ETV Bharat / city

ಸಾರ್ವಜನಿಕರ ಹಣ ಲೂಟಿ ಮಾಡಿದವರ ರಕ್ಷಣೆ ಮಾಡಲ್ಲ: ಆರಗ ಜ್ಞಾನೇಂದ್ರ

ಸಾರ್ವಜನಿಕರ ಹಣ ಲೂಟಿ ಮಾಡಿದವರ ರಕ್ಷಣೆ ಮಾಡಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

not protected to Public money looters, Home minister Araga Jnanendra, Bit coin scam, ಸಾರ್ವಜನಿಕರ ಹಣ ಲೂಟಿ ಮಾಡಿದವರ ರಕ್ಷಣೆ ಮಾಡಲ್ಲ, ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಟ್​ ಕಾಯಿನ್​ ಹಗರಣ,
ಸಾರ್ವಜನಿಕರ ಹಣ ಲೂಟಿ ಮಾಡಿದವರ ರಕ್ಷಣೆ ಮಾಡಲ್ಲ ಎಂದ ಆರಗ ಜ್ಞಾನೇಂದ್ರ
author img

By

Published : Mar 8, 2022, 11:04 AM IST

ಬೆಂಗಳೂರು: ಬಿಟ್ ಕಾಯಿನ್ ಹಗರಣ ವಿಚಾರ ನಾನು ಪ್ರಸ್ತಾಪಿಸಿದ ನಂತರ ಎಫ್ಐಆರ್ ಆಗಿದೆ. ಅಲ್ಲಿವರೆಗೂ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ತಿಳಿಸಿದ್ದಾರೆ.

ವಿಧಾನ ಪರಿಷತ್​ನಲ್ಲಿ ನಿಯಮ 330 ರ ಅಡಿ, ಬಿಟ್ ಕಾಯಿನ್ ಅಂತಾರಾಷ್ಟ್ರೀಯ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ವೆಂಕಟೇಶ್​, ನಮ್ಮಲ್ಲಿ ಬಲಿಷ್ಠ ಪೊಲೀಸ್ ಬಲ ಇದೆ. ಆದರೆ ಯಾಕೆ ತನಿಖೆ ತ್ವರಿತವಾಗಿ ನಡೆಯುತ್ತಿಲ್ಲ. ಕೊಟ್ಯಂತರ ರೂ. ಮೌಲ್ಯದ ಭ್ರಷ್ಟಾಚಾರ ಆಗಿದೆ. ಸಿಬಿಐ ಇಲ್ಲವೇ ಬೇರೆ ತನಿಖಾ ಸಂಸ್ಥೆ ಮೂಲಕ ವಿಚಾರಣೆ ನಡೆಸುವ ಜತೆಗೆ ಇಲ್ಲಿ ಸರ್ಕಾರ ಸಹ ಬೇರೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕಾಟನ್ ಪೇಟೆ ವ್ಯಾಪ್ತಿಯಲ್ಲಿ ಬಿಟ್ ಕಾಯಿನ್ ಕಳ್ಳತನ ಸಂಬಂಧ ದೂರು ದಾಖಲಾಗಿದೆ. ಸರ್ಕಾರದ ದುಡ್ಡು 11.50 ಕೋಟಿ ರೂ ಕಳ್ಳತನ ಆಗಿದೆ. ಹ್ಯಾಕ್ ಆಗಿರುವ ಕಾಯಿನ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇಲ್ಲಿ ಆಗಿದ್ದರೆ ಅದಕ್ಕೆ ದಾಖಲೆ ಒದಗಿಸಿ. ಇಲ್ಲಿ ಕೆಲವರು ಬಿಟ್ ಕಾಯಿನ್ ವಿಚಾರವಾಗಿ ವಂಚನೆ ಮಾಡಿದ್ದಾರೆ. ಸರ್ಕಾರದ ಹಣ ವಂಚನೆ ಆಗಿದ್ದರಲ್ಲಿ 1 ಕೋಟಿಗೂ ಅಧಿಕ ಮೌಲ್ಯ ಮುಟ್ಟುಗೋಲು ಹಾಕಿಕೊಂಡಿದ್ದೇವೆ.

