ETV Bharat / city

OMICRON: ರಾಜ್ಯದಲ್ಲಿ ಮತ್ತೆ ಐವರಿಗೆ ಒಮಿಕ್ರಾನ್ ಸೋಂಕು ದೃಢ : 19ಕ್ಕೆ ಏರಿದ ಸೋಂಕಿತರ ಸಂಖ್ಯೆ - ಕೊರೊನಾ ಸೋಂಕಿತರ ಸಂಖ್ಯೆ

Omicron cases in Karnataka ಕೊರೊನಾ ರೂಪಾಂತರಿ ಒಮಿಕ್ರಾನ್​ ರಾಜ್ಯಕ್ಕೆ ಲಗ್ಗೆಯಿಟ್ಟಿದ್ದು, ನಿಧಾನಗತಿಯಲ್ಲಿ ವ್ಯಾಪಿಸುತ್ತಿದೆ. ಇಂದು ಐದು ಜನರಿಗೆ ಒಮಿಕ್ರಾನ್​ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

five-omicron-infected-found-in-the-state
ಒಮಿಕ್ರಾನ್ ಸೋಂಕು
author img

By

Published : Dec 20, 2021, 9:22 AM IST

Updated : Dec 20, 2021, 9:59 AM IST

ಬೆಂಗಳೂರು : ರಾಜ್ಯವನ್ನು ನಿಧಾನವಾಗಿ ಒಮಿಕ್ರಾನ್ ಸೋಂಕು ಆಕ್ರಮಿಸುತ್ತಿದೆ. ಇಂದು ಮತ್ತೆ ಐವರಲ್ಲಿ ಒಮಿಕ್ರಾನ್ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 19ಕ್ಕೆ ಏರಿದೆ. ಮೊನ್ನೆಯಷ್ಟೇ 5 ಮಂದಿಗೆ ಸೋಂಕು ಹರಡಿತ್ತು, ಇದೀಗ ಧಾರವಾಡ, ಉಡುಪಿ, ಭದ್ರಾವತಿ, ಮಂಗಳೂರಿನಲ್ಲಿ ಸೋಂಕು ದೃಢಪಟ್ಟಿದೆ.

  • Five cases of Omicron have been confirmed on Dec 19th:
    🔹 Dharwad: 54 yr male
    🔹 Bhadravathi: 20 yr female
    🔹 Udupi: 82 yr male and 73 yr female
    🔹 Mangaluru: 19 yr female#Omicronindia #Covid_19 @BSBommai

    — Dr Sudhakar K (@mla_sudhakar) December 20, 2021 " class="align-text-top noRightClick twitterSection" data=" ">

ಒಮಿಕ್ರಾನ್ ಸೋಂಕಿತರ ಟ್ರಾವೆಲ್ ಹಿಸ್ಟರಿ

ಕೇಸ್- 15 : ಧಾರವಾಡದ 54 ವರ್ಷದ ಮಹಿಳೆಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದ್ದು ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಪರ್ಕದಿಂದ ಬಂದಿರಬಹುದೆಂದು ಅಂದಾಜಿಸಲಾಗಿದೆ. ಸದ್ಯ ರೋಗ ಲಕ್ಷಣಗಳಿಂದ ಮುಕ್ತರಾಗಿದ್ದು, ಹೋಂ ಐಸೋಲೇಷನ್​ನಲ್ಲಿ ಇದ್ದಾರೆ. ಇವರ ಪ್ರಾಥಮಿಕವಾಗಿ 4 ಹಾಗೂ 133 ದ್ವಿತೀಯ ಸಂಪರ್ಕಿತರು ಇದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ.

ಕೇಸ್ -16 : ಶಿವಮೊಗ್ಗದ ಭದ್ರಾವತಿಯ 20 ವರ್ಷದ ಮಹಿಳೆಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದ್ದು ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಪರ್ಕದಿಂದ ಬಂದಿರಬಹುದೆಂಬ ಶಂಕೆ ಇದೆ. ಈಕೆಯ ಸಂಪರ್ಕದಲ್ಲಿದ್ದ 218 ಜನರನ್ನು ಪರೀಕ್ಷಿಸಿದಾಗ 26 ಜನರಿಗೆ ಸೋಂಕು ದೃಢಪಟ್ಟಿದೆ. ಸುಮಾರು 27 ಜನರ ಸ್ಯಾಂಪಲ್ಸ್ ಅನ್ನು ಜೀನೋಮ್ ಸೀಕ್ವೆನ್ಸಿಂಗ್​ಗೆ ಕಳುಹಿಸಲಾಗಿದೆ.

ಕೇಸ್ 17 : ಉಡುಪಿಯ 73 ವರ್ಷ ವಯಸ್ಸಿನ ವೃದ್ಧೆಗೆ ಸೋಂಕು ತಗುಲಿದ್ದು, ಯಾವುದೇ ರೋಗಲಕ್ಷಣಗಳು ಇಲ್ಲ. ಇವರ ಸಂಪರ್ಕದಲ್ಲಿದ್ದ ಕುಟುಂಬದ 11 ವರ್ಷದವರಿಗೆ ಪಾಸಿಟಿವ್ ದೃಢಪಟ್ಟಿದೆ. ಇವ್ರ ಸಂಪರ್ಕದಲ್ಲಿದ್ದ ನಾಲ್ವರಲ್ಲಿ ಮೂವರಿಗೆ ಸೋಂಕು ತಗುಲಿದ್ದು ಮೂವರ ಸ್ಯಾಂಪಲ್ಸ್ ಜೀನೋಮ್ ಸೀಕ್ವೆನಿಂಗ್ಕ ಪರೀಕ್ಷೆಗೆ ಕಳುಹಿಸಲಾಗಿದೆ.

ಕೇಸ್ 18 : ಉಡುಪಿಯ 82 ವರ್ಷ ವಯಸ್ಸಿನ ವೃದ್ಧೆಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಯಾವುದೇ ರೋಗ ಲಕ್ಷಣಗಳು ಇಲ್ಲ. ಕೇಸ್ 17 ರ ಕುಟುಂಬದವರಾಗಿದ್ದಾರೆ‌.

ಕೇಸ್ 19 : ಮಂಗಳೂರಿನ 19 ವರ್ಷ ವಯಸ್ಸಿನ ಯುವತಿಗೆ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಈಕೆಗೆ ಪ್ರಾಥಮಿಕ ಸಂಪರ್ಕದಲ್ಲಿ 42 ಹಾಗೂ 293 ಜನರು ದ್ವಿತೀಯ ಸಂಪರ್ಕಿತರಿದ್ದು, ಇದರಲ್ಲಿ 18 ಜನರಿಗೆ ಕೋವಿಡ್​ ಪಾಸಿಟಿವ್ ಬಂದಿದೆ. 19 ಜನರ ಸ್ಯಾಂಪಲ್‌ಗಳನ್ನು ಜೀನೋಮ್ ಸಿಕ್ವೇನ್ಸಿಂಗ್ ಗೆ ಕಳುಹಿಸಲಾಗಿದೆ.

Last Updated : Dec 20, 2021, 9:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.