ಬೆಂಗಳೂರು: ಬೇರೆಯವರು ತಾಳಿ ಕಟ್ಟಿರೋರಿಗೆ ಲವ್ ಲೆಟರ್ ಬರೆದರೆ ಆಗುತ್ತಾ?. ಪಕ್ಕದ ಮನೆಯ ಧರ್ಮ ಪತ್ನಿಗೆ ಪತ್ರ ಬರೆಯುತ್ತೀರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪತ್ರ ಬರೆದಿರುವುದು ಅಪರಾಧ ಅಲ್ವಾ?, ಇದು ನೈತಿಕತೆಯಾ? ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಹೊಸ ಇತಿಹಾಸ ಶುರುವಾಗುತ್ತದೆ. ಬಿಜೆಪಿಯನ್ನು ಸೋಲಿಸಲೇ ಬೇಕು ಅಂತಾ ಇದ್ದರೆ ಮೊದಲ ಮತ ನಿಮಗೆ ಹಾಕೊಂಡು, 2ನೇ ಮತ ನಮಗೆ ಕೊಡಿ. ಆದರೆ, ಅದನ್ನು ಕೊಡಲು ತಯಾರಿಲ್ಲ. 2ನೇ ಮತ ಕೊಡಲು ನಾವು ತಯಾರಿದ್ದೇವೆ, ಅವರು ಸಿದ್ಧರಿಲ್ಲ. ಆತ್ಮಸಾಕ್ಷಿಯ ಮತವನ್ನು ಕಾಂಗ್ರೆಸ್ ಲೆಹರ್ ಸಿಂಗ್ ಕೊಡ್ತಿರಾ? ಎಂದು ಕಿಡಿ ಕಾರಿದರು.
ಕೋಲಾರ ಶ್ರೀನಿವಾಸ್ ಗೌಡರು ನಮ್ಮ ಬಳಿ ಜೆಡಿಎಸ್ಗೆ ಮತ ಹಾಕುತ್ತೇವೆ ಎಂದು ಹೇಳಿದ್ದಾರೆ. ಎಲ್ಲರೂ ಮತ ಹಾಕುತ್ತಾರೆ ಎಂದು ನಮಗೆ ಭರವಸೆ ಇದೆ. ದೇವರು ಒಳ್ಳೆ ಬುದ್ಧಿ ಕೊಡುತ್ತಾನೆ. ಲೆಹರ್ ಸಿಂಗ್ ಕನ್ನಡದವರಾ?, ಸಿದ್ದರಾಮಯ್ಯ ಕನ್ನಡಕ್ಕಾಗಿ ಕೈ ಎತ್ತು ಅಂತಾರೆ. ಅವರೇನು ಬಡವರಾ?. ನಮ್ಮ ಕಚೇರಿ ಇರುವುದು ಹಳ್ಳಿಯಲ್ಲಿ, ದೆಹಲಿಯಲ್ಲಿ ಅಲ್ಲ. ನಮ್ಮದು ಬಡವರ ಪಕ್ಷ ಎಂದರು.
ಇದನ್ನೂ ಓದಿ: ಜಾತ್ಯತೀತತೆಯ ಸಾವು-ಬದುಕಿನ ಪ್ರಶ್ನೆ, ಆತ್ಮಸಾಕ್ಷಿಯ ಮತ ಮನ್ಸೂರ್ಗೆ ಕೊಡಿ: ಜೆಡಿಎಸ್ ಶಾಸಕರಿಗೆ ಸಿದ್ದು ಪತ್ರ