ಬೆಂಗಳೂರು: ಪ್ರಧಾನಿ ಮೋದಿ ನಿನ್ನೆ ಬಿಡುಗಡೆ ಮಾಡಿರುವ ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ 14 ಕೋಟಿ ಇಕ್ವಿಟಿ ಅನುದಾನದಲ್ಲಿ ಕರ್ನಾಟಕದ ಒಟ್ಟು 30 ಎಫ್‌ಪಿಒಗಳ ಒಟ್ಟು 12,047 ಸದಸ್ಯರಿಗೆ 1.21 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ.
ಒಟ್ಟು 1,21,42000 ರೂ.ಅನುದಾನದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಎಫ್‌ಪಿಒಗಳಿಗೆ 57.74 ಲಕ್ಷ ರೂ., ನಬಾರ್ಡ್‌ನ 11 ಎಫ್‌ಪಿಒಗಳಿಗೆ 43 ಲಕ್ಷದ 69 ಸಾವಿರ ರೂ., ಎಸ್‌ಎಫ್‌ಎಸಿಯ 6 ಎಫ್‌ಪಿಒಗಳಿಗೆ 19 ಲಕ್ಷದ 19 ಸಾವಿರ ರೂ ಇಕ್ವಿಟಿ ಗ್ರ್ಯಾಂಟ್ ಸಿಕ್ಕಿದೆ.
ರೈತ ಉತ್ಪಾದಕರ ಸಂಸ್ಥೆ ಇಕ್ವಿಟಿ ಅನುದಾನ ಬಿಡುಗಡೆ ಕಾರ್ಯಕ್ರಮ ಭಾರತ ಸರ್ಕಾರದ 2020-21 ನೇ ಸಾಲಿನ ಆಯವ್ಯಯದಲ್ಲಿ ''Formation and Promotion of 10,000 Farmer Producer Organizations'' ಎಂದು ಘೋಷಿಸಲಾಗಿರುತ್ತದೆ.
ರಾಜ್ಯಕ್ಕೆ ವಿವಿಧ ಅನುಷ್ಠಾನ ಸಂಸ್ಥೆಗಳಿಂದ 185 ರೈತ ಉತ್ಪಾದಕರ ಸಂಸ್ಥೆ (ಜಲಾನಯನ ಅಭಿವೃದ್ಧಿ ಇಲಾಖೆ -100, ಎಸ್‌ಎಫ್‌ಎಸಿ - 25 , ನಬಾರ್ಡ್-37 ಮತ್ತು ಎಸ್ಸಿಡಿಸಿ - 23 ) ಗಳನ್ನು ರಚಿಸಲು ವಿವಿಧ ಅನುಷ್ಠಾನ ಸಂಸ್ಥೆಗಳಿಗೆ ಗುರಿ ನೀಡಲಾಗಿದೆ. ಅಲ್ಲದೇ, ಯೋಜನೆಯಡಿ ಇಲ್ಲಿಯವರೆಗೂ ಒಟ್ಟಾರೆ 152 ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲಾಗಿದ್ದು, ಜಲಾನಯನ ಅಭಿವೃದ್ಧಿ ಇಲಾಖೆ -99 SFAC - 21, NABARD - 313 ) NCDC - 1 ಎಫ್‌ಪಿಒ ಆಗಿವೆ.
ರೈತ ಉತ್ಪಾದಕರ ಸಂಸ್ಥೆಗಳಿಗೆ ಸಂಗ್ರಹಿಸಲಾದ ಷೇರು ಮೊತ್ತಕ್ಕೆ ಅನುಗುಣವಾಗಿ ಗರಿಷ್ಠ ರೂ .15 ಲಕ್ಷಗಳ ವರೆಗೆ ಮ್ಯಾಚಿಂಗ್ ಅನುದಾನವಾಗಿ ಇಕ್ವಿಟಿ ಗ್ರ್ಯಾಂಟ್ ನೀಡಲಾಗುತ್ತಿದೆ . ಈ 15 ಲಕ್ಷ ರೂ. ಇಕ್ವಿಟಿ ಗ್ರ್ಯಾಂಟ್‌ಗಳನ್ನು ಗರಿಷ್ಠ ಮೂರು ಹಂತಗಳಲ್ಲಿ ನೀಡಲಾಗುವುದು. ಇದರಿಂದ ರೈತ ಉತ್ಪಾದಕರ ಸಂಸ್ಥೆಗಳ ಬಂಡವಾಳ ನಿಧಿ ಹೆಚ್ಚಾಗಿ ಇದು ವ್ಯವಹಾರ ಅಭಿವೃದ್ಧಿಗೆ ನೆರವಾಗುತ್ತದೆ.
ರೈತ ಉತ್ಪಾದಕರ ಸಂಸ್ಥೆಗಳು ಪಡೆದ ಇಕ್ವಿಟಿ ಗ್ರ್ಯಾಂಟ್ ಅನುದಾನದಲ್ಲಿ ಸದಸ್ಯರುಗಳಿಂದ ಸಂಗ್ರಹಿಸಿದ ಷೇರು ಮೊತ್ತಕ್ಕೆ ಅನುಗುಣವಾಗಿ ಗರಿಷ್ಠ 2000 ರೂ.ವರೆಗೆ ಸೀಮಿತಗೊಳಿಸಿ ಷೇರುಗಳನ್ನು ನೀಡಲಾಗುವುದು. ಮೊದಲ ಹಂತದಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ 30 ರೈತ ಉತ್ಪಾದಕರ ಸಂಸ್ಥೆಗಳ 12,047 ಸದಸ್ಯರುಗಳಿಗೆ 1 ಕೋಟಿ 21ಲಕ್ಷದ 42 ಸಾವಿರ ರೂ. ಅನುದಾನವನ್ನು ಪ್ರಧಾನ ಮಂತ್ರಿಗಳು ಬಿಡುಗಡೆ ಮಾಡಿದ್ದಾರೆ.