ETV Bharat / city

ಪಶ್ಚಿಮ ವಿಭಾಗ ಪೊಲೀಸರ ಭರ್ಜರಿ ಕಾರ್ಯಾಚರಣೆ.. ಇಬ್ಬರು ಮೊಬೈಲ್​ ಕಳ್ಳರ ಬಂಧನ - western division police arrest robbers

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನಗರದ ಹಲವಾರು ಕಡೆ ಮೊಬೈಲ್ ಕಳವು ಮಾಡಿದ ಪ್ರಕರಣಗಳು ಪತ್ತೆಯಾಗಿವೆ. 80 ವಿವಿಧ ಕಂಪನಿ ಮೊಬೈಲ್​ಗಳು, ಹತ್ತು ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಿಸಿದ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ..

custody of two mobile robbers
ಇಬ್ಬರು ಮೊಬೈಲ್​ ಕಳ್ಳರ ಬಂಧನ
author img

By

Published : Jan 19, 2021, 4:55 PM IST

ಬೆಂಗಳೂರು : ಚಾಕು ತೋರಿಸಿ ಹೆದರಿಸಿ ಮೊಬೈಲ್ ಕಿತ್ತುಕೊಂಡು ಹೋಗುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

custody of two mobile robbers
ಕಳ್ಳರಿಂದ ವಶಕ್ಕೆ ಪಡೆಯಲಾದ 80 ವಿವಿಧ ಕಂಪನಿಯ ಮೊಬೈಲ್​ಗಳು

ಅಶೋಕ್ ಕುಮಾರ್ ಹಾಗೂ ಆಂಜನೇಯಲು ಎಂಬುವರು ಬಂಧಿತ ಆರೋಪಿಗಳು. ಉಪ್ಪಾರಪೇಟೆ ಸರಹದ್ದಿನ ರಸ್ತೆಯಲ್ಲಿ ಓಡಾಡುತ್ತಿದ್ದವರಿಗೆ ಆರೋಪಿಗಳು ಚಾಕು ತೋರಿಸಿ ಮೊಬೈಲ್‌ ಕಿತ್ತುಕೊಂಡು ಬೈಕ್​ನಲ್ಲಿ ಎಸ್ಕೇಪ್ ಆಗುತ್ತಿದ್ದರು. ವ್ಯಕ್ತಿಯೊಬ್ಬರು ಈ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಓದಿ:ಮಂಗಳೂರು ಗೋಲಿಬಾರ್​ ಪ್ರಕರಣ: ಪ್ರತೀಕಾರವಾಗಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಮಾಯಾ ಗ್ಯಾಂಗ್​ ಅಂದರ್​

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನಗರದ ಹಲವಾರು ಕಡೆ ಮೊಬೈಲ್ ಕಳವು ಮಾಡಿದ ಪ್ರಕರಣಗಳು ಪತ್ತೆಯಾಗಿವೆ. 80 ವಿವಿಧ ಕಂಪನಿ ಮೊಬೈಲ್​ಗಳು, ಹತ್ತು ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಿಸಿದ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.