ETV Bharat / city

ಮೆಟ್ರೋ ಕಾಮಗಾರಿ ಚುರುಕು: ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬಿಎಂಆರ್​ಸಿಎಲ್​​

ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿದಿದೆ.

Bangalore Metro Works
ಬೆಂಗಳೂರು ಮೆಟ್ರೋ ಕಾಮಗಾರಿ
author img

By

Published : Oct 28, 2021, 8:19 AM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ಚುರುಕುಗೊಂಡಿದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.

ಮೆಟ್ರೋದ ರೀಚ್-1E 15.05.ಕಿ.ಮೀ.ನ ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ವರೆಗೆ ಕಾಮಗಾರಿ ನಡೆಯುತ್ತಿದೆ.‌ ಇದಕ್ಕಾಗಿ 1,77,694.12 ಚ.ಮೀ ವಿಸ್ತೀರ್ಣದ ಪ್ರದೇಶವು ವಯಾಡಕ್ಟ್ ಮತ್ತು ನಿಲ್ದಾಣಗಳಿಗೆ ಅಗತ್ಯವಾಗಿದೆ. ಅದರಲ್ಲಿ 1,73,786.88 ಚ.ಮೀ ಪ್ರದೇಶವನ್ನು ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಕಾಡುಗೋಡಿ ಡಿಪೋಗೆ ಬೇಕಾದ 45 ಎಕರೆ ಅರಣ್ಯ ಭೂಮಿಯನ್ನು ಸಹ ಸ್ವಾಧೀನಪಡಿಸಿಕೊಂಡು ಹಸ್ತಾಂತರಿಸಲಾಗಿದೆ.

ಹಾಗೆಯೇ, ರೀಚ್-3C ನಾಗಸಂದ್ರದಿಂದ ಬಿ.ಐ.ಇ.ಸಿ ವರೆಗೆ -3 ಕಿ.ಮೀ.ನ ಈ ವ್ಯಾಪ್ತಿಗೆ ಬೇಕಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಜೊತೆಗೆ ಕೊತ್ತನೂರು ಡಿಪೋಗೆ ಅಗತ್ಯವಿರುವ 32.6 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.

ಜಿಂದಾಲ್ ಮತ್ತು ಪ್ರೆಸ್ಟೀಜ್ ಲೇಔಟ್ ಮೂಲಕ ಅಂಚೆಪಾಳ್ಯ ಮತ್ತು ಇತರ ಹಳ್ಳಿಗಳಿಂದ ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣಕ್ಕೆ ರಸ್ತೆ ಸಂಪರ್ಕವನ್ನು ಒದಗಿಸಲು 1885.11 ಚ.ಮೀ ಹೆಚ್ಚುವರಿ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು, ನ್ಯಾಯಾಲಯವು ರದ್ದುಗೊಳಿಸಿದೆ. ಹೀಗಾಗಿ, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಬಿಎಂಆರ್​ಸಿಎಲ್​ ಮುಂದಾಗುತ್ತಿದೆ.

ಪರಿಹಾರದ ಹಸ್ತಾಂತರ:

ರೀಚ್-6ರ ಗೊಟ್ಟಿಗೆರೆಯಿಂದ ಡೈರಿ ವೃತ್ತದವರೆಗೆ ಎತ್ತರಿಸಿದ ಮಾರ್ಗಕ್ಕೆ ಅಗತ್ಯವಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಡೈರಿ ವೃತ್ತದಿಂದ ನಾಗಾವರದವರೆಗಿನ ಸುರಂಗಮಾರ್ಗಕ್ಕೆ ಭೂಸ್ವಾಧೀನಗೊಂಡ ಹಿನ್ನೆಲೆ ಪರಿಹಾರಧನ ವಿತರಿಸುವ ಕ್ರಿಯೆ ಪ್ರಗತಿಯಲ್ಲಿದೆ.

ಇದನ್ನೂ ಓದಿ: ಚನ್ನಗಿರಿ: ಬೈಕ್‌ನಲ್ಲಿ ಹಳ್ಳ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

ಇನ್ನು ಪಾಟಿರಿಟೌನ್ ನಿಲ್ದಾಣಕ್ಕೆ ಬೇಕಾಗಿರುವ ಹೆಚ್ಚುವರಿ 22290 ಚ.ಮೀ ವಿಸ್ತೀರ್ಣಕ್ಕೆ ಹಾಗೂ ರಾಷ್ಟ್ರೀಯ ಮಿಲಿಟರಿ ಸ್ಕೂಲ್ ನಿಲ್ದಾಣಕ್ಕಾಗಿ ಅವಶ್ಯಕತೆ ಇರುವ 883,00 ಚ.ಮೀ ವಿಸ್ತೀರ್ಣಕ್ಕೆ ಅಂತಿಮ ಅಧಿಸೂಚನೆಯ ಪ್ರಸ್ತಾವನೆಯನ್ನು ವಿಶೇಷ ಭೂಸ್ವಾಧೀನಾಧಿಕಾರಿಯವರಿಗೆ ಕಳುಹಿಸಲಾಗಿದೆ. ಹಂತ-2ಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗ ಜೊತೆಗೆ ಹಂತ-2ಎ ಹೊರ ವರ್ತುಲ ರಸ್ತೆಗಾಗಿ ಜಮೀನು ಹಸ್ತಾಂತರವೂ ಇನ್ನೂ ಬಾಕಿ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.