ಬೆಂಗಳೂರು: ಕಳಪೆ ಗುಣಮಟ್ಟದ ಪಿಪಿಇ ಕಿಟ್ಗಳನ್ನು ಪೂರೈಸಿದ್ದ ಕಂಪನಿ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಹೀಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಪಿಪಿಇ ಕಿಟ್ಗಳು ಈಗ ಮೂಲೆ ಸೇರಲಿವೆ.
ಈವರೆಗೂ ಕಳಪೆ ಕಿಟ್ ಬಳಸಿದ್ದ ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಆತಂಕ ಹೆಚ್ಚಿದೆ. ಏಕೆಂದರೆ, ದಿನೆದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಕಿಟ್ಗಳನ್ನು ಪೂರೈಕೆಯಾಗಿವೆ. ನಮ್ಮ ಬಳಿ ಅಗತ್ಯಕ್ಕಿಂತ ಹೆಚ್ಚು ಪಿಪಿಇ ಕಿಟ್ಗಳಿದ್ದರೂ ಪ್ರಯೋಜನ ಇಲ್ಲವಾಗಿದೆ ಎಂದು ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.
![PPE kit worth crores of rupees](https://etvbharatimages.akamaized.net/etvbharat/prod-images/6922678_463_6922678_1587722891138.png)
ಆದರೆ, ತುರ್ತು ಸಂದರ್ಭದಲ್ಲಿ ಟೆಂಡರ್ ಇಲ್ಲದೇ ದೋಷಪೂರಿತ ಪಿಪಿಇ ಕಿಟ್ಗಳನ್ನು ಪಡೆಯಲಾಗಿದೆ. ಮಹಾರಾಷ್ಟ್ರ ಮೂಲದ ಸಂಸ್ಥೆಯಿಂದ ಸರ್ಕಾರ ಖರೀದಿಸಿದ್ದ ಪಿಪಿಇ ಕಿಟ್ ಸರಿಯಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಒಟ್ಟು 7-10 ಸಂಸ್ಥೆಗಳಿಂದ ಈ ಕಿಟ್ಗಳನ್ನು ರಾಜ್ಯ ಸರ್ಕಾರ ಪಡೆದಿತ್ತು. ಅದರಲ್ಲಿ ಪ್ಲಾಸ್ಟಿಕ್ ಸರ್ಜ್ ಸಂಸ್ಥೆಗೆ ₹22 ಕೋಟಿ ರೂಪಾಯಿ ಆರ್ಡರ್ ನೀಡಲಾಗಿತ್ತು.
![PPE kit worth crores of rupees](https://etvbharatimages.akamaized.net/etvbharat/prod-images/kn-bng-3-corona-ppekit-kalapae-7201801_24042020144108_2404f_1587719468_558.jpg)
3 ಲಕ್ಷ ಪಿಪಿಇ ಕಿಟ್ ಪೂರೈಸಲು ವರ್ಕ್ ಆರ್ಡರ್ ನೀಡಲಾಗಿತ್ತು. ಅದರಲ್ಲಿ 1.5 ಲಕ್ಷ ಕಿಟ್ಗಳನ್ನು ಸಂಸ್ಥೆ ಕಳುಹಿಸಿದೆ. ಅದನ್ನು ಬೇರೆ ಜಿಲ್ಲೆಗಳಿಗೆ ರವಾನಿಸಲಾಗಿದೆ. ಆದರೆ, ಇವುಗಳ ಗುಣಮಟ್ಟ ಕಳಪೆ ಎಂದು ತಿಳಿದಿದ್ದೇ ಎಲ್ಲಾ ಕಿಟ್ಗಳನ್ನು ಮರಳಿಸುವಂತೆ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ ತಿಳಿಸಿದೆ.
ಅತ್ಯಂತ ತುರ್ತಾಗಿ ಬೇಕಾಗಿರುವ ಕಿಟ್ಗಳನ್ನು ಹೊರತುಪಡಿಸಿ ಪ್ಲಾಸ್ಟಿಕ್ ಸರ್ಜ್ ಸಂಸ್ಥೆಯ ಎಲ್ಲಾ ಕಿಟ್ಗಳನ್ನು ಮರಳಿಸಲಾಗಿದೆ. ಸಂಕಷ್ಟದ ಸಂದರ್ಭದಲ್ಲೂ ಗೋಲ್ಮಾಲ್ ಮಾಡಿದ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೆಎಸ್ಎಲ್ಡಿಎಸ್ ಸಜ್ಜಾಗಿದೆ.