ETV Bharat / city

ರಾಜ್ಯ ಆರೋಗ್ಯ ಇಲಾಖೆಯಿಂದ ಹೊಸ ಕೋವಿಡ್​​ ಮಾರ್ಗಸೂಚಿ ಬಿಡುಗಡೆ

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು (ಕನಿಷ್ಠ 1 ಮೀಟರ್ ನಷ್ಟು), ಆಗಿಂದಾಗ ಹ್ಯಾಂಡ್ ಸ್ಯಾನಿಟೈಸರ್‌ ಬಳಕೆ, ಸೋಪು ಹಾಗೂ ನೀರಿನಿಂದ ಕೈಗಳನ್ನು ಶುಚಿಗೊಳಿಸುವುದು. ಥರ್ಮಲ್ ಸ್ಕ್ರೀನಿಂಗ್​ ನಡೆಸುವುದು, ಜ್ವರ ಹಾಗೂ ಸೋಂಕಿನ ಇತರ ಲಕ್ಷಣಗಳಿರುವವರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸುವುದು ಇತ್ಯಾದಿ ಕೋವಿಡ್-19 ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಮುಂದುವರೆಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

new-covid-guideline-released-by-health-department
ಕೋವಿಡ್​​ ಮಾರ್ಗಸೂಚಿ
author img

By

Published : Feb 2, 2021, 10:21 PM IST

ಬೆಂಗಳೂರು: ರಾಜ್ಯದಲ್ಲಿ ಸದ್ಯ ಕೋವಿಡ್-19 ಸಾಂಕ್ರಾಮಿಕದ ಅಬ್ಬರವು ಕಡಿಮೆಯಾಗಿದ್ದರೂ ಸಹ ಸೋಂಕು ಹರಡುವಿಕೆಯ ಅಪಾಯ ಇನ್ನೂ ಚಾಪ್ತಿಯಲ್ಲಿದೆ. ಹಾಗಾಗಿ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು (ಕನಿಷ್ಠ 1 ಮೀಟರ್ ನಷ್ಟು), ಆಗಿಂದಾಗ ಹ್ಯಾಂಡ್ ಸ್ಯಾನಿಟೈಸರ್‌ ಬಳಕೆ, ಸೋಪು ಹಾಗೂ ನೀರಿನಿಂದ ಕೈಗಳನ್ನು ಶುಚಿಗೊಳಿಸುವುದು. ಥರ್ಮಲ್ ಸ್ಕ್ರೀನಿಂಗ್​ ನಡೆಸುವುದು, ಜ್ವರ ಹಾಗೂ ಸೋಂಕಿನ ಇತರ ಲಕ್ಷಣಗಳಿರುವವರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸುವುದು ಇತ್ಯಾದಿ ಕೋವಿಡ್-19 ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಮುಂದುವರೆಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಇದಕ್ಕಾಗಿ ಮತ್ತೊಂದು ಸುತ್ತೋಲೆ ಹೊರಡಿಸಿರುವ ಆರೋಗ್ಯ ಇಲಾಖೆ, ಧಾರ್ಮಿಕ, ಕ್ರೀಡಾ ಚಟುವಟಿಕೆಗಳು, ಮನರಂಜನೆ, ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಯನ್ನು ಹೊರಡಿಸಿದೆ.

