ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದ ಕಿರಾತಕ ಸಿನಿಮಾ ನಿರ್ದೇಶಕ ಪ್ರದೀಪ್ ರಾಜ್ ನಿಧನರಾಗಿದ್ದಾರೆ. ಕಳೆದ ಐದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಇಂದು ಬೆಳಗ್ಗೆ ಪಾಂಡಿಚೇರಿಯಲ್ಲಿ ಇಹಲೋಕ ತ್ಯಜಿಸಿರುವುದಾಗಿ ಅವರ ಸಹೋದರ ಪ್ರಶಾಂತ್ ತಿಳಿಸಿದ್ದಾರೆ.
ಡಯಾಬಿಟಿಸ್ ರೋಗಿಯಾಗಿದ್ದ 46 ವರ್ಷದ ಪ್ರದೀಪ್ ರಾಜ್ಗೆ ಕೊರೊನಾ ಬಂದಾಗ ತೀವ್ರ ಅನಾರೋಗ್ಯ ಉಂಟಾಗಿತ್ತು. ಬಳಿಕ ಬಹು ಅಂಗಾಗ ವೈಫಲ್ಯಕ್ಕೆ ತುತ್ತಾಗಿದ್ದರು.
ಇವರು ಕಿರಾತಕ ಚಿತ್ರ ಅಲ್ಲದೇ ಬೆಂಗಳೂರು 560023, ಕಿಚ್ಚು, ಮಿಸ್ಟರ್ 420, ನೀನಾಸಂ ಸತೀಶ್ ನಟನೆಯ ಅಂಜದ ಗಂಡು, ದುನಿಯಾ ವಿಜಯ್ ನಟನೆಯ ರಜನಿಕಾಂತ ಸೇರಿದಂತೆ ಹಲವು ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ತಮಿಳುನಾಡಿನ ಪಾಂಡಿಚೇರಿಯವರಾದ ಪ್ರದೀಪ್ ರಾಜ್ಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಇದ್ದಾರೆ.
ಪಾಂಡಿಚೇರಿಯಲ್ಲಿ ಅಣ್ಣನ ಅಂತ್ಯ ಸಂಸ್ಕಾರ ಆಗಲಿದೆ. ಇನ್ನು ಪ್ರದೀಪ್ ರಾಜ್ ಯಶ್ಗಾಗಿ ಕಿರಾತಕ 2 ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ, ಕಾರಣಾಂತರಗಳಿಂದ ಯಶ್ ಈ ಸಿನಿಮಾ ಮಾಡಲಿಲ್ಲ. ಈ ಕಾರಣಕ್ಕೆ ನಿರ್ದೇಶಕ ಪ್ರದೀಪ್ ರಾಜ್ ಹೊಸ ನಟ ತೇಜ್ ಎಂಬುವನನ್ನ ಇಟ್ಟುಕೊಂಡು ಕಿರಾತಕ 2 ಸಿನಿಮಾದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಸದ್ಯ ಈ ಸಿನಿಮಾ ಸೆನ್ಸಾರ್ಗೆ ರೆಡಿಯಾಗಿದ್ದು, ಕಿರಾತಕ 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
(ಇದನ್ನೂ ಓದಿ: ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರು ರಕ್ಷಣೆಗೆ ಹರಸಹಾಸಪಟ್ಟ ರೈತ)