ETV Bharat / city

ವಸತಿ ಫಲಾನುಭವಿಗಳಿಗೆ ಸಕಾಲದಲ್ಲಿ ಕಂತಿನ ಸಾಲ ನೀಡಲು ಬ್ಯಾಂಕ್​ಗಳಿಗೆ ಸೂಚನೆ: ವಿ.ಸೋಮಣ್ಣ

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಪಿಎಂ ಸ್ವನಿಧಿ ಮತ್ತು ಪಿಎಂ ಆವಾಸ್​​ ಯೋಜನೆ ಹಾಗೂ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

ವಿ.ಸೋಮಣ್ಣ
ವಿ.ಸೋಮಣ್ಣ
author img

By

Published : Feb 11, 2021, 3:15 PM IST

ಬೆಂಗಳೂರು: ವಸತಿ ಫಲಾನುಭವಿಗಳಿಗೆ ಸಕಾಲದಲ್ಲಿ ಸಾಲ ನೀಡುವಂತೆ ಬ್ಯಾಂಕ್​ನವರಿಗೆ ಸೂಚನೆ ನೀಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ

ಸಿಎಂ ನೇತೃತ್ವದಲ್ಲಿ ಪಿಎಂ ಸ್ವನಿಧಿ ಮತ್ತು ಪಿಎಂ ಆವಾಸ್​​ ಯೋಜನೆ ಹಾಗೂ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ವಿ.ಸೋಮಣ್ಣ, 2023ರೊಳಗೆ ಯಾರಿಗೆ ಸೂರಿಲ್ಲ ಅವರಿಗೆ ಸೂರು ಕಲ್ಪಿಸಲಾಗುತ್ತದೆ. ಇಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಿದ್ದೇವೆ. ಇದೊಂದು ಐತಿಹಾಸಿಕ‌ ತೀರ್ಮಾನ. 3.40 ಲಕ್ಷ ಮನೆಗಳನ್ನು ಕಟ್ಟಲು ತೀರ್ಮಾನ ಮಾಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಇದಕ್ಕೆ ಗ್ರಾಂಟ್ ಸಿಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಾಯಧನ ನೀಡುತ್ತಿದ್ದು, ಉಳಿಕೆ ಹಣವನ್ನು ಬ್ಯಾಂಕ್​ನಿಂದ ಪಡೆಯಬೇಕು. ಆದರೆ ಬ್ಯಾಂಕ್​ಗಳು ಹಣವನ್ನು ಸರಿಯಾಗಿ ನೀಡುತ್ತಿರಲಿಲ್ಲ. ದಾಖಲೆ ಕೇಳಿ ಫಲಾನುಭವಿಗಳನ್ನು ಅಲೆದಾಡಿಸುತ್ತಿದ್ದರು. ಹಾಗಾಗಿ ಬ್ಯಾಂಕ್​ನವರನ್ನು ಕರೆದು ಸಭೆ ನಡೆಸಿದ್ದೇವೆ. ಮೂರು ತಿಂಗಳಲ್ಲಿ ಬ್ಯಾಂಕ್​​ನವರು ಕಂತಿನ ಸಾಲವನ್ನು ವಿಲೇವಾರಿ ಮಾಡಬೇಕು ಎಂದು ಸೂಚಿಸಿದ್ದು, ಮತ್ತೆ ಸಭೆ ನಡೆಸುತ್ತೇವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಸಂಬಂಧ ಫಲಾನುಭವಿಗಳಿಗೆ 12 ಲಕ್ಷ ರೂ. ಸಾಲ ಕೊಡಲು ನಿರ್ಧರಿಸಲಾಗಿದೆ. ಮನೆ ಕಟ್ಟಿಕೊಳ್ಳಲು ಪರಿಶಿಷ್ಟ ಜಾತಿ, ಪಂಗಡಕ್ಕೆ 3.5 ಲಕ್ಷ ರೂ. ಹಣ ಸರ್ಕಾರ ನೀಡಲಿದೆ. ಬೇರೆ ವರ್ಗದವರಿಗೆ 1.5 ಲಕ್ಷ ರೂ. ಹಣವನ್ನು ಸರ್ಕಾರ ಕೊಡುತ್ತಿದೆ. ಬಡ ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಹಣ ನೀಡುವಂತೆ ಪ್ರಧಾನಿ ಸೂಚಿಸಿದ್ದಾರೆ. ಹೀಗಾಗಿ ಬಡವರ ಪರ ಯೋಜನೆ ತರುತ್ತಿದ್ದೇವೆ ಎಂದು ತಿಳಿಸಿದರು.