  • ಸಾಮಾಜಿಕ ಸಮಾರಂಭಗಳು: ಮದುವೆಗಳು, ಜನ್ಮದಿನಾಚರಣೆ, ಮರಣ, ಶವ ಸಂಸ್ಕಾರ ಮತ್ತು ಇತರೆ ಸಮಾರಂಭಗಳ ಆಚರಣೆಗಳಲ್ಲಿ ದೈಹಿಕ ದೂರವನ್ನು ಕಾಪಾಡಿಕೊಳ್ಳಲು ಮತ್ತು ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಯುವ ರೀತಿಯಲ್ಲಿ ತೆರೆದ ಮತ್ತು ಮುಚ್ಚಿದ ಪ್ರದೇಶಕ್ಕೆ 3.25 ಚ.ಮೀ. ಅಂತರ ಪ್ರತಿ ವ್ಯಕ್ತಿಗೆ ಇರಬೇಕು. (1.000 ಚ.ಮೀ ವಿಸ್ತೀರ್ಣವಿರುವ ಹಾಲ್‌ನಲ್ಲಿ ಗರಿಷ್ಠ 376 ವ್ಯಕ್ತಿಗಳು ಸೇರಬಹುದು. 500 ಚ.ಮೀ. ವಿಸ್ತೀರ್ಣವಿರುವ ಹಾಲ್‌ನಲ್ಲಿ ಗರಿಷ್ಠ 158 ವ್ಯಕ್ತಿಗಳು ಸೇರಬಹುದು) ಮೇಲಿನ ಸಮಾರಂಭಗಳಿಗೆ ಗರಿಷ್ಠ 500 ವ್ಯಕ್ತಿಗಳ ಮಿತಿಯನ್ನು ಅನುಮತಿಸಲಾಗಿದೆ.
  • ಈಜುಕೊಳಗಳು ಹಾಗೂ ಕ್ರೀಡಾ ಚಟುವಟಿಕೆಗಳು: ಯುವಜನ ಸೇವೆ ಮತ್ತು ಕ್ರೀಡೆಗಳು ಮಂತ್ರಾಲಯಯ ಎಸ್​ಒಪಿಯು ಮುಂದುವರೆಯಲಿದೆ. ಅದರ ಲಿಂಕ್ ಇಲ್ಲಿದೆ https://yas.nic.in/sports/standard-operating-procedures-sop-and-guidelines-operation-swimming-pools
  • ಸಿನಿಮಾ ಹಾಲ್‌ಗಳು: ಮಾಹಿತಿ ಹಾಗೂ ಪ್ರಸಾರಣ ಮಂತ್ರಾಲಯದ ಫೆಬ್ರವರಿ 1ರ ಮಾರ್ಗಸೂಚಿಯಂತೆ ಸಿಮನಿಮಾ ಹಾಲ್​​ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ಕಲ್ಪಸಲಾಗಿದೆ. ಆದಾಗ್ಯೂ ಕೋವಿಡ್-19ರ ಪ್ರಸ್ತುತ ಪರಿಸ್ಥಿತಿ ಹಾಗೂ ಎರಡನೇ ಅಲೆ ಬರುವ ಸಾಧ್ಯತೆಯನ್ನೂ ಸಹ ಪರಿಗಣಿಸಿ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದೂ ಸೇರಿದಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ 28ನೇ ಫೆಬ್ರವರಿ 2021ರವರೆಗೆ ಸಿನಿಮಾ ಹಾಲ್‌ಗಳಲ್ಲಿ 50% ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಕಲ್ಪಸಲು ಸೂಚಿಸಲಾಗಿದೆ.
  • ಕಚೇರಿಗಳು ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳು: ಅವಕಾಶವಿರುವ ಸ್ಥಳಗಳಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸುವ ವ್ಯವಸ್ಥೆಯನ್ನು (Work from home ) ಮುಂದುವರೆಸಬಹುದಾಗಿದೆ. ಇಲ್ಲದಿದ್ದಲ್ಲಿ ಎಲ್ಲರೂ ಕೆಲಸಕ್ಕೆ ಹಾಜರಾಗಲು ಅನುಮತಿಸಬಹುದು. ಪಾಳಿಗಳಲ್ಲಿ (shift System) ಕೆಲಸ ನಿರ್ವಹಣೆಯನ್ನೂ ಮುಂದುವರಿಸುವುದು.
  • ಕೈಗಾರಿಕಾ ಪ್ರದೇಶಗಳು ಹಾಗೂ ವಾಣಿಜ್ಯ ಸಂಸ್ಥೆಗಳು: ಸಿಬ್ಬಂದಿಯ ಸಂಪೂರ್ಣ ಹಾಜರಾತಿ, ಪಾಳಿಗಳಲ್ಲಿ (shift system) ಕೆಲಸ ನಿರ್ವಹಣೆಯನ್ನೂ ಮುಂದುವರೆಸುವುದು.
