ಬೆಂಗಳೂರು : ಸ್ಯಾಂಡಲ್ವುಡ್ನ ಪೊಗರು ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ಬ್ರಾಹ್ಮಣ ಸಮುದಾಯ ಹಾಗೂ ಫಿಲ್ಮ್ ಛೇಂಬರ್ ಸದಸ್ಯರ ನಡುವೆ ಗಲಾಟೆ ನಡೆದಿದೆ.
ಇಂದು ಬೆಳಗ್ಗೆ ಬ್ರಾಹ್ಮಣ ಸಮುದಾಯದ ಐವರು ಮತ್ತು ಫಿಲ್ಮ್ ಛೇಂಬರ್ನಿಂದ ಐವರು ಸಭೆ ನಡೆಸಿ, ಪೊಗರು ಚಿತ್ರ ವಿವಾದ ಬಗೆಹರಿಸಿಕೊಳ್ಳುವಂತೆ ತೀರ್ಮಾನ ಮಾಡಲಾಗಿತ್ತು.
ಇದನ್ನೂ ಓದಿ: ಸನ್ನಿ ಲಿಯೋನ್ ವಿದೇಶಿ ಪ್ರವಾಸ ತಡೆಯಲು ಸಾಧ್ಯವಿಲ್ಲ : ಕೇರಳ ಹೈಕೋರ್ಟ್
ಈಗ ಸಭೆ ನಡೆಯುವ ವೇಳೆ ನಾಲ್ಕು ಜನ ಹೊರತುಪಡಿಸಿ, ಉಳಿದವರು ಹೊರಹೋಗಿ ಎಂದು ಫಿಲ್ಮ್ ಛೇಂಬರ್ ಹೇಳಿದ್ದ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಮುದಾಯವರು ಗಲಾಟೆ ನಡೆಸಿದ್ದಾರೆ.
'ನಾವೇನು ಭಿಕ್ಷೆ ಬೇಡೋಕೆ ಬಂದಿದಿವಾ..?, ನಾವೆಲ್ಲರೂ ಇರ್ತೀವಿ' ಎಂದು ಬ್ರಾಹ್ಮಣ ಸಮುದಾಯ ಆಗ್ರಹಿಸಿತ್ತು. ಇದೇ ವೇಳೆ ಮತ್ತೊಂದು ಬ್ರಾಹ್ಮಣ ಸಮುದಾಯ ಫಿಲ್ಮ್ ಛೇಂಬರ್ಗೆ ಮತ್ತೆ ಹೈಡ್ರಾಮಾ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.