಷದಲ್ಲಿರುವ ಕಾರಣ ರಾಜಕೀಯದ ಕನ್ನಡಕ ಹಾಕಿ ಆರ್‌ಎಸ್‌ಎಸ್ ಅನ್ನು ನೋಡಬೇಡಿ.
ಸಂಘ ಯಾರನ್ನೂ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿಲ್ಲ. ನಮ್ಮ ಸಿದ್ದಾಂತ ಒಪ್ಪಿದರೆ ಆರ್‌ಎಸ್‌ಎಸ್ ನಿಮ್ಮನ್ನು ಸ್ವಾಗತಿಸುತ್ತದೆ.
13/14ಕುಮಾರಸ್ವಾಮಿ ಅವರಿಗೆ ಇನ್ನೂ ಸಂಘದ ಬಗ್ಗೆ ಅನುಮಾನಗಳಿದ್ದರೆ ನಿಮ್ಮ ತಂದೆ ದೇವೇಗೌಡರಲ್ಲಿ ಕೇಳಬೇಕು.
— C T Ravi 🇮🇳 ಸಿ ಟಿ ರವಿ (@CTRavi_BJP) October 7, 2021
ನೀವು ವಿರೋಧ ಪಕ್ಷದಲ್ಲಿರುವ ಕಾರಣ ರಾಜಕೀಯದ ಕನ್ನಡಕ ಹಾಕಿ ಆರ್‌ಎಸ್‌ಎಸ್ ಅನ್ನು ನೋಡಬೇಡಿ.
ಸಂಘ ಯಾರನ್ನೂ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿಲ್ಲ. ನಮ್ಮ ಸಿದ್ದಾಂತ ಒಪ್ಪಿದರೆ ಆರ್‌ಎಸ್‌ಎಸ್ ನಿಮ್ಮನ್ನು ಸ್ವಾಗತಿಸುತ್ತದೆ.
13/14
ದೇವೇಗೌಡರಿಗೆ ಆರ್‌ಎಸ್‌ಎಸ್ ಸಿದ್ದಾಂತದಲ್ಲಿ ನಂಬಿಯಿದೆ:
1977ರಲ್ಲಿ ಬೆಂಗಳೂರಿನಲ್ಲಿ ನಡೆದ ಸಂಘದ ಕಾರ್ಯಕ್ರಮದಲ್ಲಿ ಅಂದಿನ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್, ಕೆ.ಎಸ್.ಹೆಗ್ಡೆ, ಡಾ.ಜಾನ್ ಜೊತೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕುಳಿತಿದ್ದರು. ಅಂದರೆ ದೇವೇಗೌಡರಿಗೆ ಆರ್‌ಎಸ್‌ಎಸ್ ಸಿದ್ದಾಂತದಲ್ಲಿ ನಂಬಿಯಿದೆ ಎಂದು ಅರ್ಥವಲ್ಲವೇ?.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಮುಂಡೇಶ್ವರಿ ಚುನಾವಣಾ ಪ್ರಚಾರದ ವೇಳೆ ನಿಮ್ಮ ತಂದೆ ದೇವೇಗೌಡರು ಆರ್‌ಎಸ್‌ಎಸ್ ಉತ್ತಮ ಸಂಘಟನೆ, 1975ರಲ್ಲಿ ತುರ್ತುಪರಿಸ್ಥಿತಿ ವೇಳೆ ನಾವೆಲ್ಲ ಬಂಧನವಾದಾಗ ಎಲ್.ಕೆ.ಅಡ್ವಾಣಿ ಮತ್ತಿತರರು ನಡೆದುಕೊಂಡ ರೀತಿ ನನಗೆ ಮೆಚ್ಚುಗೆಯಾಯಿತು. ಹೀಗಾಗಿ ಆರ್‌ಎಸ್‌ಎಸ್ ಹೊಗಳುತ್ತೇನೆ ಎಂದು ಹೇಳಿದ್ದರು.
ಮಾಜಿ ಪ್ರಧಾನಿ ದೇವೇಗೌಡ ಅವರು ಆರ್‌ಎಸ್‌ಎಸ್ ಸಿದ್ದಾಂತಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಅವರ ಪುತ್ರ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾತ್ರ ಸಂಘದ ಸಿದ್ದಾಂತಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ಅಪ್ರಬುದ್ಧತೆಗೆ ಸಾಕ್ಷಿ ಎಂದು ಹೆಚ್‌ಡಿಕೆಯನ್ನು ಕುಟುಕಿದ್ದಾರೆ.
ಇದನ್ನೂ ಓದಿ: RSS ಸಂಘದ ಶಾಖೆಗೆ ಸೇರಿಕೊಂಡರೆ ಇನ್ನೆಷ್ಟು ಸತ್ಯ ಸಂಗತಿಗಳು ಗೊತ್ತಾಗಬಹುದು: ಹೆಚ್ಡಿಕೆ ಟಾಂಗ್!