ಉಳಿದ ಹಣ ಹಂತ ಹಂತವಾಗಿ ವಸೂಲು ಮಾಡುತ್ತೇವೆ. ಬಿಟ್ ಕಾಯಿನ್ ನೀಡುವುದಾಗಿ ವಂಚಿಸಿದವರನ್ನೂ ಬಂಧಿಸಿದ್ದೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಚಾರ್ಜ್ ಶೀಟ್ ಹಾಕಿದ್ದೇವೆ. ಮಾಹಿತಿ ಎಲ್ಲ ನಮ್ಮ ಬಳಿ ಇದೆ. ರಾಬಿನ್ ನೀಡಿದ ಹೇಳಿಕೆ ಪ್ರಸ್ತಾಪಿಸಿದರೆ ತುಂಬಾ ಮಂದಿಗೆ ಅವಮಾನ ಆಗಲಿದೆ. ಕೋರ್ಟ್​ನಲ್ಲಿ ವಿಚಾರ ಇದೆ. ಅದಕ್ಕಾಗಿ ಪ್ರಸ್ತಾಪಿಸುವುದಿಲ್ಲ ಎಂದರು.

ಓದಿ: ನೀವು ಹಿರಿಯ ನಾಗರಿಕರಾ? ಆರೋಗ್ಯವಿಮೆ ಪಡೆಯಲು ಬಯಸಿದ್ದೀರಾ?: ಹಾಗಾದರೆ ಈ ಎಲ್ಲ ಅಂಶಗಳನ್ನು ಗಮನಿಸಿ!

ಹೊಸ ಪ್ರಕರಣ ಯಾವುದಾದರೂ ಇದ್ದರೆ ತಾವು ದಾಖಲೆ ನೀಡಿದಲ್ಲಿ ಆ ಸಂಬಂಧ ಸೂಕ್ತ ತನಿಖೆ ನಡೆಸುತ್ತೇವೆ. ನಮ್ಮ ಸರ್ಕಾರದ ಅವಧಿಯಲ್ಲಿ ಆದ ಬಿಟ್ ಕಾಯಿನ್ ಕಳ್ಳತನ ಇದಲ್ಲ. ಫರ್ಜಿಕೆಫೆ ಗಲಾಟೆ ಸಂದರ್ಭ ಶ್ರೀಕಿ ಸಿಕ್ಕಿದ್ದ. ಆಗ ಸೂಕ್ತ ತನಿಖೆ ಆಗಿದ್ದರೆ ಇಷ್ಟು ಮುಂದುವರಿಯುತ್ತಿರಲಿಲ್ಲ. ವಿಚಾರಣೆ ಮಾಡದೇ ಬಿಟ್ಟು, ಜಾಮೀನು ಸಿಗುವಂತೆ ಮಾಡಿದ್ದರೆ ನಮ್ಮ ತಪ್ಪು ಅನ್ನಬಹುದಿತ್ತು. ಆದರೆ ನಮ್ಮ ಪ್ರಯತ್ನ ನಡೆಸಿದ್ದೇವೆ ಎಂದರು.

ಸರ್ಕಾರದ ಹಣ ವಾಪಸ್ ತರಿಸಲು ಪ್ರಯತ್ನ ನಡೆಸಿದ್ದೇವೆ. ಹಂತ ಹಂತವಾಗಿ ತರಿಸುತ್ತೇವೆ. ಸಂಶಯಬೇಡ ಅಂದ ಗೃಹಸಚಿವರಿಗೆ ಯು.ಬಿ. ವೆಂಕಟೇಶ್ ಪ್ರಶ್ನೆ ಮಾಡಿ ಹಣ ವಸೂಲಿಯ ಕಾಲಮಿತಿ ನೀಡಿ ಎಂದರು. ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಇದೊಂದು ಗಂಭೀರ ಅಪರಾಧವಾಗಿದೆ. ಸೂಕ್ತ ತನಿಖೆ ನಡೆಯಲಿ. ಇದರ ಹಿಂದೆ ಯಾರಿದ್ದಾರೆ ಎಂಬ ವಿವರ, ಹೆಸರು ಹೊರಗೆ ಬರಲಿ ಎಂದು ಒತ್ತಾಯಿಸಿದರು.

