ಬೆಂಗಳೂರು: ಬಸ್ಗಾಗಿ ಕಾಯುತ್ತಿದ್ದ ವೇಳೆ ವಿದ್ಯುತ್ ಹರಿದು ಅಪರಿಚಿತ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಗರದ ಹೆಬ್ಬಾಳ ಬಸ್ ಸ್ಟಾಪ್ನಲ್ಲಿ ನಡೆದಿದೆ. ಪೊಲೀಸರು ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ.
![man died by electric shock at Bangalore bus stop](https://etvbharatimages.akamaized.net/etvbharat/prod-images/15290696_gyuferfte4f.jpg)
ನಿನ್ನೆ ಸಂಜೆ ಮಳೆ ಬರುತ್ತಿದ್ದ ವೇಳೆ ಬಸ್ ಶೆಲ್ಟರ್ನಲ್ಲಿ ನಾಲ್ವರು ಕುಳಿತಿದ್ದರು. ಈ ವೇಳೆ ಅವರಿಗೆ ಕರೆಂಟ್ ಶಾಕ್ ಹೊಡೆದ ಅನುಭವ ಆಗಿದೆ. ಮೂವರು ಬಸ್ ಶೆಲ್ಟರ್ನಿಂದ ಎದ್ದು ಹೊರ ಓಡಿದ್ದರು. ಮೃತ ವ್ಯಕ್ತಿ ಚಪ್ಪಲಿ ಕೆಳಗೆ ಬಿಟ್ಟು ಸೀಟ್ ಮೇಲೆ ಕುಳಿತಿದ್ದರು. ಕೆಳಗಿಳಿದು ಓಡುವ ರಭಸದಲ್ಲಿ ಬಸ್ ಶೆಲ್ಟರ್ನ ಬೋರ್ಡ್ ಟಚ್ ಆಗಿದೆ. ಕರೆಂಟ್ ಶಾಕ್ ಹೊಡೆದು ಅಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಮತ್ತು ಪೊಲೀಸರು ಅಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದ್ದಾರೆ. ಆದ್ರೆ ಮಾರ್ಗಮಧ್ಯೆ ವ್ಯಕ್ತಿ ಸಾವನ್ನಪ್ಪಿದ್ದು, ಗುರುತು ಪತ್ತೆಯಾಗಿಲ್ಲ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕಾಗಿ ತಂದೆ-ಮಗನ ಮಧ್ಯೆ ಜಗಳ: ಕೊಲೆಯಲ್ಲಿ ಅಂತ್ಯ