ಬೆಂಗಳೂರು: ಸಿಎಂ ಸಂಪುಟ ಸಹೋದ್ಯೋಗಿಗಳಿಗೆ ಕೋವಿಡ್ ಬೆಂಬಿಡದೇ ಕಾಡುತ್ತಿದ್ದು, ಇದೀಗ ವಸತಿ ಸಚಿವ ವಿ. ಸೋಮಣ್ಣಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಎರಡು ದಿನಗಳ ಹಿಂದೆ ಸಿಎಂ ಸಭೆಯಲ್ಲಿ ಸೋಮಣ್ಣ ಭಾಗವಹಿಸಿದ್ದು, ಸಚಿವರು, ಅಧಿಕಾರಿಗಳಲ್ಲೂ ಕೋವಿಡ್ ಭೀತಿ ಎದುರಾಗಿದೆ.
ಕೋವಿಡ್ ದೃಢಪಟ್ಟ ಹಿನ್ನೆಲೆ ಟ್ವೀಟ್ ಮಾಡಿರುವ ಸಚಿವ ಸೋಮಣ್ಣ, ನನಗೆ ಕೋವಿಡ್- 19 ಸೋಂಕು ದೃಢಪಟ್ಟಿದೆ. ಸದ್ಯ ಹೋಮ್ ಕ್ವಾರಂಟೈನ್ನಲ್ಲಿದ್ದು ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸುವುದರ ಮೂಲಕ ಸುರಕ್ಷತೆಯಿಂದಿರಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಪೊಲೀಸ್ ಜೀಪನ್ನೇ ಕದ್ದ ಭೂಪ: ಕಾರಣ ಕೇಳಿದರೆ ಅಚ್ಚರಿ!
ವಸತಿ ಯೋಜನೆಗಳ ಕುರಿತು ಸಭೆ, ಸಿಎಂ ಜೊತೆಗೆ ಲಕ್ಷ ಸೂರು ನಿರ್ಮಾಣ ಕುರಿತು ಸಭೆ, ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ಸೇರಿದಂತೆ ಕಳೆದ ಮೂರ್ನಾಲ್ಕು ದಿನಗಳಿಂದ ಸಚಿವ ಸೋಮಣ್ಣ ಹಲವು ಸಭೆ ನಡೆಸಿದ್ದರು. ಹೀಗಾಗಿ ಸಚಿವರು ಮತ್ತು ಅಧಿಕಾರಿಗಳಲ್ಲಿ ಕೋವಿಡ್ ಆತಂಕ ಎದುರಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