ಸರ್ಕಾರ ಆರ್ಥಿಕ ಕೊರತೆ ಎದುರಿಸುತ್ತಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಖಜಾನೆಯಲ್ಲಿ ಹಣ ಇದೆಯಾ ಅನ್ನೋದು ಮುಖ್ಯವಲ್ಲ, ಇವು ಬಡವರ ಯೋಜನೆಗಳಾಗಿವೆ. ಎಲ್ಲದಕ್ಕೂ ಸರ್ಕಾರದ ಬಳಿ ಹಣವಿದೆ ಎಂದು ಸ್ಪಷ್ಟಪಡಿಸಿದರು.

ಬಾಲ್ಕಿ ವಸತಿ ಯೋಜನೆ ಅಕ್ರಮದ ಕುರಿತು ಮಾತನಾಡಿದ ಅವರು, ಕೈಲಾಗದವರು ಮೈ ಪರಚಿಕೊಂಡರಂತೆ. ನಮಗೆ ಈಶ್ವರ್ ಖಂಡ್ರೆ ವೈರಿನೂ ಅಲ್ಲ, ಏನೂ ಇಲ್ಲ. ಜಿಲ್ಲಾಧಿಕಾರಿಗಳು ಈ ಕುರಿತು ತನಿಖೆ ಮಾಡುತ್ತಿದ್ದಾರೆ. ಅಕ್ರಮವನ್ನು ತಪ್ಪಿಸುವುದಷ್ಟೇ ನಮ್ಮ ಉದ್ದೇಶ ಎಂದರು.

ಸಭೆಯಲ್ಲಿ ಡಿಸಿಎಂ ಅಶ್ವತ್ಥ್​ ನಾರಾಯಣ, ವಸತಿ ಸಚಿವ ಸೋಮಣ್ಣ, ಸಿ.ಎಸ್.ರವಿ ಕುಮಾರ್, ವಸತಿ‌ ಇಲಾಖೆ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು, ರಿಸರ್ವ್ ಬ್ಯಾಂಕ್, ಎಸ್​ಬಿ‌ಐ, ಕೆನರಾ ಬ್ಯಾಂಕ್ ಸೇರಿದಂತೆ ರಾಜ್ಯದ ಎಲ್ಲಾ ಬ್ಯಾಂಕ್​ಗಳ ಅಧಿಕಾರಿಗಳು ಭಾಗಿಯಾಗಿದ್ದರು.

ಬ್ಯಾಂಕ್ ಅಧಿಕಾರಿಗಳಿಗೆ ಸಿಎಂ ತರಾಟೆ:

ಪಿಎಂ ಸ್ವನಿಧಿ ಯೋಜನೆ ಪ್ರಗತಿ ಪರಿಶೀಲನೆ ವೇಳೆ ಸಿಎಂ ಬ್ಯಾಂಕ್ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಬ್ಯಾಂಕ್​ಗಳ ವರ್ತನೆಗೆ ಸಿಎಂ ಕಿಡಿಕಾರಿದರು. ಸಾಲ ನೀಡುವುದರಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಅನೇಕ ಬ್ಯಾಂಕ್​ಗಳು ಸಾಲ ಕೊಡುತ್ತಿಲ್ಲ ಅಂತ ನಮಗೆ ದೂರು ಬಂದಿದೆ. ಅಂಕಿ-ಅಂಶಗಳು ನೀವು ಸಾಲ ಸರಿಯಾಗಿ ಕೊಡುತ್ತಿಲ್ಲ ಅಂತ ಹೇಳುತ್ತಿವೆ. ನಿಮ್ಮ ಈ ವರ್ತನೆ ಸಹಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪಿಎಂ ಸ್ವನಿಧಿ ಯೋಜನೆಯಲ್ಲಿ ನಾವು ಮೊದಲ ಸ್ಥಾನಕ್ಕೆ ಬರಬೇಕು. ಫೆಬ್ರವರಿ ಅಂತ್ಯದ ವೇಳೆಗೆ ಎಲ್ಲಾ ಸರಿ ಮಾಡಬೇಕು. ಪ್ರಾಮಾಣಿಕವಾಗಿ ಸಾಲ ಕೊಡುವ ಕೆಲಸ ಮಾಡಿ. ಲೋನ್ ಕೊಡದ ವಿಚಾರ ಮತ್ತೆ ಗಮನಕ್ಕೆ ಬಂದರೆ ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.