17 ಮಂದಿ ಬಂಧಿಸಿದ್ದೇವೆ: ನಾಗಪುರದ ಮೂಲದವರು ಸಹ ಕೆಲವರು ಸೇರಿದಂತೆ 17 ಮಂದಿಯನ್ನು ಬಂಧಿಸಿದ್ದೇವೆ. ಹಲವರ ಖಾತೆಯಿಂದ ಹಣ ಖಾಲಿ ಆಗಿದೆ. ತನಿಖೆ ಮಾಡಿ ಹೊರ ತರಿಸುತ್ತೇವೆ ಎಂದ ಗೃಹ ಸಚಿವರ ಮಾತಿನ ಮಧ್ಯೆ ಪ್ರವೇಶಿಸಿದ ಬಿ.ಕೆ. ಹರಿಪ್ರಸಾದ್, ಇದರಲ್ಲಿ ವಿವಿಐಪಿಗಳು ಇದ್ದಾರೆ. ಇದರಿಂದ ಸೂಕ್ತ ತನಿಖೆ ಮಾತ್ರವೇ ಪರಿಹಾರವಾಗಲಿದೆ ಎಂದರು.

ಭೋಜೇಗೌಡ ಮಾತನಾಡಿ, ಹಣ ಕಳ್ಳತನವಾಗಿದೆ. 420 ಕಾಯ್ದೆ ಅಡಿ ಪ್ರಕರಣವಾಗಿದ್ದು ಸುಲಭವಾಗಿ ಜಾಮೀನು ಸಿಗುತ್ತದೆ. ಸರ್ಕಾರ ಕಳ್ಳತನ ಮಾಡಿದವರ ಹಾಗೂ ಕುಟುಂಬದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು. ಮರಿತಿಬ್ಬೇಗೌಡ ಮಾತನಾಡಿ, ಈ ಪ್ರಕರಣದಲ್ಲಿ ಸರ್ಕಾರವೇ ಶಾಮೀಲಾಗಿದೆ ಎನ್ನುವ ಅನುಮಾನ ಕಾಡುತ್ತಿದೆ.

ಸರ್ಕಾರದ ಉನ್ನತಾಧಿಕಾರಿಗಳು, ಕೈಗಾರಿಕೋದ್ಯಮಿ ಗಳು ಇದರಲ್ಲಿ ಇದ್ದಾರೆ. ಸಿಬಿಐಗೆ ಪ್ರಕರಣದ ತನಿಖೆ ವಹಿಸಿ. ತನಿಖೆ ಆಗಲಿ. ಹಿಂದೆ ಸರಿಯಬೇಡಿ. ಈ ಸರ್ಕಾರದ ಮೇಲೆ ಅನುಮಾನ ಇದ್ದು, ಸಿಬಿಐ ತನಿಖೆಯಿಂದ ಮಾತ್ರ ನ್ಯಾಯ ಸಿಗಬಹುದು ಎಂಬ ನಂಬಿಕೆ ನನ್ನದು ಎಂದರು.

