ETV Bharat / city

ರಂಗು ರಂಗಿನ ಹೋಳಿ ಹಬ್ಬ: ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವಕರು - ಹೋಳಿ ಹಬ್ಬ

ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು ಹೋಳಿ ಹಬ್ಬವನ್ನು ಖುಷಿಯಿಂದ ಆಚರಿಸಿದರು.

ಖುಷಿಯಿಂದ ಹೋಳಿ ಹಬ್ಬ ಆಚರಿಸಿದ ಬೆಂಗಳೂರು ಯುವಕರು
author img

By

Published : Mar 20, 2019, 4:40 PM IST

ಬೆಂಗಳೂರು: ಯಾವುದೇ ಜಾತಿ ಧರ್ಮ ಇಲ್ಲದೇ ಎಲ್ಲರೂ ಆಚರಿಸುವ ಹಬ್ಬ ಹೋಳಿ. ರಂಗು ರಂಗಿನ ಹೋಳಿ ಹಬ್ಬವನ್ನ ಸಿಲಿಕಾನ್​ ಸಿಟಿ ಮಂದಿ ಸಿಕ್ಕಾಪಟ್ಟೆ ಎಂಜಾಯ್​ ಮಾಡ್ತಾ ಆಚರಿಸಿದರು.

ಖುಷಿಯಿಂದ ಹೋಳಿ ಹಬ್ಬ ಆಚರಿಸಿದ ಬೆಂಗಳೂರು ಯುವಕರು

ವಿಶೇಷವಾಗಿ ಹೋಳಿ ಹಬ್ಬ ಹಿರಿಯರು ಕಿರಿಯರೆನ್ನೆದೆ ಎಲ್ಲರೂ ಒಟ್ಟಾಗಿ ಖುಷಿಯಿಂದ ಬಣ್ಣದೋಕುಳಿಯಲ್ಲಿ ಮಿಂದೇಳುತ್ತಾರೆ. ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

ಫ್ರೆಂಡ್ಸ್​, ಫ್ಯಾಮಿಲಿ ಜೊತೆ ಸೇರಿ ರಂಗು ರಂಗಿನ ಬಣ್ಣ ಎರಚಿ ಸಂಭ್ರಮಿಸುವವರು ಒಂದೆಡೆಯಾದರೆ, ಕಾಲೇಜು ಹುಡುಗ-ಹುಡುಗಿಯರಂತೂ ಒಬ್ಬರಿಗೊಬ್ಬರು ಬಣ್ಣ ಎರಚಿ ಕುಣಿದು ಕುಪ್ಪಳಿಸಿದರು. ಯಾವುದೇ ತಾರತಮ್ಯವಿಲ್ಲದೆ ಬಣ್ಣ ಹಚ್ಚಿ ಖುಷಿ ಖುಷಿಯಾಗಿರುವ ದೃಶ್ಯಗಳು ನಗರದೆಲ್ಲೆಡೆ ಕಂಡುಬಂದವು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.