ಬೆಂಗಳೂರು : ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ವೊಂದರಲ್ಲಿ ಮುಸ್ಲಿಮರ ಪ್ರಾರ್ಥನಾ ಸ್ಥಳವನ್ನಾಗಿ ಮಾಡಲಾಗಿತ್ತು. ಇದೀಗ ಆ ಸ್ಥಳವನ್ನು ಮತ್ತೆ ರೈಲ್ವೆ ಸಹಾಯಕರ ರೆಸ್ಟ್ ರೂಂ ಆಗಿ ಬದಲಾಯಿಸಲಾಗಿದೆ.
ಮೆಜೆಸ್ಟಿಕ್ ಬಳಿ ಇರುವ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಹಮಾಲಿಗಳ ವಿಶ್ರಾಂತಿ ಕೊಠಡಿಯೊಂದರಲ್ಲಿ ಮುಸ್ಲಿಂ ಸಮುದಾಯದ ಹಮಾಲಿಗಳು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ನಾನು ಮರಳಿನವರಿಂದ ಹಣ ತೆಗೆದುಕೊಂಡಿಲ್ಲ, ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ರೆಡಿ: ಶಾಸಕ ಹಾಲಪ್ಪ
ಇದೀಗ ಪ್ರಾರ್ಥನಾ ಸ್ಥಳವನ್ನು ಮತ್ತೆ ರೈಲ್ವೆ ಸಹಾಯಕರ ರೆಸ್ಟ್ ರೂಂ ಆಗಿ ಬದಲಾಯಿಸಲಾಗಿದೆ. ಕೊಠಡಿಯಲ್ಲಿ ಮೂರು ಧರ್ಮದ ದೇವರ ಭಾವಚಿತ್ರವನ್ನು ಹಾಕಲಾಗಿದ್ದು, ಕೊಠಡಿಯ ವಿನ್ಯಾಸವನ್ನು ಬದಲಾಯಿಸಲಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