ETV Bharat / city

ಬ್ರೈಲ್ ಪಠ್ಯ ಪುಸ್ತಕಗಳನ್ನು ಇ-ಪಠ್ಯಕ್ಕೆ ಟೆಂಡರ್​​​ ಅಂತಿಮಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗಡುವು - ಬ್ರೈಲ್ ಪಠ್ಯ ಪುಸ್ತಕಗಳನ್ನು ಇ-ಪಠ್ಯಕ್ಕೆ ಪರಿವರ್ತಿಸುವ ಕಾರ್ಯ

ಬ್ರೈಲ್ ಪಠ್ಯ ಪುಸ್ತಕಗಳನ್ನು ಇ-ಪಠ್ಯಕ್ಕೆ ಪರಿವರ್ತಿಸುವ ಕಾರ್ಯ ಪೂರೈಸಿಕೊಡುವುದಕ್ಕೆ ಕರೆದಿರುವ ಟೆಂಡರ್ ಅಂತಿಮಗೊಳಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಜೂನ್​ವರೆಗೆ ಕಾಲಾವಕಾಶ ನೀಡಿದೆ.

karnataka-high-court-on-braille-textbook
ಅಂಧ ಮಕ್ಕಳಿಗೆ ಬ್ರೈಲ್ ಪಠ್ಯಪುಸ್ತಕ : ಅಂತಿಮ ಕಾಲಾವಕಾಶ ನೀಡಿದ ಹೈಕೋರ್ಟ್
author img

By

Published : Apr 5, 2022, 8:58 AM IST

ಬೆಂಗಳೂರು: ರಾಜ್ಯದ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬ್ರೈಲ್ ಪಠ್ಯ ಪುಸ್ತಕಗಳನ್ನು ಇ-ಪಠ್ಯಕ್ಕೆ ಪರಿವರ್ತಿಸುವ ಕಾರ್ಯ ಪೂರೈಸಿಕೊಡುವುದಕ್ಕೆ ಕರೆದಿರುವ ಟೆಂಡರ್ ಅಂತಿಮಗೊಳಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಜೂನ್​ವರೆಗೆ ಕಾಲಾವಕಾಶ ನೀಡಿದೆ. ದೃಷ್ಟಿ ವಿಶೇಷ ಚೇತನ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ‘ದಿ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್’ ಸಂಸ್ಥೆ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಸರ್ವೆ ಮಾಹಿತಿಯಂತೆ ರಾಜ್ಯದಲ್ಲಿ 1,692 ದೃಷ್ಟಿ ವಿಶೇಷ ಚೇತನ ಮಕ್ಕಳು ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ಬ್ರೈಲ್ ಲಿಪಿಯ 152 ಪಠ್ಯ ಪುಸ್ತಕಗಳ ಇ-ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ಉಳಿದಂತೆ ತಮಿಳು, ತೆಲುಗು ಸೇರಿದಂತೆ ಒಟ್ಟು ಏಳು ಭಾಷೆಯಲ್ಲಿ 403 ಪುಸ್ತಕಗಳನ್ನು ಇ-ಪಠ್ಯಕ್ಕೆ ಪರಿವರ್ತಿಸಿ ಅಪ್‌ಲೋಡ್ ಮಾಡಬೇಕಿದೆ ಎಂದು ತಿಳಿಸಿದರು.

ಇ-ಪಠ್ಯಕ್ಕೆ ಪರಿವರ್ತಿಸುವ ಕಾರ್ಯಕ್ಕೆ ಮೂರು ಬಾರಿ ಟೆಂಡರ್ ಕರೆಯಲಾಗಿತ್ತು. 30 ಲಕ್ಷಕ್ಕೂ ಹೆಚ್ಚು ಮೊತ್ತದ ಟೆಂಡರ್​​ಗೆ 2 ಬಾರಿ ಕರೆದಿದ್ದರೂ ಯಾರೊಬ್ಬರೂ ಭಾಗವಹಿಸಿಲ್ಲ. ಪಠ್ಯ ಓದಿ ಆಡಿಯೋಗೆ ಪರಿವರ್ತಿಸುವ ಕೆಲಸವಾದರೆ ಸುಲಭವಾಗಿ ಮಾಡಬಹುದಾಗಿದೆ. ಆದರೆ, ಪಠ್ಯದಲ್ಲಿರುವ ರೇಖಾಚಿತ್ರ ಮತ್ತು ಚಿತ್ರಗಳ ಬಗ್ಗೆ ವಿವರಣೆ ನೀಡಲು ನಿರ್ದಿಷ್ಟ ತಜ್ಞರು ಬೇಕಾಗಿದ್ದಾರೆ. ಅವರು ಲಭ್ಯವಾಗದ ಹಿನ್ನೆಲೆಯಲ್ಲಿ ಪಠವ್ಯವನ್ನು ಆಡಿಯೋಗೆ ಪರಿವರ್ತಿಸುವ ಕಾರ್ಯ ವಿಳಂಬವಾಗುತ್ತಿದೆ. 4 ವಾರ ಕಾಲಾವಕಾಶ ನೀಡಿದರೆ ಟೆಂಡರ್ ಅಂತಿಮಗೊಳಿಸಲಾಗುವುದು ಎಂದರು. ಈ ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಜೂನ್ ಮೊದಲ ವಾರಕ್ಕೆ ಮುಂದೂಡಿತು.

ಇದನ್ನೂ ಓದಿ: ಮಂಡ್ಯದಲ್ಲಿ ಘನತ್ಯಾಜ್ಯ ವಿಲೇವಾರಿ ಜಾಗದ ಕುರಿತು ಆಕ್ಷೇಪ: ಪರಿಶೀಲಿಸುವಂತೆ ಡಿಸಿಗೆ ಹೈಕೋರ್ಟ್ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.