  • ಅಂಗಡಿಗಳು ಹಾಗೂ ಮಾಲ್​​ಗಳು: ಮಲ್ಟಿಪ್ಲೆಕ್ಸ್​​ ಹಾಗೂ ಮನರಂಜನಾ ಪಾರ್ಕ್‌ಗಳು - ಸದರಿ ಸ್ಥಳಗಳ ವಿಸ್ತೀರ್ಣದ ಆಧಾರದ ಅನ್ವಯ, ಈ ಪ್ರದೇಶಗಳ ಒಳಗೆ ಜನರು ಗುಂಪು ಸೇರದಂತೆ ಕ್ರಮ ವಹಿಸುವುದು, ಸಾರ್ವಜನಿಕರ ಪ್ರವೇಶವನ್ನು ನಿಯಂತ್ರಿಸುವುದು, ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುವ ಆಚರಣೆಗಳನ್ನು ದೂರವಿಡುವುದು.
  • ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್​ಗಳು: ಗರಿಷ್ಠ ಗ್ರಾಹಕರ ಸಂಖ್ಯೆಯನ್ನು ಮೀರುವಂತಿಲ್ಲ.
  • ಮೆಟ್ರೋ ರೈಲುಗಳು: ಭಾರತ ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ಪ್ರಯಾಣಿಕರ ಸಂಖ್ಯೆಯನ್ನು ಮೀರಲು ಅವಕಾಶವಿರುವುದಿಲ್ಲ.
  • ಯೋಗ ಕೇಂದ್ರಗಳು ಹಾಗೂ ಜಿಮ್​​: ಹಾಲ್‌ಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ವ್ಯಕ್ತಿಗೆ 3.25_sq meterನಂತೆ ಸ್ಥಳಾವಕಾಶ ಕಲ್ಪಸುವುದು. ಹೆಚ್ಚು ಜನರು ಗುಂಪು ಸೇರುವುದನ್ನು ನಿಯಂತ್ರಿಸಲು ಪಾಳಿ ವ್ಯವಸ್ಥೆಯನ್ನು ಪಾಲಿಸುವುದು.
  • ಶಾಲೆಗಳು ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳು: ಸಂಬಂಧಪಟ್ಟ ಇಲಾಖೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಅಗತ್ಯ ಸಮಾಲೋಚನೆಯ ನಂತರ ಪ್ರತ್ಯೇಕವಾಗಿ, ಕಾಲಕಾಲಕ್ಕೆ ಪ್ರಮಾಣಿತ ಕಾರ್ಯಾಚರಣೆಯ ವಿಧಾನವನ್ನು ಅನುಸರಿಸುವುದು.
  • ವ್ಯಾಪಾರ ವಸ್ತು ಪ್ರದರ್ಶನಗಳು, ಇತ್ಯಾದಿ: ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳ ಅನುಷ್ಠಾನದೊಂದಿಗೆ ವಸ್ತು ಪ್ರದರ್ಶನಗಳನ್ನು ಆಯೋಜಿಸಲು ಭಾರತ ಸರ್ಕಾರದ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು ಪಾಲಿಸಬೇಕು.

ಚುನಾವಣೆಗಳು, ಏರೋ ಇಂಡಿಯಾ ಪ್ರದರ್ಶನ, ಇತ್ಯಾದಿ ವಿಶೇಷ ಆಚರಣೆಗಳ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸಮಾಲೋಚನೆಯ ನಂತರ ಸಂಬಂಧಪಟ್ಟ ಇಲಾಖೆಗಳು ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಲಿವೆ ಅಂತ ಇಲಾಖೆ ತಿಳಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪು ಸೇರುವುದನ್ನು ತಪ್ಪಿಸಲು, ಸಾಮಾನ್ಯವಾಗಿ ವಿವಿಧ ಆಚರಣೆಗಳನ್ನು ವರ್ಚುವಲ್ ಮಾಧ್ಯಮದ ಮೂಲಕ ಕೈಗೊಳ್ಳುವಂತೆ ಅಥವಾ ತೆರೆದ/ ಸೂಕ್ತ ಗಾಳಿ - ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲಿ ನಡೆಸುವಂತೆ ಮಾರ್ಗಸೂಚಿ ಪ್ರಕಟಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.