ETV Bharat / city

ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: ಈವರೆಗೆ 21 ಪ್ರಕರಣ, 61 ಮಂದಿ ಬಂಧ‌ನ - ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ

ಅಸಲಿ ಅಭ್ಯರ್ಥಿಯ ಆಧಾರ್ ಕಾರ್ಡ್​ಗೆ ನಕಲಿ ಅಭ್ಯರ್ಥಿಯ ಭಾವಚಿತ್ರ ಅಂಟಿಸಿ ದೈಹಿಕ ಹಾಗೂ ಲಿಖಿತ ಪರೀಕ್ಷೆಗಳಲ್ಲಿ ಹಾಜರಾಗುತ್ತಿದ್ದರು. ಈ ದಂಧೆಯಲ್ಲಿ ನಕಲಿ ಅಭ್ಯರ್ಥಿಗಳ ಸೋಗಿನಲ್ಲಿ ಐವರು ಕಾನ್​ಸ್ಟೇಬಲ್​ಗಳನ್ನು ಬಂಧಿಸಿ ಸೇವೆಯಿಂದ ವಜಾಗೊಳಿಸಲಾಗಿದೆ. ನಕಲಿ ಅಭ್ಯರ್ಥಿಗಳಾಗಿ ಸಾಬೀತಾಗಿದ್ದರಿಂದ 21 ಅಭ್ಯರ್ಥಿಗಳನ್ನು ಡಿಬಾರ್ ಮಾಡಲಾಗಿದೆ.

ಪರೀಕ್ಷೆಯಲ್ಲಿ ಅಕ್ರಮ
ಪರೀಕ್ಷೆಯಲ್ಲಿ ಅಕ್ರಮ
author img

By

Published : Jun 14, 2021, 7:53 PM IST

ಬೆಂಗಳೂರು : ನಗರ ಸಶಸ್ತ್ರ ವಿಭಾಗ, ಸಿವಿಲ್ ಕಾನ್​ಸ್ಟೇಬಲ್ ಸೇರಿ ವಿವಿಧ ಪೊಲೀಸ್ ನೇಮಕಾತಿ ಪರೀಕ್ಷೆ ವೇಳೆ‌ ಅಸಲಿ ಅಭ್ಯರ್ಥಿಗಳ ಸೋಗಿನಲ್ಲಿ ಹಾಜರಾಗಿ ವಂಚಿಸಿದ್ದ ಆರೋಪದಡಿ, ಈವರೆಗೂ ರಾಜ್ಯದಲ್ಲಿ 21 ಪ್ರಕರಣ ದಾಖಲಿಸಿಕೊಂಡು 61 ಮಂದಿ ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ 598 ಸಿವಿಲ್ ಪೊಲೀಸ್, 1,005 ಸಶಸ್ತ್ರ ಪೊಲೀಸ್ ಕಾನ್​ಸ್ಟೇಬಲ್, ಕೆಎಸ್ಆರ್​ಪಿ ಮತ್ತು ಕಾನ್​ಸ್ಟೇಬಲ್​ನ 2,420 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ನೇಮಕಾತಿ ಪರೀಕ್ಷೆಗಳಲ್ಲಿ ಕೆಲವರು ಮೂಲ ಅಭ್ಯರ್ಥಿಗಳಂತೆ ನಟಿಸಿ ಪರೀಕ್ಷೆಗೆ ಹಾಜರಾಗಿದ್ದರು.

ಈ ಸಂಬಂಧ ಬೆಂಗಳೂರು ನಗರದಲ್ಲಿ 11 ಪ್ರಕರಣ, ಬೆಳಗಾವಿಯಲ್ಲಿ 5 ಪ್ರಕರಣ ಮತ್ತು ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಶಿವಮೊಗ್ಗ ಮತ್ತು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 21 ಪ್ರಕರಣಗಳು ದಾಖಲಾಗಿದ್ದವು. ಸಮಗ್ರ ತನಿಖೆಗಾಗಿ ಸಿಐಡಿ ವರ್ಗಾವಣೆಯಾಗಿ ವಿಶೇಷ ತಂಡ ತನಿಖೆ ನಡೆಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವರದಿ ನೀಡಿದೆ.

ಅಕ್ರಮ ಎಸಗಿದ್ದ 61 ಮಂದಿ ಆರೋಪಿಗಳ ಬಂಧ‌ನ
ಕಳೆದ ವರ್ಷ ಸೆಪ್ಟೆಂಬರ್​ನಿಂದ ಅಕ್ಟೋಬರ್‌ವರೆಗೆ ವಿವಿಧ ಪೊಲೀಸ್ ನೇಮಕಾತಿ ಪರೀಕ್ಷೆಗಳ ಅಸಲಿ ಅಭ್ಯರ್ಥಿಗಳ ಪರವಾಗಿ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವುದು ಕಂಡು ಬಂದಿದ್ದರಿಂದ, ತನಿಖೆ ಕೈಗೊಂಡ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳಾದ ಗೋಕಾಕ್​ನ ಏಕಲವ್ಯ ಕೋಚಿಂಗ್ ಸೆಂಟರ್ ಲಕ್ಷ್ಮಣ ಉದ್ದಪ್ಪ ಬಂಡಿ, ಭೀಮಪ್ಪ‌ ಮಹಾದೇವ ಹುಲ್ಲೋಳಿ, ಮುತ್ತಪ್ಪ ಪರಣ್ಣನವರ್ ಹಾಗೂ ಮಲ್ಲಿಕಾರ್ಜುನ ಯಮನಪ್ಪ ಸೇರಿದಂತೆ 61 ಮಂದಿಯನ್ನು ಬಂಧಿಸಲಾಗಿದೆ‌‌.

ಇವರಿಂದ ₹1.54 ಲಕ್ಷ ನಗದು, ಎರಡು ಕಾರು, ಒಂದು ಕಂಪ್ಯೂಟರ್ ಹಾರ್ಡ್‌ ಡಿಸ್ಕ್, ಎರಡು ಪೆನ್ ಡ್ರೈವ್, ಎಂಟು ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ.

ವಂಚನೆ ಹೇಗೆ ಮಾಡುತ್ತಿದ್ದರು ಗೊತ್ತಾ ?
ಅಸಲಿ ಅಭ್ಯರ್ಥಿಯ ಆಧಾರ್ ಕಾರ್ಡ್​ಗೆ ನಕಲಿ ಅಭ್ಯರ್ಥಿಯ ಭಾವಚಿತ್ರ ಅಂಟಿಸಿ ದೈಹಿಕ ಹಾಗೂ ಲಿಖಿತ ಪರೀಕ್ಷೆಗಳಲ್ಲಿ ಹಾಜರಾಗುತ್ತಿದ್ದರು. ಈ ದಂಧೆಯಲ್ಲಿ ನಕಲಿ ಅಭ್ಯರ್ಥಿಗಳ ಸೋಗಿನಲ್ಲಿ ಐವರು ಕಾನ್​ಸ್ಟೇಬಲ್​ಗಳನ್ನು ಬಂಧಿಸಿ ಸೇವೆಯಿಂದ ವಜಾಗೊಳಿಸಲಾಗಿದೆ. ನಕಲಿ ಅಭ್ಯರ್ಥಿಗಳಾಗಿ ಸಾಬೀತಾಗಿದ್ದರಿಂದ 21 ಅಭ್ಯರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಇವರು ಭವಿಷ್ಯದಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆಗಳನ್ನು ಬರೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.