ಓದಿ: ಮೈಸೂರು: ಶವಗಳಿಗೆ ಗುಂಡಿ‌ ತೆಗೆದು ಅಂತ್ಯ ಸಂಸ್ಕಾರ ಮಾಡುವ ವೃದ್ಧೆ

ಆಯನೂರು ಮಂಜುನಾಥ್ ಮಾತನಾಡಿ, ಬಟ್ಟೆಯಲ್ಲಿ ಕಲ್ಲು ಕಟ್ಟಿ ಹೊಡೆಯುವ ಬದಲು, ಪ್ರತಿಪಕ್ಷ ಸೇರಿದಂತೆ ಯಾವುದೇ ಸದಸ್ಯರಿಗೆ ಮಾಹಿತಿ ಇದ್ದರೂ, ಹೆಸರು, ದಾಖಲೆ ಇದ್ದರೆ ಸರ್ಕಾರಕ್ಕೆ ನೀಡಲಿ. ನಿಮಗಿರುವ ಮಾಹಿತಿ ಚರ್ಚೆಗೆ ಬಳಸದೇ ಚರ್ಚೆಯ ದಾಖಲೆಯನ್ನು ಸದನಕ್ಕೆ ಒಪ್ಪಿಸಿ ಇಲ್ಲಿನ ಆಸ್ತಿಯಾಗಿ ಬಳಸಲಿ. ಸಭಾಪತಿಗಳು ದಾಖಲೆ ಪಡೆದು ಸರ್ಕಾರಕ್ಕೆ ಸೂಕ್ತ ಸೂಚನೆ ನೀಡಿ. ದಾಖಲೆ ಪಡೆದು ಸರ್ಕಾರದ ತನಿಖೆಗೆ ಕೊಡಬೇಕೆಂದು ಮನವಿ ಮಾಡಿದರು. ದಾಖಲೆ ಇದ್ದು, ಕೇವಲ ಮಾತನಾಡುವುದು ಹಾಗೂ ದಾಖಲೆ ನೀಡದೇ ಇರುವುದು ಸಹ ಅಪರಾಧವಾಗುತ್ತದೆ ಎಂದರು.

ತನಿಖೆ ಆರಂಭವಾಗಲಿ: ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಸೇರಿದಂತೆ ಹಲವರು ಮಾತನಾಡಿ ಸೂಕ್ತ ದಾಖಲೆ ಇರುವವರು ಒದಗಿಸುವುದು ಸೂಕ್ತ ಎಂದರು. ಬಿ.ಕೆ. ಹರಿಪ್ರಸಾದ್ ಮಾತನಾಡಿ, ನಾವು ನೀಡುವ ದಾಖಲೆಯನ್ನು ಸಭಾಪತಿಗಳು ಸರ್ಕಾರಕ್ಕೆ ಒದಗಿಸುತ್ತಾರೆ. ಅಲ್ಲಿ ಸರ್ಕಾರಕ್ಕೆ ಸಂಬಂಧಿಸಿದವರೇ ಇದ್ದರೆ ಸೂಕ್ತ ತನಿಖೆ ಆಗಲ್ಲ. ಇದರಿಂದ ತನಿಖೆ ಆರಂಭವಾಗಲಿ. ಆಗ ದಾಖಲೆ ನೀಡುತ್ತೇವೆ ಎಂದರು.

ಅಂತಿಮವಾಗಿ ಉತ್ತರ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಯಾವುದೇ ದಾಖಲೆ ಇದ್ದರೂ ಸಭಾಪತಿಗಳಿಗೆ ನೀಡಿ. ತನಿಖೆ ಪ್ರಗತಿಯಲ್ಲಿದೆ. ಇದಾದ ನಂತರ ಯಾರೇ ಆದ್ರೂ ಬಚಾವ್ ಮಾಡುವ ಕಾರ್ಯ ಆದಲ್ಲಿ ಪ್ರಶ್ನಿಸಬಹುದು. ಜಾಮೀನಿನ ಮೇಲೆ ಆಚೆ ಬಂದವರ ಮೇಲೆ ವಿಶೇಷ ನಿಗಾ ವಹಿಸಿದ್ದೇವೆ. 36 ಖಾತೆಗೆ ಶ್ರೀಕಿ ಕದ್ದ ಹಣ ಹಂಚಿಕೆಯಾಗಿದೆ. 17 ಜನರನ್ನು ಬಂಧಿಸಿದ್ದೇವೆ. ಸಮಗ್ರವಾಗಿ ತನಿಖೆ ನಡೆಸುತ್ತೇವೆ. ಯಾರನ್ನು ಕಾಪಾಡಲ್ಲ, ಮುಚ್ಚಿಡಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.